Headlines

ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು: ವೀಡಿಯೋ

ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು: ವೀಡಿಯೋ

ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು: ವೀಡಿಯೋ

ತನ್ನ ಮದುವೆಯ ದಿನ, ಬಾಲ್ಯದಿಂದ ತನ್ನನ್ನು ಸಾಕಿ ಬೆಳೆಸಿದ ಆಯಾ ಬಂದಿದ್ದನ್ನು ಕಂಡು ವಧುವೊಬ್ಬಳು ಭಾವುಕಳಾಗುತ್ತಾಳೆ. ‘ಅಮ್ಮ’ ಎಂದು ಕರೆಯುತ್ತಾ ಆಕೆಯನ್ನು ಅಪ್ಪಿ ಅಳುವ ವಧು ಮತ್ತು ಅವಳನ್ನು ಸಮಾಧಾನಿಸುವ ಆಯಾಳ ಈ ಭಾವನಾತ್ಮಕ ವಿಡಿಯೋ  ವೈರಲ್ ಆಗಿದೆ.

ಅನೇಕ ಶ್ರೀಮಂತ ಕುಟುಂಬಗಳಲ್ಲಿ ಪುಟ್ಟ ಮಕ್ಕಳು ಅಪ್ಪ ಅಮ್ಮನಿಗಿಂತ ಹೆಚ್ಚು ಆ ಮನೆಯ ಕೆಲಸದಾಳುಗಳ ಮೇಲೆ ಅವಲಂಬಿತರಾಗಿರುತ್ತಾರೆ. ಮಕ್ಕಳ ಪೋಷಕರು ಉದ್ಯೋಗ ಉದ್ಯಮ ಎಂದು ಮಕ್ಕಳನ್ನು ತಮ್ಮ ನಂಬಿಕಸ್ಥ ಕೆಲಸದಾಳುಗಳು ಅಥವಾ ಮಕ್ಕಳ ನೋಡಿಕೊಳ್ಳುವ ಆಯಾಗಳೊಂದಿಗೆ ಬಿಟ್ಟು ಹೊರಟು ಹೋಗುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಿಗೆ ತಮ್ಮನ್ನು ನೋಡಿಕೊಳ್ಳುವ ಆಯಾಗಳೆಂದರೆ ತಮ್ಮನ್ನು ಹೆತ್ತ ತಾಯಿಗಿಂತಲೂ ಹೆಚ್ಚು. ಅವರು ಆ ಮನೆಕೆಲಸದಾಕೆಯೊಂದಿಗೆ ಬಹಳ ತೀವ್ರವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುತ್ತಾರೆ.

ತಮ್ಮ ಭಾವನೆಗಳಿಗೆ ಸದಾ ಸ್ಪಂದಿಸುವ ತಾವು ಕೇಳಿದ್ದನ್ನೆಲ್ಲಾ ಮಾಡಿ ಕೊಡುವ ತಮ್ಮ ಜೊತೆ ಮಾತನಾಡುವ ಆಟವಾಡುವ ಹೀಗೆ ತಮ್ಮ ಆರೈಕೆ ಮಾಡುತ್ತಲೇ ವೃದ್ಧಾಪ್ಯಕ್ಕೆ ಕಾಲಿಡುವ ಆ ಆಯಾಗಳ ಮೇಲೆ ಮಕ್ಕಳಿಗೆ ತಾವು ಬೆಳೆದು ದೊಡ್ಡವರಾದರು ವಿಶೇಷವಾದ ಪ್ರೀತಿ ಇರುತ್ತದೆ. ತಾವು ದೊಡ್ಡವರಾಗುತ್ತಿದ್ದಂತೆ ಅವರು ಮನೆ ಬಿಟ್ಟು ಹೋದರು ಅವರನ್ನು ಕಂಡಾಗ ಮಕ್ಕಳಿಗೆ ಆಗುವ ಭಾವುಕತೆ ಅಷ್ಟಿಷ್ಟಲ್ಲ.

