
ನವೆಂಬರ್ 20: ಯುದ್ಧಭೂಮಿಯಲ್ಲಿ ಗೆಲ್ಲಲಾಗದ ಒಪ್ಪಂದವನ್ನು ಮಾಡಿಕೊಂಡ ರಾಷ್ಟ್ರಗಳಿಗೆ ರಕ್ಷಣೆಯನ್ನೂ ನೀಡಲಾಗದೆ ಅತಂತ್ರವಾಗಿರುವ ಪಾಕಿಸ್ತಾನ(ಪಾಕಿಸ್ತಾನ)ವು ಇರಾನ್ ಹಾಗೂ ಭಾರತದ ನಡುವೆ ವೈಷಮ್ಯವನ್ನು ಹುಟ್ಟುಹಾಕಲು ಕುತಂತ್ರ ನಡೆಸುತ್ತಿರುವುದು ಬಹಿರಂಗವಾಗಿದೆ. ಇತ್ತೀಚೆಗೆ ಅಮೆರಿಕದ ಸೇನೆಯು ಇರಾನ್‌ನ ಯುದ್ಧನೌಕೆ ಐರಿಸ್ ಡೇನಾವನ್ನು ಹೊಡೆದುಹಾಕಿತ್ತು, ಇದು ಭಾರತದಲ್ಲಿ ಸಮರಭ್ಯಾಸ ನಡೆಸಿಕೊಂಡು ಇರಾನ್‌ನತ್ತ ಹೊರಟಿದ್ದ ಯುದ್ಧನೌಕೆಯಾಗಿತ್ತು. ಶ್ರೀಲಂಕಾದ ಬಳಿಯ ಹಿಂದೂ ಮಹಾಸಾಗರದಲ್ಲಿ ಈ ಅವಘಡ ಸಂಭವಿಸಿತ್ತು.
ಇರಾನ್ ಇಸ್ರೇಲ್ ಅಮೆರಿಕ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿಯೂ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ಅಫ್ಘಾನಿಸ್ತಾನ ಇನ್ನೊಂದೆಡೆ ಬಲೂಚಿಸ್ತಾನ ವಿಮೋಚನಾ ತಂಡ ಪಾಕಿಸ್ತಾನದ ವಿರುದ್ಧ ಮುಗಿಬಿದ್ದಿದೆ. ಇನ್ನೊಂದೆಡೆ ವಾಯುನೆಲೆಯನ್ನು ಅಮೆರಿಕಕ್ಕೆ ನೀಡಿದರೆ ಹುಷಾರ್ ಪಾಕ್‌ಗೆ ಇರಾನ್ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಆಗಿರುವ ಒಪ್ಪಂದದ ಪ್ರಕಾರ, ಸೌದಿ ಅರೇಬಿಯಾ ಯುದ್ಧದ ಸನ್ನಿವೇಶದಲ್ಲಿ ಸಿಲುಕಿದಾಗ ಪಾಕ್ ನೆರವು ಆದರೆ ಅದು ಸಾಧ್ಯವಾಗುತ್ತಿಲ್ಲ. ಒಂದೆಡೆ ರಕ್ಷಣೆಗೆ ಇರಾನ್ ಯುದ್ಧನೌಕೆ ಭಾರತ ಸರ್ಕಾರವು ರಕ್ಷಣೆ ನೀಡಬೇಕೆಂದು ದೇಶದ ಕಾಂಗ್ರೆಸ್ ಆರೋಪದ ನಡುವೆ ಪಾಕಿಸ್ತಾನವು ಈ ಸನ್ನಿವೇಶವನ್ನು ಭಾರತವು ಯುದ್ಧದೊಳಗೆ ಸೇರಿಸುವ ಹುನ್ನಾರ ಮಾಡಿತ್ತು. ಜೊತೆಗೆ ಇರಾನ್ ಹಾಗೂ ಭಾರತದ ನಡುವೆ ವೈಷಮ್ಯವನ್ನು ಹುಟ್ಟುಹಾಕುವ ಕುತಂತ್ರವನ್ನು ನಡೆಸಿತ್ತು.
