ಅತ್ತ ಮದ್ವೆಯಾದ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲ: ಯುವತಿಯನ್ನು ಒಂಟಿ ಮಾಡಿದ ಆ ವಿಡಿಯೋ

ಅತ್ತ ಮದ್ವೆಯಾದ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲ: ಯುವತಿಯನ್ನು ಒಂಟಿ ಮಾಡಿದ ಆ ವಿಡಿಯೋ


ಚಿಕ್ಕಬಳ್ಳಾಪುರ, (ಡಿಸೆಂಬರ್ 22): ಮಾಜಿ ಪ್ರಿಯಕರನ (ಪ್ರೇಮಿ) ಕಿತಾಪತಿಯಿಂದಾಗಿ ಯುವತಿಯ ಸಂಸಾರವೇ ಹಾಳಾಗಿದ್ದು, ಯುವತಿ ಬೀದಿಗೆ ಬಿದ್ದಿದ್ದಾಳೆ. ಹೌದು..ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕೆಂಪನಹಳ್ಳಿ ಗ್ರಾಮದ 20 ವರ್ಷದ ಯುವತಿ, ಕಳೆದ 20 ದಿನಗಳ ಹಿಂದೆಯಷ್ಟೇ ಬೆಂಗಳೂರು ಮೂಲದ ಯುವಕನ ಜೊತೆ ಸಪ್ತಪದಿ ತುಳಿದು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಳು. ಆದರೆ ಹನುಮೂನ್ ಮುಗಿಯುವುದಕ್ಕೂ ಮುನ್ನ ಪ್ರಕರ ಅಂಬರೀಶ್, ಸ್ನೇಹಿತ ಸುನಿಲ್ ಹಾಗೂ ಪರಿಚಯಸ್ಥ ಭಾನುಪ್ರಿಯ ಕಳುಹಿಸು ಯುವತಿ ಹಾಗೂ ಅಂಬರೀಶ ಬೆಡ್ ರೂಮ್ ಹಂಚಿಕೊಂಡಿರುವ ವಿಡಿಯೋವನ್ನು ಆಕೆಯ ಗಂಡನಿಗೆ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪತಿ, 20 ದಿನದ ಹಿಂದಷ್ಟೇ ಮದ್ವೆಯಾಗಿದ್ದ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಇತ್ತ ವಿಡಿಯೋ ಹರಿಬಿಟ್ಟ ಪ್ರಿಯಕರ ಸಹ ಸೇರಿಸುತ್ತಿಲ್ಲ. ಇದರಿಂದ ಯುವತಿಯ ಸಂಸಾರ ಹಾಳಾಗಿದ್ದು, ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದಿದ್ದಕ್ಕೆ ಇದೀಗ ಯುವತಿ ಜಿಲ್ಲಾಡಳಿ ಕಚೇರಿ ಮೆಟ್ಟಿಲೇರಿದ್ದಾಳೆ.

ನ್ಯಾಯಕ್ಕಾಗಿ ಪ್ರಿಯಕರನ ಮನೆ ಹಾಗೂ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡಿದ್ರೂ ನ್ಯಾಯ ಸಿಕ್ಕಿಲ್ಲ. ಈ ಈಗ ಚಿಕ್ಕಬಳ್ಳಾಪುರದ ಕಪ್ಪುಬಳ್ಳಾಪುರ ಎನ್ನಭವನದ ಎದುರು ಚಳಿ ಗಾಳಿಯಲ್ಲಿ ಧರಣಿ ಕುಳಿತಿದ್ದು, ತನ್ನ ಬದುಕು ಹಾಳು ಮಾಡಿದ ಪ್ರೀಯಕರನ ಜೊತೆ ಮದುವೆ ಮಾಡಿಸಿ ಎಂದು ಅವಲತ್ತುಕೊಂಡಿದ್ದಾಳೆ.

