ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಟೆಕ್ಕಿ ಆತ್ಮಹತ್ಯೆ? ಹಸೆಮಣೆ ಏರಬೇಕಿದ್ದವಳ ದಾರುಣ ಅಂತ್ಯ

ಜ್ಯೋತಿಷಿ ಭವಿಷ್ಯಕ್ಕೆ ಹೆದರಿ  ಟೆಕ್ಕಿ ಆತ್ಮಹತ್ಯೆ? ಹಸೆಮಣೆ ಏರಬೇಕಿದ್ದವಳ ದಾರುಣ ಅಂತ್ಯ


ನೆಲಮಂಗಲ, ಫೆಬ್ರವರಿ 28: ಇಷ್ಟಪಟ್ಟ ಹುಡುಗನ ಜೊತೆ ಹಸೆಮಣೆ ಏರಬೇಕಿದ್ದ ಯುವತಿಯೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾಜ್ಯೋತಿ (29) ಮೃತಳಾಗಿದ್ದರೆ, ಕೆಲವು ದಿನಗಳ ಹಿಂದೆ ಈಕೆ ಅಲ್ಪಾಯುಷಿ ಎಂದು ಜ್ಯೋತಿಷಿಯೋರ್ವರು ಹೇಳಿದ್ದರಂತೆ. ಇದೇ ಕಾರಣಕ್ಕೆ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ವಿದ್ಯಾಜ್ಯೋತಿ ಅಲ್ಪಾಯುಷಿ ಎಂದಿದ್ದ ಜ್ಯೋತಿಷಿ, ಅದಕ್ಕಾಗಿ 9 ದಿನ ಪೂಜೆ ಮಾಡುವಂತೆ ತಾಕೀತು ಮಾಡಿದರು. 9ನೇ ದಿನ ದೇವರಿಗೆ ತಾಳಿ ಕೊಡುವಂತೆ ತಿಳಿಸಿದ್ದರು. ಈ ಹಿನ್ನೆಲೆ ಮಾರಮ್ಮ ದೇವರಿಗೆ ತಾಳಿ ಕೊಡಲು ಕುಟುಂಬ ಸಿದ್ಧತೆ ನಡೆಸಿತ್ತು. ಊಟದ ನಂತರ ಯುವತಿ ರೂಮ್ ಸೇರಿದ್ದು, ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಈಕೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದಳು. ಹೀಗಾಗಿ ಆಕೆ ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು. ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ಬಳಿಕ 8 ಗಂಟೆ ವೇಳೆಗೆ ದೇವಸ್ಥಾನಕ್ಕೆ ತೆರಳಬೇಕಿದ್ದ ಹಿನ್ನೆಲೆ ವಿದ್ಯಾಜ್ಯೋತಿ ತಾಯಿ ಮತ್ತೆ ಕರೆದಿದ್ದಾರೆ. ಈ ವೇಳೆಯೂ ಆಕೆ ರೂಮಿನ ಬಾಗಿಲು ತೆಗೆಯದ ಹಿನ್ನೆಲೆ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಲಾರಿ; ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ

ಮೃತ ವಿದ್ಯಾಜ್ಯೋತಿಯನ್ನು ಆಕೆಯ ಪ್ರಿಯತಮೆ ಅವಳ ಇಷ್ಟದಂತೆ ಬೆಳೆಸಿದ್ದರು. ಕೊಡಗು ಮೂಲದ ಯುವಕನನ್ನ ಈಕೆ ಪ್ರೀತಿಸಿದ್ದಳು ಎನ್ನಲಾಗಿದ್ದಳು, ವಿದ್ಯಾ ಇಷ್ಟದಂತೆ ಎರಡೂ ಮನೆಯವರು ಮದುವೆಗೆ ಕೂಡ ಒಪ್ಪಿದ್ದರು. ಆದರೆ ಹಸೆಮಣೆ ಏರುವ ಮುನ್ನವೇ ಈಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 6:40 am, ಶನಿ, 28 ಫೆಬ್ರವರಿ 26



Source link

Leave a Reply

Your email address will not be published. Required fields are marked *