ಬೆಂಗಳೂರು, ಡಿಸೆಂಬರ್ 1: ಝೀರೋಧ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಡಬ್ಲ್ಯುಟಿಎಫ್ ಪೋಡ್‌ಕ್ಯಾಸ್ಟ್‌ನಲ್ಲಿ ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಾಸ್ಕ್ (ಎಲೋನ್ ಮಸ್ಕ್) ಎರಡು ಗಂಟೆ ಕಾಲ ಸಂದರ್ಶನ ಕೊಟ್ಟಿದ್ದಾರೆ. ಎಕ್ಸ್ ಹೆಸರು ಇಷ್ಟ ಎಂಬುದರಿಂದ ಹಿಡಿದು, ತಮ್ಮ ವೈಯಕ್ತಿಕ ಬದುಕು, ಭಾರತೀಯರ ಕೊಡುಗೆ, ಹಣ ಗಳಿಸುವ ಮಾರ್ಗ, ಪರಿಶ್ರಮ, ವೈಫಲ್ಯ ಇತ್ಯಾದಿ ಅನೇಕ ವಿಚಾರಗಳ ಬಗ್ಗೆ ಇಲಾನ್ ಮಾಸ್ಕ್ ಮಾತನಾಡಿದ್ದಾರೆ. ಭಾರತೀಯರ ಪಾಡ್ಕ್ಯಾಸ್ಟ್ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣ ಸಂದರ್ಶನಗಳಲ್ಲಿ ಇದೊಂದೆನಿಸಿದೆ.
ಹಣ ಗಳಿಸುವ ಇಲಾನ್ ಮಾಸ್ಕ್ ಐಡಿಯಾ
ಆಂಟ್ರಪ್ರನ್ಯೂರ್ ಅಥವಾ ನವೋದ್ಯಮಿಗಳಾಗಬಯಸುವ ಜನರಿಗೆ ಇಲಾನ್ ಮಾಸ್ಕ್ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಹಣ ಗಳಿಸಬೇಕೆಂದವರು ಹಣದ ಹಿಂದೆ ಬೀಳಬಾರದು. ಹಣವೇ ಅವರ ಹಿಂದೆ ಬರುವಂತೆ ಮಾಡಬೇಕು. ಸಂತೋಷದ ಹಿಂದೆ ಹೋದರೆ ಹಣ ತಾನೇ ಬರುತ್ತೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ಇಲಾನ್ ಮಾಸ್ಕ್ ಮಗನ ಹೆಸರು ಶೇಖರ್; ಈ ಭಾರತೀಯ ಹೆಸರಿಡಲು ಏನು ಕಾರಣ ಗೊತ್ತಾ?
‘ಆಂಟ್ರಪ್ರನ್ಯೂರ್ಗಳಾಗಬಯಸುವವರು ಸಮಾಜದಿಂದ ಪಡೆದಿದ್ದಕ್ಕಿಂತ ಹೆಚ್ಚಿನದನ್ನು ಕೊಡಬೇಕು. ನೀವು ಹಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮೌಲ್ಯಯುತವಾದದ್ದನ್ನು ಸೃಷ್ಟಿಸುವ ಬದಲು, ಉಪಯುಕ್ತವಾದ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸುವ ಗುರಿ ಹೊಂದಿರಬೇಕು. ಹಾಗೆ ಮಾಡಿದರೆ ಹಣವು ಖಂಡಿತವಾಗಿಯೂ ಹರಿದುಬರುತ್ತದೆ’ ಎಂದು ಇಲಾನ್ ಮಾಸ್ಕ್ ಅವರು ವಿವರಿಸಿದ್ದಾರೆ.
ಇನ್ಪುಟ್ಗಿಂತ ಔಟ್ಪುಟ್ ಮೌಲ್ಯಯುತವಾದ…
ಒಂದು ಬ್ಯುಸಿನೆಸ್ ಯಶಸ್ವಿಯಾಗಬೇಕಾದರೆ ಬಹಳ ಶ್ರಮ ಪಡಬೇಕು. ಈ ಹಾದಿಯಲ್ಲಿ ಎದುರಾಗುವುದು ಸಹಜ. ನೀವು ಹಾಕಿದ ಶ್ರಮಕ್ಕಿಂತ ಉತ್ತಮವಾದ ಉತ್ಪನ್ನ ಹೊರತರುವುದು ನಿಮ್ಮ ಗಮನದಲ್ಲಿರಲಿ. ಹಾಗಾದಾಗ ನೀವು ಮೌಲ್ಯ ಸೃಷ್ಟಿಕರ್ತರಾಗುತ್ತೀರಿ. ನಿಜವಾಗಿಯೂ ಬೇಕಾಗಿರುವುದು ಅದೇ ಎಂದು ನಿಖಿಲ್ ಕಾಮತ್ ಅವರ ಪೋಡ್‌ಕ್ಯಾಸ್ಟ್‌ನಲ್ಲಿ ಇಲಾನ್ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ನಿಂದ ದೇಶದ ಮೊತ್ತ ಮೊದಲ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ
ಸಾಮರ್ಥ್ಯ ಮೀರಿದ ಸಾಧನೆ ಮಾಡಿದವರಿಗೆ ನನ್ನ ಗೌರವ
ಪ್ರಾಬಲ್ಯ ತೋರಲು ಯಾರಾದರೂ ಬಯಸುವುದಿಲ್ಲ ಅವರಿಗೆ ನಾನು ಬಿಗ್ ಫ್ಯಾನ್. ತಾನು ಗಳಿಸಲು ಸಾಧ್ಯವಾಗದ ಹೆಚ್ಚಿನದನ್ನು ಪಡೆಯಲು ನಾನು ಅವನನ್ನು ಗೌರವಿಸುತ್ತೇನೆ ಎಂದು ಹೇಳಿರುವ ಇಲಾನ್ ಮಾಸ್ಕ್ ಅವರು ಭಾರತೀಯ ಆಂಟ್ರಪ್ರನ್ಯೂರ್‌ಗಳ ಆಕ್ರಮಣಕಾರಿ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂಬ ಸಲಹೆಯನ್ನು ಪರೋಕ್ಷವಾಗಿ ಹೇಳುತ್ತಾರೆ.
ಇಲಾನ್ ಮಾಸ್ಕ್ ಸಂದರ್ಶನದ ಪೂರ್ಣ ವಿಡಿಯೋ
ಈಗ ಹೊರಗಿದೆ @elonmusk pic.twitter.com/dQVLniUgWA
— ನಿಖಿಲ್ ಕಾಮತ್ (@nikhilkamathcio) ನವೆಂಬರ್ 30, 2025
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