ಚಾಮರಾಜನಗರ, ಜನವರಿ 9: ಚಾಮರಾಜನಗರದಲ್ಲಿ ಅವಧಿ ಮೀರಿದ ಮದ್ಯವನ್ನು ಅಬಕಾರಿ ಇಲಾಖೆ ನಾಶಪಡಿಸಿದೆ. ಚಾಮರಾಜನಗರದ ಕೈಗಾರಿಕಾ ಪ್ರದೇಶದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭಾರಿ ಪ್ರಮಾಣದಲ್ಲಿ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ನಾಶಪಡಿಸಿದ್ದಾರೆ. ಬಿಯರ್ ಬೆಲೆ ದಿಢೀರ್ ಹಿನ್ನೆಲೆ ಮದ್ಯ ಮಾರಾಟದಲ್ಲಿ ಗಣನೀಯವಾಗಿ ಕುಂಠಿತಗೊಂಡಿದ್ದು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಎಂಆರ್‌ಪಿ ವೈನ್ ಸ್ಟೋರ್‌ಗಳತ್ತ ಜನರು ಸುಳಿಯದ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಲೋಡ್ ಗಟ್ಟಲೆ ಬಿಯರ್ ಮತ್ತು ವೈನ್ ಮಾರಾಟವಾಗದೆ ಉಳಿದು, ಅವುಗಳ ಅವಧಿ ಮೀರಿತ್ತು.
ಈ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಡಿಸಿ ಚಂದ್ರ ಅವರ ನೇತೃತ್ವದ ತಂಡ ಕೈಗಾರಿಕಾ ಪ್ರದೇಶದಲ್ಲಿ ದಾಳಿ ನಡೆಸಿ, ಸುಮಾರು 22 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಬಿಯರ್ ಮತ್ತು ವೈನ್ ಅನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