ಇದನ್ನೂ ಓದಿ:  ಹೇಳಿದ್ದಕ್ಕಿಂತ ಜಾಸ್ತಿ ಕೂದಲು ಕತ್ತರಿಸಿದ ಸಲೂನ್ :ಕೋರ್ಟ್ ಮೆಟ್ಟಿಲೇರಿ 25 ಲಕ್ಷ ಪರಿಹಾರ ಪಡೆದ ಯುವತಿ

ಅದೇ ರೀತಿ ಇಲ್ಲೊಬ್ಬಳು ಹುಡುಗಿ ತನ್ನ ವಿಶೇಷ ದಿನವಾದ ತನ್ನ ಮದುವೆ ದಿನ ತನ್ನನ್ನು ಬಾಲ್ಯದಿಂದ ಸಾಕಿ ಬೆಳೆಸಿದ ಆಯಾ ತನ್ನ ಮದುವೆ ದಿನ ಬಂದಿದ್ದನ್ನು ನೋಡಿ ತೀವ್ರವಾಗಿ ಭಾವುಕಳಾಗಿದ್ದು, ಈ ಭಾವನಾತ್ಮಕ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ. ತನ್ನ ಅಜ್ಜಿಯಂತೆ ಪ್ರೀತಿ ಮಾಡುವ ಆ ಮನೆ ಕೆಲಸದಾಕೆಯನ್ನು ನೋಡಿ ಅಕ್ಷರಶಃ ಆ ವಧು ಮಗುವಿನಂತೆ ಅತ್ತೇ ಬಿಟ್ಟಿದ್ದಾಳೆ.

ಇದನ್ನೂ ಓದಿ:

ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧರಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ

ತನ್ನ ಆಯಾಳನ್ನು ನೋಡಿ ನಿಮಗಾಗಿಯೇ ನಾನು ಕಾಯುತ್ತಿದೆ. ನೀವು ಬರುವುದಿಲ್ಲವೇನೋ ಎಂದು ಭಾವಿಸಿದೆ. ಹೇಗಿದ್ದೀರಿ ನಾನು ಮದುವೆಯಾಗುತ್ತಿದ್ದೀನಿ ನೋಡಿ ಅಮ್ಮ ಎಂದು ವಧು ಆಯಾಳನ್ನು ಅಮ್ಮ ಎಂದು ಸಂಬೋಧಿಸಿಯೇ ಮಾತನಾಡಿಸಿದ್ದಾರೆ. ಈ ವೇಳೆ ಆ ವಯಸ್ಸಾಗಿರುವ ಆಯಾ ಆಕೆಯನ್ನು ಸಮಾಧಾನಿಸುತ್ತಾ ಅಳಬೇಡ ಸದಾ ಖುಷಿಯಾಗಿರು ಎಂದು ಆಕೆಯ ಕಣ್ಣೀರು ಒರೆಸಿದ್ದಾರೆ. ಜೊತೆಗೆ ಆಕೆಯ ಜೊತೆಗೆ ಕುಳಿತು ಆಕೆಗೆ ಸಿಹಿ ತಿನಿಸಿದ್ದಾರೆ.

ಇದನ್ನೂ ಓದಿ: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ: ಹಾಸ್ಯನಟನ ಉದಾರತೆ ತೆರೆದಿಟ್ಟ ಗೆಳೆಯ ನವಾಜುದ್ದೀನ್ ಸಿದ್ಧಿಕಿ

ಈ ವೀಡಿಯೋ ನೋಡಿ ಅನೇಕರು ಭಾವುಕರಾಗಿದ್ದಾರೆ. ಈಕೆ ನಮ್ಮನ್ನು ಅಳುವಂತೆ ಮಾಡಿದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು ಈ ಹುಡುಗಿಗೆ ಒಳ್ಳೆಯ ಸಂಸ್ಕಾರವಿದೆ ಶುಭವಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನಾವು ಕೂಡ ಭಾವುಕರಾದೆವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
View this post on Instagram
A post shared by Times Now (@timesnow)

Source link

Leave a Reply

Your email address will not be published. Required fields are marked *