ಸಂಬಳ ಕಡಿಮೆಯಾಗಿರಲಿ, ಓದಿಗೆ ತಕ್ಕ ಉದ್ಯೋಗ (ಕೆಲಸ) ಇರಬೇಕು. ಆದರೆ ಕೆಲಸ ಸಿಕ್ಕ ಮೊದಲ ದಿನವೇ ನಿಮ್ಮ ಕೆಲಸ ಹೋದರೆ ಹೇಗಿರಬಹುದು. ಒಮ್ಮೆಯಾದ್ರೂ ಇಂತಹ ಪರಿಸ್ಥಿತಿ ಎದುರಾದ್ರೆ ಹೇಗಿರಬಹುದು ಎಂದು ನೀವು ಕೇಳಿದ್ದೀರಾ. ಒಂದು ವೇಳೆ ಕಂಪನಿಯ ಉದ್ಯೋಗದಿಂದ ಕೆಲಸದಿಂದ ತೆಗೆದು ಹಾಕಲು ಕಾರಣವೇ ಕೆಲಸ ಸರಿಯಾಗಿ ಮಾಡದೇ ಇರುವುದೇ ಆಗಿರುತ್ತದೆ. ಆದರೆ ಈ ಉದ್ಯೋಗಿ ವಿಚಾರದಲ್ಲಿ ಹಾಗೆ ಆಗಿಲ್ಲ. ಕೆಲಸಕ್ಕೆ ಸೇರಿದ ಮೊದಲ ದಿನವೇ ಕಾಫಿ ಬೀಜಗಳನ್ನು (ಕಾಫಿ ಬೀನ್ಸ್) ಕದ್ದಿದ್ದು ಕಂಪನಿಯ ಹಿಂದೆ ಮುಂದೆ ನೋಡದೆ ಉದ್ಯೋಗದಿಂದ ಕೆಲಸದಿಂದ ತೆಗೆದುಹಾಕಲಾಗಿದೆ. ಹೌದು, ಮೊದಲ ದಿನವೇ ವಜಾಗೊಳಿಸಲ್ಪಟ್ಟ ಉದ್ಯೋಗಿಗೆ ಸಂಬಂಧಿಸಿದ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
ಕೆಲಸಕ್ಕೆ ಸೇರಿದ ಮೊದಲೇ ದಿನವೇ ಜಾಬ್ ಕಳೆದುಕೊಂಡ ಉದ್ಯೋಗಿ
r/ coworkerstories ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಂಪನಿಗೆ ಸೇರಿದ ಉದ್ಯೋಗವನ್ನು ಮೊದಲ ದಿನವೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಅಚ್ಚರಿಕಾರಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್ನಲ್ಲಿ ಈ ಘಟನೆ ನಿಜಕ್ಕೂ ನನಗೆ ಅಚ್ಚರಿಯೆನಿಸಿತು. ನಮ್ಮ ಕಂಪನಿಯಲ್ಲಿ ಒಬ್ಬ ಮಹಿಳೆಯನ್ನು ಉದ್ಯೋಗಕ್ಕೆ ನೇಮಿಸಿಕೊಂಡೆವು. ಆಕೆಯ ಮೊದಲ ದಿನದ ಬೆಳಗಿನ ತರಬೇತಿ ಪ್ರಕ್ರಿಯೆಯಲ್ಲಿ ತುಂಬಾ ಕಠಿಣ ಎಂದೆನಿಸಿತು. ಆದರೆ ಆ ಬಳಿಕ ನಿಭಾಯಿಸಲು ಕಷ್ಟವಾಗಲಿಲ್ಲ. ಆದರೆ ಈ ವಿರಾಮದ ಸಮಯದಲ್ಲಿ ಆಕೆ ಕಾಫಿ ಮೇಕರ್ ಪಕ್ಕದಲ್ಲಿದ್ದ ಎರಡು ದೊಡ್ಡ ಚೀಲಗಳ ಸ್ಟಾರ್ ಬಾಕ್ಸ್ ಕಾಫಿಬೀಜಗಳತ್ತತೋರಿಸಿ ಇವು ಯಾರವು ಎಂದು ಅಲ್ಲಿದ್ದ ಎಲ್ಲರ ಬಳಿ ಕೇಳಿದಳು.
