ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಶೌರ್ಯ ಪರಂಪರೆ ಸಾಲಿಗೆ ರೇಸ್

ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಶೌರ್ಯ ಪರಂಪರೆ ಸಾಲಿಗೆ ರೇಸ್

ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಶೌರ್ಯ ಪರಂಪರೆ ಸಾಲಿಗೆ ರೇಸ್

ಕುಣಿಗಲ್ ಕುದರೆ ಎಂದೇ ಖ್ಯಾತಿ ಸ್ಥಳಕ್ಕೆ ಬೆಂಗಳೂರು ಟರ್ಫ್ ಕ್ಲಬ್ ಶಿಫ್ಟ್, ಇದೀಗ ಬೆಂಗಳೂರಿನ ಐತಿಹಾಸಿಕ ರೇಸ್ ಕೋರ್ಸ್ ಶೌರ್ಯ ಪರಂಪರೆ ಸಾಲಿಗೆ ಸೇರಿಕೊಳ್ಳುತ್ತಿದೆ. ಬ್ರಿಟೀಷರು ಆರಂಭಿಸಿದ ರೇಸ್ ಕೋರ್ಸ್ ಇದೀಗ ಅದಕ್ಕೂ ಹಿಂದಿನ ಇತಿಹಾಸ ಜೊತೆ ಸೇರಿಕೊಳ್ಳುತ್ತಿದೆ.

ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನಲ್ಲಿ ಕೆಲ ವಾಹನಗಳ ಹಿಂದೆ ಕುಣಿಗಲ್ ಕುದುರೆ ಅನ್ನೋ ಬರಹ ನೋಡಿರುತ್ತೀರಿ. ತಮ್ಮ ಊರಿನ ಹೆಸರಿನ ಮುಂದೆ ಬಾಯ್ಸ್ ಎಂದು ಸೇರಿಕೊಂಡಿರುವ ಬರಹ ಇದಲ್ಲ.ಈ ಹೆಸರು ಬರಲು ಕಾರಣವಿದೆ. ಕುಣಿಗಲ್ ಕುದರೆ ಬ್ರಿಟೀಷರ ಕಾಲದಿಂದಲೂ ಇದೆ. ಇದೀಗ ಇದೇ ಕುಣಿಗಲ್ ಕುದುರೆ ಖ್ಯಾತಿ ಸ್ಥಳಕ್ಕೆ ಬೆಂಗಳೂರಿನ ಟರ್ಫ್ ಕ್ಲಬ್ ಸ್ಥಳಾಂತರಗೊಳ್ಳುತ್ತಿದೆ.

ಕುಣಿಗಲ್‌ನಲ್ಲಿರುವ ರೇಸ್ ಸ್ಟಡ್ ಫಾರ್ಮ್‌ಗೆ ಬೆಂಗಳೂರಿನ ಟರ್ಫ್ ಕ್ಲಬ್ (ರೇಸ್ ಕೋರ್ಸ್) ಶಿಫ್ಟ್ ಆಗುತ್ತಿದೆ. ಈ ಮೂಲಕ ಕುದುರೆ ರೇಸ್ ಇದೀಗ ಇತಿಹಾಸದೊಂದಿಗೆ ಸೇರಿಕೊಳ್ಳುತ್ತಿದೆ. ಕುಣಿಗಲ್ ಕುದುರೆ ಎಂಬ ಹೆಸರು ಬಂದಿದ್ದು, ಇಲ್ಲಿನ ಕುದುರೆ ಫಾರ್ಮ್‌ನಿಂದ. ವಿಶ್ವದ ಅತ್ಯಂತ ಹಳೇಯ ಕುದುರೆ ತಳಿ ಫಾರ್ಮ್‌ಗಳಲ್ಲಿ ಒಂದಾಗಿದೆ. ರಾಜಮಹಾರಾಜರ ಕಾಲದಿಂದ ಇದ್ದ ಕುಣಿಗಲ್ ಕುದರೆ ತಳಿಗಳಿಗೆ, ಅಧಿಕೃತ ಫಾರ್ಮ್ ರೂಪ ಕೊಟ್ಟಿದ್ದು, ಟಿಪ್ಪು ಸುಲ್ತಾನ ಕಾಲದಲ್ಲಿ ಎಂದು ಇತಿಹಾಸ ಹೇಳುತ್ತದೆ.

