
ಭಾರತದಲ್ಲಿ ರಿಟೈರ್ಮೆಂಟ್ ಪ್ಲಾನಿಂಗ್ (ನಿವೃತ್ತಿ ಯೋಜನೆ) ಮಾಡುವವರ ಸಂಖ್ಯೆ ಬಹಳ ಕಡಿಮೆ. ಮಧ್ಯ ಮಧ್ಯದಲ್ಲಿ ಬರುವ ಖರ್ಚು ವೆಚ್ಚಗಳಿಗೆ ಎಲ್ಲಾ ಸಂಪಾದನೆ ಸರಿ ಮಾಡಿಕೊಳ್ಳುವುದುಂಟು. ಆಫೀಸ್ನಲ್ಲಿ ಸಿಗುವ ಐಪಿಎಫ್, ಗ್ರಾಚುಟಿ ಹಣ ನಿವೃತ್ತಿ ನಂತರ ಸಾಕಾಗುತ್ತದೆ ಎಂಬುದು ಬಹಳ ಜನರ ಎಣಿಕೆ. ಆದರೆ, ಇದು ತಪ್ಪು ಎಣಿಕೆ. ಸದ್ಯ ರಿಟೈರ್ಮೆಂಟ್ ಪ್ಲಾನಿಂಗ್ ಮೂರು ರೀತಿಯ ಆಯ್ಕೆಗಳಿವೆ. ಒಂದು, ಐಪಿಎಫ್ ಹಣ. ಎರಡನೆಯದು ಎನ್‌ಪಿಎಸ್. ಮೂರನೆಯದು ಮ್ಯೂಚುವಲ್ ಫಂಡ್. ಮೂರನ್ನೂ ಬಳಸಿ ಪ್ಲಾನಿಂಗ್ ಮಾಡಿಕೊಳ್ಳಬಹುದು.
ಐಪಿಎಫ್, ಎನ್ ಪಿಎಸ್ ಮತ್ತು ಮ್ಯೂಚುವಲ್ ಫಂಡ್ ಈ ಮೂರು ಕೂಡ ಬೇರೆ ಬೇರೆ ಪಾತ್ರ, ಸ್ವಭಾವವನ್ನು ಹೊಂದಿದೆ. ಐಪಿಎಫ್ನಲ್ಲಿ ಸಾಮಾನ್ಯವಾಗಿ ಶೇ. 8 ವರ್ಷ ಹೆಚ್ಚು ವಾರ್ಷಿಕ ಬಡ್ಡಿ ಸಿಗುತ್ತದೆ. ಆದರೆ, ಶೇ. 9ರ ಒಳಗೆ ಅದು ಇರುತ್ತದೆ. ಸಂಬಳದ ಜೀವನದಲ್ಲಿರುವವರಿಗೆ ಅದು ಮೂಲಭೂತವಾದ ರಿಟೈರ್ಮೆಂಟ್ ಸ್ಕೀಮ್.
ಇದನ್ನೂ ಓದಿ: ಗೋಲ್ಡ್ ಓಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ
ಎನ್ ಪಿಎಸ್ ಅಥವಾ ಪೆನ್ಷನ್ ಸ್ಕೀಮ್ ಸ್ವಲ್ಪ ಈಕ್ವಿಟಿ ಕಡೆ ಮುಖ ಮಾಡಿರುವ ಯೋಜನೆ. ಈಕ್ವಿಟಿ, ಬಾಂಡ್, ಗವರ್ನ್ಮೆಂಟ್ ಸೆಕ್ಯೂರಿಟಿಗಳಿಗೆ ಜೋಡಿತವಾಗಿದೆ. ಹೂಡಿಕೆದಾರರಿಗೆ ಆಯ್ಕೆಯಲ್ಲಿ ಫ್ಲೆಕ್ಸಿಬಿಲಿಟಿ ಸ್ವಲ್ಪ ಇರುತ್ತದೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳುವವರು ಪೂರ್ಣ ಈಕ್ವಿಟಿ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಎನ್ ಪಿಎಸ್‌ನಲ್ಲಿ ಹೂಡಿಕೆ ಶೇ. 10 ರಿಂದ 14ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಬಹುದು. ಗಮನಿಸಬೇಕಾದ ಸಂಗತಿ ಎಂದರೆ, ರಿಟೈರ್ ಆದಾಗ ಒಟ್ಟಾರೆ ಕಾರ್ಪಸ್ ನಿಂದ ಶೇ. 80ರಷ್ಟನ್ನು ವಿತ್ತರಾಯಲ್ ಮಾಡಬಹುದು. ಉಳಿದ ಶೇ. 20ರಷ್ಟನ್ನು ಆಯನುಟಿ ಪ್ಲಾನ್ ಖರೀದಿಗೆ ಬಳಸಲಾಯಿತು.
ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್‌ಗಳ ಎಫ್‌ಡಿಗಿಂತ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್
ಮ್ಯೂಚುವಲ್ ಫಂಡ್ನಲ್ಲಿ ಸ್ವಾತಂತ್ರ್ಯ
ಮ್ಯೂಚುವಲ್ ಫಂಡ್ಗಳು ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿದವು. ಅದರಲ್ಲೂ ಹೆಚ್ಚಿನ ಈಕ್ವಿಟಿ ಫಂಡ್‌ಗಳು ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್ ಕೊಟ್ಟಿವೆ. ರಿಟೈರ್ಮೆಂಟ್ ಪ್ಲಾನಿಂಗ್‌ಗೆ ಈ ಫಂಡ್‌ಗಳು ಬಹಳ ಉಪಯುಕ್ತವಾಗುತ್ತವೆ. ದೀರ್ಘಾವಧಿಯಲ್ಲಿ ಇವುಗಳು ಸಾಮಾನ್ಯವಾಗಿ ಶೇ. 12 ರಿಂದ ಶೇ. 15ರಷ್ಟು ರಿಟರ್ನ್ ಕೊಡಬಲ್ಲುವು. ಅಂತಿಮ ಹಣಕ್ಕೆ ಶೇ. 12.5ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯವಾಗುತ್ತದೆ ಬಿಟ್ಟರೆ ಹೆಚ್ಚಿನ ರಿಟರ್ನ್ಸ್ ನಿಮ್ಮ ಕೈ ಸೇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