ಓಂ ಪ್ರಕಾಶ್ ಅವರ ಜೊತೆ ಪತ್ನಿ ಪಲ್ಲವಿ
ಬೆಂಗಳೂರು, ಡಿಸೆಂಬರ್ 11: ಮಾಜಿ ಡಿಜಿಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದ ಆರೋಪಿ ಪತ್ನಿ ಪಲ್ಲವಿ ಪರಪ್ಪನ ಅಗ್ರಹಾರ ಸೇರಿ ಬರೋಬ್ಬರಿ 9 ತಿಂಗಳು ಕಳೆದಿವೆ. ತನ್ನ ಗಂಡನನ್ನೇ ಭೀಕರವಾಗಿ ಮರ್ಡರ್ ಮಾಡಿದರೂ ಕಿಂಚಿತ್ತೂ ಪಶ್ಚಾತ್ತಾಪ ಪಡದ ಈಕೆ, ಗಂಡನ ಕೊಲೆ ಮಾಡಿ ಒಳ್ಳೆಯ ಕೆಲಸ ಮಾಡಿದೆ. ಈಗ ನಾನು ನನ್ನ ಮಗಳು ನೆಮ್ಮದಿಯಿಂದ ಇದ್ದೀವಿ ಎಂದು ಪ್ರತಿನಿತ್ಯ ಸಿಬ್ಬಂದಿಗೆ ಹೇಳುತ್ತಿದ್ದರಂತೆ. ಜೊತೆಗೆ, ತನ್ನನ್ನು ಹೊರಗೆ ಬಿಡಿ ಎಂದು ಆಗಾಗ ಕೂಗಾಡುತ್ತಿದ್ದಳು, ಆಕೆಯ ನಿಯಂತ್ರಣವೇ ಮಹಿಳಾ ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿಚಿತ್ರ ವರ್ತನೆ ಹಿನ್ನಲೆ ಬ್ಯಾರಕ್ ಬಳಿ ಹೆಚ್ಚಿನ ನಿಗಾ ಇಡಲಾಗಿತ್ತು, ಜೊತೆಗೆ ವೈದ್ಯರಿಂದ ಕೌನ್ಸಲಿಂಗ್ ಕೂಡ ನಡೆಸಲಾಯಿತು.
ಪಲ್ಲವಿಗಿಲ್ಲ ಮಗನ ಸಹಕಾರ
ತಂದೆಯ ಸಾವಿನ ಬಳಿಕ ತಾಯಿ ಮತ್ತು ತಂಗಿಯನ್ನ ದೂರ ಮಾಡಿರುವ ಓಂ ಪ್ರಕಾಶ್ ಅವರ ಮಗ, ಬೆಂಗಳೂರನ್ನೇ ಬಿಟ್ಟಿದ್ದಾರೆ. ನ್ಯಾಯಾಲಯದ ವಕೀಲರ ನೇಮಕಕ್ಕೆ ಫೋನ್ ಮೂಲಕ ಮೂರು ಬಾರಿ ಮಗನನ್ನು ಪಲ್ಲವಿ ಸಂಪರ್ಕಿಸಲು ಪ್ರಯತ್ನಿಸಿದರೂ ತಾಯಿಯ ಕರೆಗೆ ಮಗನ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರಿ ವಕೀಲರನ್ನೇ ತಮ್ಮ ಪರವಾಗಿ ಪಲ್ಲವಿ ನೇಮಿಸಿದ್ದಾರೆ. ಸದ್ಯ ಐಪಿಎಸ್ ಅಧಿಕಾರಿ ಪತ್ನಿ ಜೊತೆ ಮಾತ್ರ ಪಲ್ಲವಿ ಸಂಪರ್ಕದಲ್ಲಿದ್ದು, ಅವರೊಬ್ಬರ ದೂರವಾಣಿ ಸಂಖ್ಯೆ ಮಾತ್ರ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಓಂ ಪ್ರಕಾಶ್ ಕೊಲೆ; ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಅವರನ್ನು ಬೆಂಗಳೂರಿನ ಹೆಚ್ ಎಸ್ ಎಲ್ ಆರ್ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. 8 ರಿಂದ10 ಬಾರಿ ಚಾಕುವಿನಿಂದ ಇರಿದು ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿಯೇ ಹತ್ಯೆ ಮಾಡಿದರು. ಇನ್ನು, ಪತಿ ಪ್ರತಿನಿಧಿ ಬಳಿಕ, ಮತ್ತೋರ್ವ ನಿವೃತ್ತ ಡಿಜಿ ಮತ್ತು ಐಜಿಪಿಯ ಪತ್ನಿಗೆ ವಿಡಿಯೋ ಕರೆ ಮಾಡಿ, ‘ಐ ಹ್ಯಾವ್ ಫಿನಿಶ್ಡ್ ಮಾನ್ಸ್ಟರ್’ ಅಂತ ಪಲ್ಲವಿ ಹೇಳಿದ್ದಾರೆ. ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇಪದೆ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕಲು. ಶೂಟ್ ಮಾಡುವುದಾಗಿ ಹೆದರುತ್ತಿದ್ದರು. ಬೆಳಗ್ಗೆಯಿಂದ ಬೇರೆಬೇರೆ ವಿಚಾರಕ್ಕೆ ’ಮನೆಯಲ್ಲಿ ಜಗಳವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಪ್ರಕಾಶ್ ಯತ್ನಿಸಿದ್ದರು. ಹೀಗಾಗಿ ಜೀವ ಉಳಿಸಿಕೊಳ್ಳಲು ಕೊಲೆ ಮಾಡಿರೋದಾಗಿ ಪೊಲೀಸರ ವಿಚಾರಣೆ ವೇಳೆ ಪಲ್ಲವಿ ತಿಳಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.