ರಾಜ ಮಹಾಜಾರದರ ಕಾಲದಿಂದಲೂ ಕುಣಿಗಲ್‌ ಸಾಮಾನ್ಯವಾಗಿ ಕುದುರೆ ಸಾಕಾಣಿಕೆ, ತಳಿಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ಊರು. ಇಲ್ಲಿ ಯುದ್ಧಕ್ಕೆ ಬೇಕಾದ, ರಾಜ ಮಹಾರಾಜರಿಗೆ ಪ್ರಯಾಣಕ್ಕೆ ಸೇರಿದಂತೆ ಹಲವು ಉಪಯೋಗಕ್ಕೆ ಬೇಕಾದ ಕುದುರೆ ತಳಿಗಳನ್ನು ಸಂಸತಿ ಸಂವರ್ಧನಾ ಮಾಡಲಾಗುತ್ತಿತ್ತು. 1790ರಲ್ಲಿ ಟಿಪ್ಪು ಸುಲ್ತಾನ ಇಲ್ಲಿ ಅಧಿಪತ್ಯ ಸಾಧಿಸಿದ ಬಳಿಕ ತನಗೆ ಬೇಕಾದ ಕುದುರೆಗಳ ಪೂರೈಕೆಗೆ ಕುಣಿಗಲ್ ಫಾರ್ಮ್ ಆರಂಭಿಸಿದ್ದ ಎಂದು ಇತಿಹಾಸ ಹೇಳುತ್ತದೆ.

ಟಿಪ್ಪು ಸುಲ್ತಾನ ಬಳಿಕ ಈ ಕುದುರೆ ಫಾರ್ಮ್‌ನ್ನು ಬ್ರಟಿಷರ್ ವಶಪಡಿಸಿಕೊಂಡು, ತಮ್ಮ ರೆಜಿಮೆಂಟ್‌ಗಳಿಗೆ ಕುದುರೆ ಪೂರೈಕೆಗೆ ಬಳಸಿಕೊಂಡರು.1886ರಲ್ಲಿ ಕುಣಿಗಲ್ ಫಾರ್ಮ್‌ಗೆ ಬ್ರಿಟಿಷರ ಮೂಲಕ ವಿದೇಶಗಳಿಂದ ಕುದುರೆ ಆಮದು ಆರಂಭಗೊಂಡಿತು. ಯುಕೆ, ಆಸ್ಟ್ರೇಲಿಯಾದಿಂದ ಇಲ್ಲಿಗೆ ಕುದುರೆ ಆಮದು ಮಾಡಿ ಸಂತತಿ ವೃದ್ಧಿಸಲಾಗುತ್ತಿತ್ತು.

ಸ್ವಾತಂತ್ರ್ಯವರೆಗೆ ಬ್ರಿಟಿಷರೇ ಕುಣಿಗಲ್ ಕುದರೆ ಮಾಲೀಕರಾಗಿದ್ದರು. ಬಳಿಕ ಮೈಸೂರು ಮಹಾರಾಜರ ಸುಪರ್ದಿಗೆ ಬಂದಿತ್ತು. 1948ರಲ್ಲಿ ಮೈಸೂರು ಸಂಸ್ಥಾನ ಸರ್ಕಾರದ ಅಧೀನಕ್ಕೆ ಒಳಪಡುವ ಮೊದಲು ಕುಣಿಗಲ್ ಕುದರೆ ಫಾರ್ಮ್‌ನ್ನು ಮಿಲಿಟರಿ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.

ಕುಣಿಗಲ್ ಕುದರೆ ಫಾರ್ಮ್‌ಗೆ ಇದೀಗ ಬೆಂಗಳೂರು ಟರ್ಫ್ ಕ್ಲಬ್ ರಂಗು ಸೇರಿಕೊಂಡಿದೆ. ಬೆಂಗಳೂರಿನಿಂದ ರೇಸ್ ಕೋರ್ಸ್ ಸಂಪೂರ್ಣವಾಗಿ ಕುಣಿಗಲ್ ಫಾರ್ಮ್‌ಗೆ ಸ್ಥಳಾಂತರಗೊಳ್ಳುತ್ತಿದೆ. ಬರೋಬ್ಬರಿ 100 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ರೇಸ್ ಕೋರ್ಸ್ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇನ್ನು ರೇಸ್ ಏನಿದ್ದರು ಕುಣಿಗಲ್ ಕುದರೆ ನಾಡಿನಲ್ಲಿ.

ಬೆಂಗಳೂರು ಟರ್ಫ್ ಕ್ಲಬ್ ರಂಗು

Source link

Leave a Reply

Your email address will not be published. Required fields are marked *