ಇರಾನ್ನೌಕೆಯನ್ನು ಭಾರತದ ಸಮುದ್ರದ ಗಡಿಯೊಳಗೆ ನಾಶಪಡಿಸಲಾಗಿಲ್ಲ, ಆದರೆ ಯಾವುದೇ ಅಂತರರಾಷ್ಟ್ರೀಯ ನಿಯಮದ ಪ್ರಕಾರ, ಆ ಯುದ್ಧನೌಕೆಗೆ ಭಾರತವು ರಕ್ಷಣೆ ಕೊಡಬೇಕಾಗಿಲ್ಲ, ಆದಾಗ್ಯೂ ರಕ್ಷಣಾ ಕಾರ್ಯಾಚರಣೆಗೆ ಭಾರತವು ಸಹಾಯ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು ಓದಿ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!
ಈ ವಿಚಾರವನ್ನು ಭಾರತ ವಿದೇಶಾಂಗ ಸಚಿವಾಲಯವು ಸ್ಪಷ್ಟಪಡಿಸಿದೆ. ಆದರೆ ಯುದ್ಧದ ಸಂದರ್ಭದಲ್ಲಿ ಕ್ಷಿಪಣಿ ವೇಗವಾಗಿ ಸುಳ್ಳು ಮಾಹಿತಿಗಳು ಹರಿದಾಡುತ್ತವೆ. ಆಪರೇಷನ್ ಸಿಂಧೂರ್ ನಿಂದ ಹಿಡಿದು ಇತಿಹಾಸದಲ್ಲಿ ಹಲವು ಬಾರಿ ಪಾಕಿಸ್ತಾನದ ದೊಡ್ಡ ಅಸ್ತ್ರವೇ ಸುಳ್ಳು ಸುದ್ದಿಯಾಗಿದೆ.
ಅಮೆರಿಕ, ಇರಾನ್, ಇಸ್ರೇಲ್ ಯುದ್ಧದ ವಿಚಾರದಲ್ಲಿ ಭಾರತವನ್ನು ಎಳೆದು ತರಲು ಪಾಕಿಸ್ತಾನ ಮತ್ತೆ ಈ ಅಸ್ತ್ರ ಬಳಸಿದೆ. ಇವತ್ತಿನವರೆಗೂ ಭಾರತವು ಇಸ್ರೇಲ್ ಹಾಗೂ ಇರಾನ್ ಜೊತೆಗಿನ ಭಿನ್ನ ವೇದಿಕೆಯಲ್ಲಿ ಉತ್ತಮವಾದ ಸಂಬಂಧವನ್ನು ಹೊಂದಿದೆ. ಇದು ಪಾಕಿಸ್ತಾನ ಸೇರಿ ಹಲವು ದುಷ್ಟ ಶಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಹಿಸದ ಪಾಕಿಸ್ತಾನವು ಐರಿಸ್ ಡೇನಾ ಯುದ್ಧ ನೌಕೆಯ ಪತನದ ಹಿಂದೆ ಭಾರತದ ಹಸ್ತಕ್ಷೇಪವಿದೆ ಎಂಬ ಕಥೆಯನ್ನು ಕಟ್ಟಿ ವಿಶ್ವಕ್ಕೆ ಸಾರುವ ಪ್ರಯತ್ನ ಮಾಡಿತ್ತು. ಈ ಸುಳ್ಳು ಸುದ್ದಿಯ ಮೂಲಕ ಭಾರತದ ಮೇಲೆ ಇರಾನ್ ದಾಳಿ ಮಾಡಿದ್ದು ಪಾಕಿಸ್ತಾನದ ಶಡ್ಯಂತ್ರವಾಗಿದೆ ಎಂದು ವರದಿಯಾಗಿದೆ.