ಪೋಸ್ಟ್ ವೈರಲ್ ಇಲ್ಲಿದೆ ನೋಡಿ
ಎಲ್ಲಾ ಕಾಫಿ byu/MiddleComfortable158 incoworkerstories ಅನ್ನು ಕದ್ದಿದ್ದಕ್ಕಾಗಿ ಹೊಸ ಬಾಡಿಗೆಯನ್ನು ಮೊದಲ ದಿನ ವಜಾ ಮಾಡಲಾಗಿದೆ
ಆ ವೇಳೆ ಅಲ್ಲೇ ಇದ್ದ ಒಬ್ಬ ವ್ಯಕ್ತಿ ಇದು ಕಂಪನಿಯದು ಯಾರು ಬೇಕಾದರೂ ತೆಗೆದುಕೊಳ್ಳುತ್ತಾರೆ. ಅದಕ್ಕೆ ಉದ್ಯೋಗಿ ಹೌದಾ ಎಂದು ಹೇಳಿ ಸುಮ್ಮನಾಗಿದ್ದಾಳೆ. ಈ ಕಾಫಿ ಬೀಜಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳುತ್ತೇನೆ ಎಂದು ಪ್ಲಸ್ ಪಾಯಿಂಟ್ ಆಗಿದ್ದಾಳೆ. ಹೀಗಾಗಿ ಆಕೆಯೂ ಮನೆಗೆ ಹೋಗುವಾಗ ಕಾಫಿಬೀಜಗಳಿರುವ ಎರಡು ದೊಡ್ಡ ಚೀಲಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾಳೆ. ಈ ಕೆಲಸ ಮಾಡಿದ ಈ ಮಹಿಳೆ ಕಂಪನಿಯ ಉದ್ಯೋಗಿಗಳಿಗೆ ಕಾಫಿಯೇ ಇಲ್ಲ. ಮರುದಿನ ಆಕೆ ಕೆಲಸಕ್ಕೆ ಬಂದಾಗ ಮ್ಯಾನೇಜರ್ ಕಚೇರಿಗೆ ತೆರಳಿದ್ದು, ಆದಾದ ಹತ್ತು ನಿಮಿಷಕ್ಕೆ ಮನೆಗೆ ಹೋಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕಾರ್ಪೋರೇಟ್ ಕೆಲಸ ತೊರೆದು ಹೋಮ್ ಸ್ಟೇಟನಲ್ಲಿ ಯಶಸ್ಸು ಕಂಡ ಯುವಕ
ಈ ಪೋಸ್ಟ್ ವೈರಲ್ ಆಗಿರುವ ಹೆಚ್ಚಿನ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಕಾಫಿ ಅಂದ್ರೆ ಆಕೆಗೆ ಇಷ್ಟ ಆಗುತ್ತೆ, ಹೀಗಾಗಿ ಆಕೆ ಮಾಡಿರಬಹುದು. ಕೆಲಸದಿಂದ ತೆಗೆದದ್ದು ಅಷ್ಟೇನು ಸಮಂಜಸವಲ್ಲ ಎಂದು ಹೇಳಿದ್ದಾರೆ. ಯಾರಾದರೂ, ಯಾರಾದರೂ ಅಷ್ಟು ಮೂರ್ಖರಾಗಲು ಹೇಗೆ ಸಾಧ್ಯ? ಒಳ್ಳೆಯ ಸುದ್ದಿ ಏನೆಂದರೆ, ಯಾವುದೇ ಮುಖ್ಯವಾದ ಜವಾಬ್ದಾರಿಯನ್ನು ಮಾಡುವ ಮೊದಲೇ ಅವಳಿಗೆ ತನ್ನನ್ನು ಒಂದು ಕೆಲಸದಿಂದ ವಜಾ ಆಗುವಂತೆ ಮಾಡಿಕೊಂಡಿದ್ದಾಳೆ. ಮತ್ತೊಬ್ಬ ಬಳಕೆದಾರ ಕಾಫಿ ಬೀಜಗಳನ್ನು ತೆಗೆದುಕೊಂಡು ಹೋಗಿದ್ದಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆಯೇ, ಅವಳು ಸಿಕ್ಕಿ ಬಿದ್ದಾಗ ಅವಳು ಹೇಗೆ ಪ್ರತಿಕ್ರಿಯಿಸಿದಳು ಎಂಬ ಬಗ್ಗೆ ನಾನು ಆಶ್ಚರ್ಯ ಪಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:21 pm, ಬುಧವಾರ, 5 ನವೆಂಬರ್ 25