Headlines

ಇದು ಈ ಉಪ್ಪಿನ ಮ್ಯಾಜಿಕ್​: ಒಣಗಿದ ಎಲೆಗಳೂ ಮತ್ತೆ ನಳನಳಿಸ್ತವೆ, ಹಣ್ಣು-ಹೂವುಗಳ ಇಳುವರಿಯೂ ಹೆಚ್ಚತ್ತೆ

ಇದು ಈ ಉಪ್ಪಿನ ಮ್ಯಾಜಿಕ್​: ಒಣಗಿದ ಎಲೆಗಳೂ ಮತ್ತೆ ನಳನಳಿಸ್ತವೆ, ಹಣ್ಣು-ಹೂವುಗಳ ಇಳುವರಿಯೂ ಹೆಚ್ಚತ್ತೆ

ಇದು ಈ ಉಪ್ಪಿನ ಮ್ಯಾಜಿಕ್​: ಒಣಗಿದ ಎಲೆಗಳೂ ಮತ್ತೆ ನಳನಳಿಸ್ತವೆ, ಹಣ್ಣು-ಹೂವುಗಳ ಇಳುವರಿಯೂ ಹೆಚ್ಚತ್ತೆ

ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ಗಿಡಗಳು ಎದುರಿಸುವ ಹಳದಿ ಎಲೆ, ಒಣಗುವಿಕೆ ಮುಂತಾದ ಸಮಸ್ಯೆಗಳಿಗೆ ಈ ಉಪ್ಪು ಒಂದು ಪರಿಣಾಮಕಾರಿ ಮದ್ದಾಗಿದೆ. ಈ ನೈಸರ್ಗಿಕ ಪೋಷಕಾಂಶವನ್ನು ನೀರಿನೊಂದಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸುವುದರಿಂದ ಗಿಡಗಳು ಆರೋಗ್ಯವಾಗಿ ಬೆಳೆದು, ಹೂವು-ಹಣ್ಣುಗಳ ಇಳುವರಿ ಹೆಚ್ಚಾಗುತ್ತದೆ.

ಈಗಂತೂ ಬಿರು ಬೇಸಿಗೆ ಆರಂಭವಾಗಿದೆ. ಗಿಡಗಳೆಲ್ಲಾ ಒಣಗಿ ಹೋಗುವ ಕಾಲ. ಒಂದು ದಿನ ನೀರು ಹಾಕಿಲ್ಲವೆಂದರೂ ಗಿಡಗಳು ಸಂಪೂರ್ಣ ಒಣಗಿಯೇ ಹೋಗುತ್ತವೆ. ಇದು ಬೇಸಿಗೆಯ ಸಮಸ್ಯೆ ಮಾತ್ರವಲ್ಲ, ಕೆಲವೊಂದು ಗಿಡಗಳು, ಎಲೆಗಳು ವಿಪರೀತ ಚಳಿಯಾಗಿದ್ದರೂ ಮುದುಡಿ ಹೋಗುವುದು ಇದೆ, ಹಳದಿಯಾಗುವುದು ಇದೆ. ಇವೆಲ್ಲದಕ್ಕೂ ಒಂದು ಮದ್ದು ಈ ಒಂದು ಉಪ್ಪು.

ಹಾಗೆಂದು ಇದು ತಿನ್ನುವ ಉಪ್ಪಲ್ಲ. ಹೆಸರು ಮಾತ್ರ ಸಾಲ್ಟ್​ ಎನ್ನುವುದು ಅಷ್ಟೇ. ಅದೇ Epsom Salt (ಎಪ್ಸಮ್​ ಸಾಲ್ಟ್​). ಇದು ಬಹುತೇಕ ಮಳಿಗೆಗಳಿಗೆ ಲಭ್ಯವಿದೆ. ಇಲ್ಲದೇ ಇದ್ದರೆ ಆನ್​ಲೈನ್​ನಲ್ಲಿ ಕೂಡ ಲಭ್ಯವಿದೆ. ಉಪ್ಪಿನ ಹಾಗೆಯೇ ಕಡಿಮೆ ಬೆಲೆಯಲ್ಲಿಯೇ ಇದು ಸಿಗುತ್ತದೆ. ಬಹಳಷ್ಟು ಕಂಪೆನಿಗಳು ಇವುಗಳನ್ನು ಸೇಲ್​ ಮಾಡುತ್ತವೆ. ಇದನ್ನು ಹಲವಾರು ಆರೋಗ್ಯ ಸಂಬಂಧಿ ಚಿಕಿತ್ಸೆಗಳಲ್ಲಿಯೂ ಬಳಸಲಾಗುತ್ತದೆ.

