
ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (AASM)ನ ನೂತನ ಪೊಸಿಶನ್ ಪೇಪರ್, ಆಗಾಗ್ಗೆ ಆಕಳಿಕೆ ನಿದ್ರಾಹೀನತೆಯ ಸಂಕೇತವಾಗಿರಬಹುದು ಎಂದು ಹೇಳುತ್ತದೆ. ಅಧ್ಯಯನದ ಪ್ರಕಾರ, ಅತಿಯಾದ ಹಗಲಿನ ನಿದ್ರೆ ಸೋಮಾರಿತನಕ್ಕೆ ಮಾತ್ರವಲ್ಲದೆ, ಚಾಲನಾ ಅಪಘಾತಗಳು, ಕೆಲಸದ ದೋಷ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ದೀರ್ಘಕಾಲೀನ ಕಾಯಿಲೆಗಳಿಗೂ ಅಪಾಯಕಾರಿ ಅಂಶವಾಗಿದೆ.
AASM ಅಧ್ಯಕ್ಷ ಡಾ. ಎರಿಕ್ ಓಲ್ಸನ್ ಮಾತನಾಡಿ, ನಿದ್ರಾಹೀನತೆಯು ಪ್ರತಿದಿನ ಗಣನೀಯ ಸಂಖ್ಯೆಯ ಅಪಘಾತಗಳಿಗೆ ಕಾರಣವಾಗುವ ಗಂಭೀರ ಸಮಸ್ಯೆಯಾಗಿದೆ. ಇದು ಆರೋಗ್ಯಕ್ಕೂ ಅಪಾಯಕಾರಿ ಎಂದಿದ್ದಾರೆ.