ಫಹಾದ್ ಫಾಸಿಲ್ (ಫಹಾದ್ ಫಾಸಿಲ್) ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಯಾವ ಪಾತ್ರದಲ್ಲಿ ನಟಿಸಿದರೂ ಆ ಪಾತ್ರದ ಮೇಲೆ ತಮ್ಮ ಛಾಪು ಉಳಿಸುತ್ತಾರೆ, ಫಹಾದ್ ಹೊರತಾಗಿ ಇನ್ಯಾರನ್ನೂ ಪಾತ್ರದಲ್ಲಿ ನಟಿಸದಂತೆ ನಟಿಸುತ್ತಾರೆ ಈ ಮಲಯಾಳಿ ನಟ. ಫಹಾದ್ ಹಲವು ಅತ್ಯುತ್ತಮ ಪಾತ್ರಗಳಲ್ಲಿ ನಟಿಸಿದ್ದಾರೆ ಆದರೆ ಅವರ ‘ಆವೇಶಂ’ ಸಿನಿಮಾದ ರಂಗ ಪಾತ್ರಕ್ಕೆ ಇರುವಷ್ಟು ಅಭಿಮಾನಿಗಳು ಇನ್ಯಾವ ಪಾತ್ರಕ್ಕೂ ಇದ್ದಂತಿಲ್ಲ. ಬೆಂಗಳೂರಿನ ಡಾನ್ ರಂಗ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು ಫಹಾದ್ ಫಾಸಿಲ್. ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದ್ದು ಸಿನಿಮಾದ ಮೀಮ್ ಗಳು ಹರಿದಾಡುತ್ತಿರುತ್ತವೆ. ಇದೀಗ ‘ಆವೇಶಂ 2’ ಸಿನಿಮಾದ ಬಗ್ಗೆ ಅಪ್‌ಡೇಟ್ ಹೊರಬಿದ್ದಿದ್ದು ಫಹಾದ್ ಅವರು ಮತ್ತೆ ರಂಗನ ಪಾತ್ರದಲ್ಲಿ ಮಿಂಚಲಿದ್ದಾರೆ.
‘ಆವೇಶಂ’ ಸಿನಿಮಾ 2024ರ ಏಪ್ರಿಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಮಲಯಾಳಂ ಬಿಡುಗಡೆ ಆದ ಎಲ್ಲ ರಾಜ್ಯಗಳಲ್ಲಿಯೂ ಸೂಪರ್ ಹಿಟ್ ಆಗಿದೆ. ಒಟಿಟಿಯಲ್ಲಿ ಹಲವು ದಿನಗಳ ಕಾಲ ಟಾಪ್ ಟ್ರೆಂಡಿಂಗ್ ನಲ್ಲಿತ್ತು ಸಿನಿಮಾ. ಆಗಿನಿಂದ ಸಿನಿಮಾದ ಸೀಕ್ವೆಲ್ ಗಾಗಿ ಬೇಡಿಕೆ ಬರುತ್ತಲೇ ಇತ್ತು. ಫಹಾದ್ ಸಹ ‘ಆವೇಶಂ 2’ ಚಿತ್ರದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎಂದು ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಆ ಸಮಯ ಬಂದಿದೆ. ‘ಆವೇಶಂ 2’ ಸಿನಿಮಾ ನಿರ್ಮಾಣವಾಗುವುದು ಪಕ್ಕಾ ಆಗಿದ್ದು, ಫಹಾದ್ ಅವರು ಐಕಾನಿಕ್ ‘ರಂಗ’ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಲಿದ್ದಾರೆ.
ಇದನ್ನೂ ಓದಿ:ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್
‘ಆವೇಶಂ’ ಸಿನಿಮಾ ಬಿಡುಗಡೆಯಾದಾಗ ಆ ಸಿನಿಮಾದ ತೆಲುಗು ರಿಮೇಕ್ ಬಗ್ಗೆ ಬಹಳ ಚರ್ಚೆಗಳು ನಡೆದಿದ್ದವು. ನಂದಮೂರಿ ಬಾಲಕೃಷ್ಣ ಅಥವಾ ರವಿತೇಜ ಅವರು ‘ಆವೇಶಂ’ ಸಿನಿಮಾ ರಿಮೇಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದು ಕೈಗೂಡಿಲ್ಲ. ಇದೀಗ ಸಿನಿಮಾದ ಎರಡನೇ ಭಾಗವನ್ನೇ ಘೋಷಿಸಲಾಗಿದೆ. ಫಹಾದ್ ಫಾಸಿಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಿನಿಮಾದ ಚಿತ್ರೀಕರಣ 2027ರ ಅಂತ್ಯ ಅಥವಾ 2028ರ ಪ್ರಾರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.
‘ಆವೇಶಂ’ ಸಿನಿಮಾದ ನಿರ್ದೇಶಕ ಜಿತು ಮಾಧವನ್ ಪ್ರಸ್ತುತ ತಮ್ಮ ಮೊದಲ ತಮಿಳು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸ್ಟಾರ್ ನಟ ಸೂರ್ಯ ನಾಯಕ. ಆ ಸಿನಿಮಾದ ಕತೆಯೂ ಬೆಂಗಳೂರಿನಲ್ಲೇ ಇದೆ. ಇದೆ ಫಹಾದ್ ಫಾಸಿಲ್ ಕ್ಯಾಮಿಯೋ ಸಹ ಆ ಸಿನಿಮಾದಲ್ಲಿ ಇರಲಿದೆ ಎನ್ನಲಾಗುತ್ತಿದೆ. ಸೂರ್ಯ ಸಿನಿಮಾ ಬಳಿಕವಷ್ಟೇ ‘ಆವೇಶಂ 2’ ಸಿನಿಮಾ ಶುರುವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 11:45 am, ಮಂಗಳವಾರ, 10 ಫೆಬ್ರವರಿ 26