TacticalTribun ಖಾತೆಯ ಮೂಲಕ ಮಾರ್ಚ್ 4 ರಂದು ಇದಕ್ಕೆ ಪೂರಕವಾಗಿ ಸಂದೇಶವನ್ನು ಹಾಕಲಾಗಿದೆ. ಐರಿಸ್ ಡೇನಾದ ಚಲನೆ ಮತ್ತು ನಿಖರವಾದ ಸ್ಥಳದ ಮಾಹಿತಿಯನ್ನು ಭಾರತವು ಅಮೆರಿಕದೊಂದಿಗೆ ಹಂಚಿಕೊಂಡಿದೆ. ಈ ಖಾತೆಯ ಮೂಲಕ ಮಾಡಿದ ಪೋಸ್ಟ್ನ ಸಾರಾಂಶವಾಗಿತ್ತು.
ಈ ಪೋಸ್ಟ್ ಅನ್ನು 500ಕ್ಕೂ ಅಧಿಕ ಜನರು ಶೇರ್ ಮಾಡಿದ್ದರು. ಇದಕ್ಕೆ #IndiaBetraysIran ಹ್ಯಾಶ್‌ಟ್ಯಾಗ್ ಮೂಲಕ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುವ ಪ್ರಯತ್ನವೂ ನಡೆದಿದೆ. ಸುಮಾರು 500ಕ್ಕೂ ಅಧಿಕ ರೀಲ್‌ಪೋಸ್ಟ್ ಜೊತೆಗೆ ರಿಪೋಸ್ಟ್ ಮಾಡಲಾಗಿದೆ. ಇದಕ್ಕೆ ಮಿಲಿಯನ್ ಗಟ್ಟಲೆ ವ್ಯೂಸ್ ಕೂಡ ಬಂದಿತ್ತು. ಈ ಟ್ರೆಂಡ್‌ನಲ್ಲಿ ಕಾರ್ಯನಿರ್ವಹಿಸಿದ ಶೇ.40 ಅಧಿಕ ಪೋಸ್ಟ್‌ಗಳು ಪಾಕ್ ಮೂಲದ್ದಾಗಿತ್ತು, ಕೆಲವು ಮದ್ಯಪ್ರಾಚ್ಯ , ಆಫ್ರಿಕಾ ಮತ್ತು ಇತರ ರಾಷ್ಟ್ರಗಳ ಮೂಲಕ ನಡೆದಿತ್ತು.
ಅಂದಹಾಗೆ ಈ ಕುತಂತ್ರಿಗಳ ಮೊದಲ ಪ್ರಯತ್ನವಾಗಲಿಲ್ಲ, ಕೆಲವು ದಿನಗಳ ಹಿಂದೆ, ರಾಜನಾಥ್ ಸಿಂಗ್ ಅವರ ಐ ವಿಡಿಯೋ ಹಾಕಿ, ಇರಾನ್ ಮೇಲಿನ ದಾಳಿಗೆ ಭಾರತದ ಬೆಂಬಲವಿದೆ ಎಂಬುವ ರೀತಿ ಸಂಪೂರ್ಣ ಬಿಂಬಿಸಲ್ಪಟ್ಟಿದೆ. ಹಾಗೆಯೇ ಇರಾನ್ ಸರ್ವೋಚ್ಛ ನಾಯಕನಾಗಿದ್ದ ಅಲಿ ಖಮೇಲಿ ಹತ್ಯೆಗೂ ಭಾರತವು ಪ್ರಧಾನಿ ನರೇಂದ್ರ ಮೋದಿ ಮೂಲಕ ಇಸ್ರೇಲ್ ಹಾಗೂ ಅಮೆರಿಕಕ್ಕೆ ಬೆಂಬಲ ಸೂಚಿಸುವಂತೆ ಹೇಳಲಾಗಿದೆ.
ಆದರೆ ಈ ಎರಡೂಸುದ್ದಿಗಳ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟನೆ ನಿಡಿತ್ತು.ಆದರೆ ಐರಿಸ್ ಡೇನಾ ಮೂಲಕ ಮತ್ತೆ ಕುತಂತ್ರ ಮಾಡಲು ಹೋದರು ಈ ಟ್ರೆಂಡ್‌ನಲ್ಲಿ ಭಾಗಿಯಾದ ಹಲವು ಖಾತೆಗಳನ್ನು ರದ್ದುಗೊಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