ಇದನ್ನೂ ನೋಡಿ: ಮದ್ವೆಯಾದ 20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಮಾಜಿ ಪ್ರಿಯಕರ

ಪ್ರಿಯಕರನ ಜೊತೆಗಿನ ವಿಡಿಯೋ ನೋಡುತ್ತಿದ್ದಂತೆಯೇ ಪತಿ, ಕೈ ಹಿಡಿದ ಪತ್ನಿಯ ಮಾಗಲ್ಯ ಕಿತ್ತು ವಾಪಸ್ ತವರು ಮನೆಗೆ ಕಳುಹಿಸಿದ್ದಾನೆ. ಇದರಿಂದ ಅತ್ತ ದರಿ ಇತ್ತ ಪುಳಿಯಂತಾದ ನವವಿವಾಹಿ, ಈಗ ತನಗೆ ನ್ಯಾಯ ಕೊಡಿಸಿ ಎಂದು ಚಿಕ್ಕಬಳ್ಳಾಪುರ ಉತ್ತರ ಭವನದ ಎದುರು ಹಗಲು ರಾತ್ರಿ ಧರಣಿ ನಡೆಸಿದ್ದಾಳೆ. ತನ್ನ ಸಂಸಾರಕ್ಕೆ ಕಲ್ಲು ಹಾಕಿದ ಆಕೆಯ ಪ್ರೀಯಕರ ಪಲಿಚೆರ್ಲು ಗ್ರಾಮದ ಅಂಬರೀಶ, ಅಂಬರೀಶನ ಸ್ನೇಹಿತ ಸುನಿಲ್ ಹಾಗೂ ಪರಿಚಯಸ್ಥ ಭಾನುಪ್ರಿಯಳ ಫೋಟೋಗಳನ್ನು ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರ ಆವರಣ ಭವನದ ಮುಂದೆ ಧರಣಿ ಮಾಡ್ತಿದ್ದಾಳೆ.ಇನ್ನೂ ನೊಂದ ಸಂತ್ರಸ್ಥೆಯ ಧರಣಿಗೆ ಆಕೆಯ ತಾಯಿ, ಅಣ್ಣ, ಬಂಧು ಬಳಗ ಸಾಥ್ ನೀಡಿದೆ.

ಆದರೆ ಇಷ್ಟು ಆರೋಪಿ ಭಾನುಪ್ರಿಯ ಟಿವಿ9ಗೆ ಕಾಣಿಸಿಕೊಂಡಿದ್ದು, ನೊಂದ ಸಂತ್ರಸ್ಥೆ ಹಾಗೂ ಆಕೆಯ ಪ್ರಿಯಕರ ಅಂಬರೀಶ್ ತನಗೆ ಪರಿಚಯಸ್ಥರು. ಆದರೆ ಆಕೆಯ ಗಂಡನೂ ಗೊತ್ತಿಲ್ಲ, ಅವರ ನಂಬುಗೆ ಗೊತ್ತಿಲ್ಲ. ನಾನು ಯಾರಿಗೂ ಅವರ ವಿಡಿಯೋ ಕಳುಹಿಸಿಲ್ಲ. ಆದರೂ ನನ್ನ ಫೋಟೋ ಹಿಡಿದು ಧರಣಿ ನಡೆಸುತ್ತಿರುವುದು ಏಕೆ ಎಂದು ಗೊತ್ತಾಗುತ್ತಿಲ್ಲ.

ಒಟ್ಟಿನಲ್ಲಿ ಆ ಒಂದು ವಿಡಿಯೋ ಕಾರಣ ಯುವತಿಯ ಸಂಸಾರ ಛಿದ್ರವಾಗಿದ್ದು, ಅತ್ತ ಗಂಡ ಇಲ್ಲ ಇತ್ತ ಪ್ರಿಯಕರನೂ ಇಲ್ಲದೇ ಇದೀಗ ಬೀದಿಗೆ ಬಂದಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 5:07 pm, ಸೋಮ, 22 ಡಿಸೆಂಬರ್ 25



Source link

Leave a Reply

Your email address will not be published. Required fields are marked *