
ಜನವರಿ, ಮಾರ್ಚ್ 10: ಪಶ್ಚಿಮ ಏಷ್ಯಾದಲ್ಲಿ ಪ್ರಪಂಚದಾದ್ಯಂತದ ತೈಲ ಮತ್ತು ಅನಿಲ ಬಿಕ್ಕಟ್ಟು ಪರಿಸ್ಥಿತಿ ಉದ್ಭವವಾಗಿದೆ. ಭಾರತಕ್ಕೂ ಇದರ ಬಿಸಿ ತಟ್ಟಿದೆ. ಪೆಟ್ರೋಲ್ ಮತ್ತು ಡೀಸಲ್ ಜೊತೆಗೆ ಅನಿಲದ ಅಭಾವ ಭಾರತಕ್ಕೆ ತಾಕತೊಡಗಿದೆ. ಈ ಸರ್ಕಾರವು ಅಗತ್ಯ ಸರಕುಗಳ ಕಾಯ್ದೆಯನ್ನು ಸಕ್ರಿಯಗೊಳಿಸಿದೆ. ಎಲ್ಪಿಜಿ ಮತ್ತು ನ್ಯಾಚುರಲ್ ಗ್ಯಾಸ್ ಬಳಸುವವರಿಗೆ ಆದ್ಯತೆ ಹಂಚಿಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ.
ಗೃಹ ಬಳಕೆ ಮತ್ತು ವಾಹನಗಳಿಗೆ ಅಗತ್ಯವಿರುವ ಎಲ್ಪಿಜಿ, ಪಿಎನ್ಜಿ ಮತ್ತು ಸಿಎನ್ಜಿ ಗ್ಯಾಸ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮೊದಲ ಆದ್ಯತೆ ಇರುತ್ತದೆ. ಉದ್ಯಮಗಳು, ರಸಗೊಬ್ಬರ ಕಾರ್ಖಾನೆಗಳಿಗೆ ಬೇಕಾದ ನೈಸರ್ಗಿಕ ಅನಿಲದ ಸರಬರಾಜಿಗೆ ನಂತರದ ಆದ್ಯತೆ ಇರುತ್ತದೆ.
ಇದನ್ನೂ ಓದಿ: ಎಲ್ಪಿಜಿ ಬಿಕ್ಕಟ್ಟು ಎದುರಿಸಲು ಹರ್ದೀಪ್ ಪುರಿ ಮತ್ತು ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ
ಭಾರತಕ್ಕೆ ಬೇಕಾದ ಶೇರ್. 30ರಷ್ಟು ನೈಸರ್ಗಿಕ ಅನಿಲವು ಹಾರ್ಮುಜ್ ಮಾರ್ಗದಿಂದ ಪೂರೈಕೆಯಾಗುತ್ತಿದೆ. ಈ ನೈಸರ್ಗಿಕ ಅನಿಲದ ಬಳಕೆಗೆ ಆದ್ಯತೆಗಳನ್ನು ನಿಗದಿಪಡಿಸಲಾಗಿದೆ. ಹಾರ್ಮುಜ್ನಿಂದ ಪೂರೈಕೆ ಸ್ಥಗಿತಗೊಂಡ ಇತರ ಮಾರ್ಗಗಳ ಮೂಲಕ ಭಾರತವು ನೈಸರ್ಗಿಕ ಅನಿಲವನ್ನು ಖರೀದಿಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿದೆ.
ನೈಸರ್ಗಿಕ ಅನಿಲ ಪೂರೈಕೆಯ ಆದ್ಯತೆಗಳು…
- ಮನೆಗಳಿಗೆ ಕೊಳವೆ ಗ್ಯಾಸ್ ಸರಬರಾಜು ನೂರಕ್ಕೆ ನೂರು.
- ವಾಹನಗಳಿಗೆ ಸಿಎನ್ಜಿ ಗ್ಯಾಸ್ ಸರಬರಾಜು ನೂರಕ್ಕೆ ನೂರು.
- ನ್ಯಾಚುರಲ್ ಗ್ಯಾಸ್ ಗ್ರಿಡ್ ಕನೆಕ್ಟ್ ಆಗಿರುವ ಯುವ ಉದ್ಯಮ, ಮ್ಯಾನುಫ್ಯಾಕ್ಚರಿಂಗ್, ಕೈಗಾರಿಕಾ ಗ್ರಾಹಕರು ಹಿಂದಿನ ಆರು ತಿಂಗಳ ಸರಾಸರಿ ಸರಬರಾಜಿನ ಶೇ 80 ರಷ್ಟನ್ನು ಪೂರೈಸಿದ್ದಾರೆ.
- ಕೈಗಾರಿಕೆ ಮತ್ತು ಕಮರ್ಷಿಯಲ್ ನ್ಯಾಚುರಲ್ ಗ್ಯಾಸ್ ಬಳಕೆದಾರರಿಗೆ ಹಿಂದಿನ ಆರು ತಿಂಗಳ ಸರಾಸರಿ ಸರಬರಾಜಿನ ಶೇ. 80ರಷ್ಟನ್ನು ಪೂರೈಸಲಾಗುವುದು.
- ರಸಗೊಬ್ಬರ ಘಟಕಗಳಿಗೆ ಆರು ತಿಂಗಳ ಸರಾಸರಿ ಸರಬರಾಜಿನ ಶೇ. 70ರಷ್ಟನ್ನು ಪೂರೈಸಲಾಗುವುದು.
ಇದನ್ನೂ ಓದಿ: ಎಲ್ಪಿಜಿ ಗ್ರಾಹಕರ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ
ದೇಶೀಯವಾಗಿ ಎಲ್ಪಿಜಿ ಉತ್ಪಾದನೆ ಆರಂಭಿಸಲು ಸರ್ಕಾರವು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ನಿರ್ದೇಶನ ನೀಡಿದೆ. ಪ್ರೊಪೆನ್, ಬ್ಯುಟೆನ್ನಂತಹ ಹೈಡ್ರೋಕಾರ್ಬನ್ ಸ್ಟ್ರೀಮ್ಗಳನ್ನು ಕೈಗಾರಿಕೆಗಳಿಗೆ ನೀಡುವ ಬದಲು ಎಲ್ಪಿಜಿ ಸಂಗ್ರಹಕ್ಕೆ ತಲುಪುವಂತೆಯೂ ನಿರ್ದೇಶನವನ್ನು ನೀಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