Headlines

ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ

ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ


ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಂ ವಾಲ್ಷ್ ನೂತನ ಸಿಐಒ

ಜನವರಿ 31: ಭಾರತದ ನಂಬರ್ ಒನ್ ಏರ್‌ಲೈನ್ಸ್ ಎನಿಸಿರುವ ಇಂಡಿಗೋದ ಮಾಲಕ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ​​ಲಿಮಿಟೆಡ್‌ಗೆ ನೂತನ ಸಿಐಒ ಆಗಿ ವಿಲಿಯಂ ವಾಲ್ಷ್ (ವಿಲಿಯಂ ವಾಲ್ಷ್) ಅವರನ್ನು ನೇಮಿಸಲಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಈ ನೇಮಕಾತಿಯನ್ನು ಪ್ರಕಟಿಸಿದೆ. ಹಿಂದಿನ ಸಿಐಒ ಪೀಟರ್ ಎಲ್ಬರ್ಸ್ ಅವರು ಮಾರ್ಚ್ 10 ರಂದು ರಾಜೀನಾಮೆ ನೀಡಿ ಕಂಪನಿಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ತರಲಾಗಿದೆ.

ವಿಲಿಯಂ ವಾಲ್ಷ್ ಅವರು ಪ್ರಸ್ತುತ ಇಂಟರ್ನ್ಯಾಷನಲ್ ಏರ್‌ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್‌ನಲ್ಲಿ ಮಹಾನಿರ್ದೇಶಕರಾಗಿ (ಡೈರೆಕ್ಟರ್ ಜನರಲ್) ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಅವಧಿ ಜುಲೈ 31ಕ್ಕೆ ಅಂತ್ಯವಾಗಲಿದೆ. ಇಂಡಿಗೋ ಸಿಐಒ ಆಗಿ ವಾಲ್ಷ್ ಅವರು ಆಗಸ್ಟ್ 3ರೊಳಗೆ ಹೊಸ ಜವಾಬ್ದಾರಿ ಪಡೆಯಲಿದ್ದಾರೆ. ಅವರ ನೇಮಕಾತಿಗೆ ಭಾರತೀಯ ನಿಯಂತ್ರಕ ಪ್ರಾಧಿಕಾರಗಳ ಅನುಮೋದನೆ ಸಿಕ್ಕ ಬಳಿಕವಷ್ಟೇ ಅವರು ಆ ಸ್ಥಾನ ಪಡೆಯಲು ಸಾಧ್ಯ.

ಇದನ್ನೂ ಓದಿ: ಗುಜರಾತ್‌ನಲ್ಲಿ 3,30 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಏವಿಯೇಷನ್ ​​ಸೆಕ್ಟರ್‌ನಲ್ಲಿ ದೊಡ್ಡ ಹೆಸರು ವಿಲಿಯಂ ವಾಲ್ಷ್

ಇಂಡಿಗೋ ಸಂಸ್ಥೆ ಭಾರತದ ನಂಬರ್ ಒನ್ ಏರ್ಲೈನ್ ​​ಎನಿಸಿದರೂ ಸಾಕಷ್ಟು ಸಮಸ್ಯೆಗಳು ಮತ್ತು ವಿವಾದಗಳಿಂದ ಬಳಲುತ್ತಿದೆ. ಇಂಥ ಹೊತ್ತಲ್ಲಿ ವಿಲಿಯಂ ವಾಲ್ಷ್ ಅವರಿಗೆ ಇಂಡಿಗೋ ಚುಕ್ಕಾಣಿ ವಹಿಸಲಾಗಿದೆ. ವಾಲ್ಷ್ ಅವರು ಜಾಗತಿಕ ಏವಿಯೇಷನ್ ​​ಉದ್ಯಮದಲ್ಲಿ ಬಹಳ ಅನುಭವ ಇರುವ ಮತ್ತು ಪ್ರಭಾವಶಾಲಿ ಎನಿಸಿರುವ ಮುಖಂಡ. ಹೀಗಾಗಿ, ಅವರು ಇಂಡಿಗೋ ಸಿಐಒ ಆಗುತ್ತಿರುವುದು ಉದ್ಯಮದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ.

ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದ ವಾಲ್ಷ್

ವಿಲಿಯಮ್ ವಾಲ್ಷ್ ಅವರು 1979 ರಲ್ಲಿ ಇಂಟರ್ನ್ಯಾಷನಲ್ ಏರ್ಲೈನ್ಸ್ ಗ್ರೂಪ್ನ ಏರ್ ಲಿಂಗಸ್ನಲ್ಲಿ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ, ಐರ್ಲ್ಯಾಂಡ್ ಮೂಲದ ಆ ಏರ್ಲೈನ್ಸ್ ಗ್ರೂಪ್ಗೆ ಸಿಐಒ ಸ್ಥಾನಕ್ಕೆ ಏರಿದರು. ಅದಾದ ಬಳಿಕ ಬ್ರಿಟಿಷ್ ಏರ್ವೇಸ್ಗೂ ಸಿಐಒ ಆಗಿ ಸೇವೆ ಸಲ್ಲಿಸಿದ್ದಾರೆ. 2021ರ ಏಪ್ರಿಲ್ ನಿಂದ ಜಾಗತಿಕ ವಿಮಾನಯಾನ ಉದ್ಯಮದ ಸಂಘಟನೆಯಾದ ಐಎಟಿಇಯಲ್ಲಿ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಜಾಗತಿಕ ಏವಿಯೇಷನ್ ​​ಉದ್ಯಮದಲ್ಲಿ ಇವರ ಪ್ರಭಾವಶಾಲಿ ಹೆಸರು.

ಇದನ್ನೂ ಓದಿ: ಆನ್‌ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

ಇಂಡಿಗೋದಲ್ಲಿ ವಾಲ್ಷ್‌ಗೆ ಸಾಕಷ್ಟು ಸವಾಲುಗಳು

ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಏವಿಯೇಷನ್ ​​ಮಾರುಕಟ್ಟೆ ಭಾರತವಾಗಿದೆ. ಇಂಡಿಗೋ ಭಾರತದ ನಂಬರ್ ಒನ್ ಏರ್ಲೈನ್ಸ್ ಸಂಸ್ಥೆಯಾಗಿದೆ. ಇದರ ಆಪರೇಷನ್ ಪರ್ಫಾರ್ಮೆನ್ಸ್ ಹೆಚ್ಚಿಸುವುದು ವಾಲ್ಷ್‌ಗೆ ಇರುವ ಸವಾಲು. ಜೊತೆಗೆ, ಬೆಳೆಯುತ್ತಿರುವ ಏವಿಯೇಶನ್ ಇಂಡಿಗೋವನ್ನು ಮುಂಚೂಣಿ ಸ್ಥಾನದಲ್ಲಿ ಮುಂದುವರಿಸುವ ಸವಾಲು ಅವರ ಮುಂದಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *