Headlines

ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು?

ಇಪಿಎಫ್ ಅಕೌಂಟ್​ಗೆ ಜಮೆ ಆಗಲಿದೆ ಈ ವರ್ಷದ ಬಡ್ಡಿ ಹಣ; ಬ್ಯಾಲನ್ಸ್ ಹೇಗೆ ಪರಿಶೀಲಿಸುವುದು?


ಜನವರಿ, ಮಾರ್ಚ್ 2: ಈ ಹಣಕಾಸು ವರ್ಷಕ್ಕೆ ಐಪಿಎಫ್ ಅಕೌಂಟ್‌ಗಳಿಗೆ ನೀಡಬೇಕಿರುವ ಬಡ್ಡಿ ಹಣವನ್ನು (ಇಪಿಎಫ್ ಬಡ್ಡಿ ದರ) ನಿರ್ಧರಿಸಲಾಗಿದೆ. ವರದಿ ಪ್ರಕಾರ 2025-26ರ ವರ್ಷಕ್ಕೆ ಐಪಿಎಫ್ ಹಣಕ್ಕೆ ಶೇ. 8.25 ಬಡ್ಡಿದರ ನಿಗದಿ ಮಾಡಲಾಗಿದೆ. ಕಳೆದ ವರ್ಷವೂ ಇಷ್ಟೇ ಬಡ್ಡಿ ದರ ಇತ್ತು. ಸತತ ಮೂರು ವರ್ಷದಿಂದ ಐಪಿಎಫ್ ಒ ಶೇ. 8.25 ಬಡ್ಡಿ ನೀಡುತ್ತಿದೆ. 2022-23ರಲ್ಲಿ ಐಪಿಎಫ್ ವಾರ್ಷಿಕ ಬಡ್ಡಿ ದರ ಶೇ. 8.15 ಇತ್ತು. 2023-24ರಲ್ಲಿ ಶೇ. 8.25ಕ್ಕೆ ಏರಿಸಲಾಯಿತು. ನಂತರ ಅದೇ ದರವನ್ನು ಮುಂದುವರಿಸಿಕೊಂಡು ಬರಲಾಗಿದೆ.

ಐಪಿಎಫ್ ಒದ ಕೇಂದ್ರೀಯ ಟ್ರಸ್ಟ್‌ಗಳ ಮಂಡಳಿಯ (ಸಿಬಿಟಿ) 239 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಸಚಿವ ಉದ್ಯೋಗ ಮನಸುಖ್ ಮಾಂಡವೀಯ ನೇತೃತ್ವದಲ್ಲಿ ಈ ಸಭೆ ನಡೆಯಿತು.

ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್‌ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚು ಗೊತ್ತಾ?

ಹಿಂದಿನ ಅವಧಿಯಲ್ಲಿ ಇದ್ದ ಐಪಿಎಫ್ ಬಡ್ಡಿದರಗಳು

  • 2025-26: ಶೇ. 8.25
  • 2024-25: ಶೇ. 8.25
  • 2023-24: ಶೇ. 8.25
  • 2022-23: ಶೇ. 8.15
  • 2021-22: ಶೇ. 8.10
  • 2020-21: ಶೇ. 8.50
  • 2019-20: ಶೇ. 8.50
  • 2018-19: ಶೇ. 8.65
  • 2017-18: ಶೇ. 8.55
  • 2016-17: ಶೇ. 8.65
  • 2015-16: ಶೇ. 8.8
  • 2014-15: ಶೇ. 8.75
  • 2013-14: ಶೇ. 8.75
  • 2012-13: ಶೇ. 8.5
  • 2011-12: ಶೇ. 8.25

ಈ ಹಣಕಾಸು ವರ್ಷ ಮುಗಿದ ಬಳಿಕ ಐಪಿಎಫ್ ಹಣಕ್ಕೆ ಬಡ್ಡಿ ಹಣ ಸೇರ್ಪಡೆಯಾಗುತ್ತದೆ. ಅಂದರೆ ಮಾರ್ಚ್ ಕಳೆದ ನಂತರ ಐಪಿಎಫ್ ಬಡ್ಡಿ ಹಣ ಜಮೆ ಆಗುವುದನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಐಪಿಎಫ್ ಬಡ್ಡಿ ದರ ಹೇಗೆ ನಿರ್ಧಾರವಾಗುತ್ತದೆ?

ಐಪಿಎಫ್ ಒ ಸಂಸ್ಥೆ ತನ್ನ ನಿಧಿಯಲ್ಲಿರುವ ಎಲ್ಲಾ ಹಣವನ್ನು ನಿರ್ದಿಷ್ಟ ಹೂಡಿಕೆಗಳಿಗೆ ಹಾಕುತ್ತದೆ. ಅದರಲ್ಲಿ ಬಂದಿರುವ ಆದಾಯವನ್ನು ಆಧಾರವಾಗಿಟ್ಟುಕೊಂಡು ಬಡ್ಡಿ ಹಣ ನಿರ್ಧರಿಸುತ್ತದೆ. ಎಲ್ಲಾ ಐಪಿಎಫ್ ಅಕೌಂಟ್‌ನಲ್ಲಿರುವ ಹಣಕ್ಕೆ ಈ ಬಡ್ಡಿ ಹಣ ಸೇರ್ಪಡೆಯಾಗಿದೆ.

ನೀವು ಉಮಾಂಗ್ ಆಯಪ್ ಅಥವಾ ಐಪಿಎಫ್ ವೆಬ್ ಸೈಟ್‌ಗೆ ಹೋಗಿ ಲಾಗಿನ್ ಮಾಡಿ, ಅಲ್ಲಿ ಪಾಸ್‌ಬುಕ್ ಓಪನ್ ಮಾಡಿ ಪಿಎಫ್ ಬ್ಯಾಲನ್ಸ್ ಆಗಿ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *