Headlines

Cine Express: ಪ್ರಭಾಸ್ ‘ರಾಜಾಸಾಬ್’ ರಿಲೀಸ್​​ ಡೇಟ್ ಬದಲಾಗಿಲ್ಲ: ಹಕ್ ಸಿನಿಮಾ ರಿಲೀಸ್​ಗೆ ಕಾನೂನು ಕಂಟಕ | Emraan Hashmi Haq Legal Trouble Prabhas The Rajasab Release Date Gvd

Cine Express: ಪ್ರಭಾಸ್ ‘ರಾಜಾಸಾಬ್’ ರಿಲೀಸ್​​ ಡೇಟ್ ಬದಲಾಗಿಲ್ಲ: ಹಕ್ ಸಿನಿಮಾ ರಿಲೀಸ್​ಗೆ ಕಾನೂನು ಕಂಟಕ | Emraan Hashmi Haq Legal Trouble Prabhas The Rajasab Release Date Gvd


ಇಮ್ರಾನ್ ಹಶ್ಮಿ ಮತ್ತು ಯಾಮಿ ಗೌತಮ್ ಅಭಿನಯದ ನೈಜ ಕಥೆ ಆಧಾರಿತ ‘ಹಕ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರೋದು ಫಿಕ್ಸ್ ಆಗಿದೆ. ಆಧ್ರೆ ರಿಲೀಸ್ ಹೊಸ್ತಿಲಲ್ಲಿ ಸಿನಿಮಾಗೆ ಕಾನೂನು ಕಂಟಕ ಎದುರಾಗಿದೆ. ಈ ಸಿನಿಮಾ ಶಾಹ್ ಬಾನೋ ಬೇಗಂ ಅವರ ನೈಜ ಕಥೆ ಆಧರಿಸಿದ್ದು, ಇತ್ತೀಚೆಗಷ್ಟೆ ಶಾಹ್ ಬಾನೋ ಬೇಗಂ ಅವರ ಪುತ್ರಿ ಸಿದ್ದೀಖಾ ಬೇಗಂ ಚಿತ್ರದ ನಿರ್ಮಾಪಕರಿಗೆ ಲೀಗಲ್ ನೋಟಿಸ್‌ನೀಡಿದ್ದಾರೆ. ತಮ್ಮ ಕುಟುಂಬದ ಅನುಮತಿ ಪಡೆಯದೇ ತಾಯಿಯ ಜೀವನಕಥೆಯನ್ನ ತೆರೆಯ ಮೇಲೆ ಈ ಚಿತ್ರತಂಡ ತರ್ತಾ ಇದೆ ಅಂತ ಆರೋಪ ಮಾಡಿದ್ದಾರೆ. ಸೋ ಈ ಕಾನೂನು ಕಂಟಕದ ನಡುವೆ ಸಿನಿಮಾ ತೆರೆಗೆ ಬರುತ್ತಾ ಕಾದುನೋಡಬೇಕಿದೆ.

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಹುತೇಕ ಸೌತ್​ನ ಬಿಗ್ ಸ್ಟಾರ್ ಗಳ ಜೊತೆಗೆ ನಟನೆ ಮಾಡಿದ್ದಾರೆ. ಇತ್ತೀಚಿಗೆ ದಿ ಗರ್ಲ್​​ಫ್ರೆಂಡ್ ಪ್ರಚಾರಕ್ಕಾಗಿ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಬಂದ ವೇಲೆ ರಶ್ಮಿಕಾಗೆ ಫ್ಯಾನ್ಸ್ ನಾನಾ ಪ್ರಶ್ನೆ ಕೇಳಿದ್ದಾರೆ. ಆ ಪೈಕಿ ಅಭಿಮಾನಿಯೊಬ್ಬರು ಪ್ರಭಾಸ್ ಜೊತೆ ಯಾವಾಗ ನಟಿಸ್ತಿರಿ ಅನ್ನೋ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರೋ ರಶ್ಮಿಕಾ, ನಾನು ಪ್ರಭಾಸ್ ಜೊತೆಗೆ ನಟಿಸೋಕೆ ಕಾತುರಳಾಗಿದ್ದೀನಿ , ಅವರೊಬ್ಬ ಅದ್ಭುತ ನಟ ಅಂತ ಉತ್ತರಿಸಿದ್ದಾರೆ. ಫ್ಯಾನ್ಸ್ ಪ್ರಭಾಸ್-ರಶ್ಮಿಕಾ ಜೋಡಿ ನೋಡ್ಲಿಕ್ಕೆ ಕಾತುರರಾಗಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ನಟನೆಯ ರೊಮ್ಯಾಂಟಿಕ್ ಹಾರರ್ ಕಾಮಿಡಿ ಸಿನಿಮಾ ದಿ ರಾಜಾಸಾಬ್ ರಿಲೀಸ್ ಮತ್ತೆ ಪೋಸ್ಟ್ ಪೋನ್ ಆಗಲಿದೆ ಅನ್ನೋ ಸುದ್ದಿಹರಿದಾಡ್ತಾ ಇದ್ವು. ಆದ್ರೆ ಇದಕ್ಕೆ ಫುಲ್ ಸ್ಟಾಪ್ ಇಟ್ಟಿರೋ ಪೀಪಲ್ ಮಿಡಿಯಾ ಫ್ಯಾಕ್ಟರಿ, ಸಿನಿಮಾ ಮೊದಲೇ ಅನೌನ್ಸ್ ಆದಂತೆ ಜನವರಿ 9, 2026ಕ್ಕೆ ತೆರೆಗೆ ಬರೋದು ಫಿಕ್ಸ್ ಎಂದಿದೆ. ಸತತ ಆಕ್ಷನ್ ಸಿನಿಮಾಗಳಲ್ಲಿ ನಟಿಸಿರೋ ಪ್ರಭಾಸ್ ಫಾರ್ ಎ ಚೇಂಜ್ ಈ ಸಿನಿಮಾದಲ್ಲಿ ವಿಭಿನ್ನ ಅವತಾರದಲ್ಲಿ ಮಿಂಚಿದ್ದಾರೆ. ಸಂಜಯ್ ದತ್, ಬೊಮನ್ ಇರಾನಿ ಕೂಡ ಈ ಚಿತ್ರದ ತಾರಾಬಳಗದಲ್ಲಿ ಇದ್ದು, ಮಾಳವಿಕಾ ಮನಮೋಹನ್ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ.



Source link

Leave a Reply

Your email address will not be published. Required fields are marked *