ಮೆಗ್ನೀಸಿಯಮ್ ಸಲ್ಫೇಟ್ ಎಂದೂ ಇದನ್ನು ಕರೆಯುತ್ತಾರೆ. ಗಿಡಗಳ ಬೆಳೆವಣಿಗೆಗೆ ಇದು ಅತ್ಯಂತ ನೈಸರ್ಗಿಕ ಪೋಷಕಾಂಶವಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಗಿಡಗಳು ಫ್ರೆಷ್​ ಆಗಿರುವುದು ಮಾತ್ರವಲ್ಲದೇ, ಹಣ್ಣು-ಹೂವುಗಳ ಇಳುವರಿ ಕೂಡ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಇದರಲ್ಲಿ ಇರುವ ಕ್ಲೋರೋಫಿಲ್.

ನೋಡಲು ಇದು ಸಾಮಾನ್ಯ ಪುಡಿ ಉಪ್ಪಿನ ರೀತಿ ಇರುತ್ತದೆ. 1 ಲೀಟರ್ ನೀರಿಗೆ 1-2 ಚಮಚ ಬೆರೆಸಿ ಒಂದು ಬಾಟಲಿಯಲ್ಲಿ ತುಂಬಿಸಿ ಗಿಡದ ಬುಡಕ್ಕೆ ಅಥವಾ ಎಲೆಗಳಿಗೆ ಸಿಂಪಡಿಸಬೇಕು. ಒಂದೆರಡು ಚಮಚ ಎಪ್ಸಮ್ ಸಾಲ್ಟ್​ ಅನ್ನು ಸುಮಾರು 4 ಲೀಟರ್ ನೀರಿನಲ್ಲಿ ಬೆರೆಸಿ, ತಿಂಗಳಿಗೊಮ್ಮೆ ಗಿಡದ ಬುಡಕ್ಕೆ ಹಾಕುವುದರಿಂದಲೂ ತುಂಬಾ ಅನುಕೂಲ ಇವೆ.. ಗಿಡಗಳು ಆರೋಗ್ಯವಾಗಿ ಮತ್ತು ದಟ್ಟವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ. ಹಣ್ಣು, ತರಕಾರಿ, ಹೂವುಗಳ ಇಳುವರಿಯೂ ಹೆಚ್ಚುತ್ತದೆ.

ಬೀಜಗಳು ಚೆನ್ನಾಗಿ ಮೊಳಕೆಯೊಡೆಯಲು ಮಣ್ಣಿನಲ್ಲಿ ಕೂಡ ಈ ಉಪ್ಪನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದಾಗಿದೆ. ಕಸಿ ಮಾಡಿದ ಗಿಡಗಳಿಗೂ ಇದರ ಬಳಕೆ ಉತ್ತಮ ಪ್ರಯೋಜನ ನೀಡುತ್ತದೆ. ಗಿಡವನ್ನು ನೆಡುವಾಗ, ಗುಂಡಿಯೊಳಗೆ 1 ಟೀಚಮಚ ಉಪ್ಪನ್ನು ಮಣ್ಣಿನೊಂದಿಗೆ ಬೆರೆಸಬಹುದು.

ಅತಿಯಾದರೆ ಅಮೃತವೂ ವಿಷ ಎನ್ನುವುದು ಗೊತ್ತಲ್ಲವೆ? ಹಾಗೆನೇ ಎಪ್ಸಮ್ ಸಾಲ್ಟ್​ ಅನ್ನು ಪದೇ ಪದೇ ಬಳಸಬೇಡಿ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಬಳಸಿದರೆ ಗಿಡಗಳ ಆರೋಗ್ಯ ಕಾಪಾಡಿಕೊಳ್ಳಬಹುದು.

Source link

Leave a Reply

Your email address will not be published. Required fields are marked *