ಪತಿಯಿಂದ ದೂರವಾಗಿದ್ದರೂ ರಾತ್ರಿ ಮನೆಗೆ ಬಂದ ಗಂಡ, ಕೋರ್ಟ್‌ನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿದೆ. ಗಂಡನ ಬಿಟ್ಟು ಬೇರೆ ಮನೆಯಲ್ಲಿದ್ದ ಪತ್ನಿ ಮನೆಗೆ ರಾತ್ರಿ ಇದೇ ಅಸಾಮಿ ಎಂಟ್ರಿಕೊಟ್ಟಿದ್ದಾನೆ. ಬಳಿಕ ನಡೆದಿದ್ದೇ ದುರಂತ

ಪತಿಯ ಕಿರುಕುಳಕ್ಕೆ ಬೇಸತ್ತ ಕುಟುಂಬಸ್ಥರು ಮಾತುಕತೆ ನಡೆಸಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್‌ನಲ್ಲಿ ಕಳೆದ ಕೆಲ ತಿಂಗಳುಗಳಿಂದ ಡಿವೋರ್ಸ್ ಕೇಸ್ ನಡೆಯುತ್ತಿದೆ. ಇತ್ತ ಗಂಡನ ನೆರಳು ಬೀಳುವುದು ಬೇಡ ಎಂದು ಬೇರೆ ಮನೆಯಲ್ಲಿ ವಾಸ ಆರಂಭಿಸಿದ್ದಳು. ಮಕ್ಕಳ ಜೊತೆ ಬದುಕು ಸಾಗಿಸುತ್ತಿದ್ದಳು. ಕೆಲ ತಿಂಗಳಿನಿಂದ ದೂರವಾಗಿದ್ದ ಪತ್ನಿ ಮನೆಗೆ ರಾತ್ರಿ ಈ ಗಂಡ ಎಂಟ್ರಿಕೊಟ್ಟಿದ್ದಾನೆ. ಗಂಡನ ಅವತಾರಕ್ಕೆ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಇತ್ತ ಪತ್ನಿ ದುರಂತ ಸಾವು ಕಂಡ ಘಟನೆ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ನಡೆದಿದೆ.

30 ವರ್ಷದ ಸಂಗೀತಾ ದೇವಿ ಈ ಕ್ರೂರಿಯನ್ನು ಮದುವೆಯಾಗಿ ಕೆಲ ವರ್ಷ ಜೊತೆಯಾಗಿದ್ದಳು. ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಆರಂಭದಿಂದಲೇ ಕಿರುಕಳು ಆರಬಗೊಂಡಿದೆ. ಗಂಡ ಮಾತ್ರವಲ್ಲ, ಆತನ ಮನೆಯವರ ಕಿರುಕುಳವು ತಾರಕಕ್ಕೇರಿದೆ. ಎಲ್ಲಾ ವಿಚಾರವನ್ನು ಸಂಗೀತಾ ದೇವಿ ಪೋಷಕರಿಗೆ ತಿಳಿಸಿದ್ದಳು. ಪೋಷಕರು ಸಮಾಧಾನ ಮಾಡುತ್ತಾ, ಹೊಂದಿಕೊಂಡು ಬಾಳುವಂತೆ ಸಲಹೆ ನೀಡುತ್ತಾ ಬಂದಿದ್ದಾರೆ. ಹಲವು ಬಾರಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.

ಗಂಡ ಹಾಗೂ ಆತನ ಮನೆಯವರ ಕಿರುಕುಳ ಅತಿಯಾಗುತ್ತಿದ್ದಂತೆ ಸಂಗೀತಾ ದೇವಿ ಪೋಷಕರಿಗೆ ಮಾಹಿತಿ ನೀಡಿ ಕೊನೆಗೆ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ. ಇದು ಗಂಡನ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಇಷ್ಟೇ ಅಲ್ಲ ಇಬ್ಬರು ಮಕ್ಕಳನ್ನು ಕರೆದುಕೊಂಡು ಬೇರೆ ಮನೆಯಲ್ಲಿ ವಾಸಕ್ಕೆ ಆರಂಭಿಸಿದ್ದಾಳೆ. ಕೋರ್ಟ್ ಗಂಡನ ಕ್ರೌರ್ಯದ ಕುರಿತು ಕಳವಳ ವ್ಯಕ್ತಪಡಿಸಿತ್ತು.ಇಷ್ಟೇ ಅಲ್ಲ ಪ್ರಕರಣ ಕೂಡ ಅಂತಿ ಹಂತ ತಲುಪಿತ್ತು. ಜೀವನಾಂಶ ಕುರಿತು ವಿಚಾರಣೆಗಳು ಆರಂಭಗೊಂಡಿತ್ತು.

ಡಿವೋರ್ಸ್ ಬಹುತೇಕ ಖಚಿತ, ಜೊತೆಗೆ ಜೀವನಾಂಶ ನೀಡಬೇಕಾಗುತ್ತದೆ ಎಂದು ಸಂಗೀತಾ ದೇವಿ ಗಂಡ ಹಾಗೂ ಆತನ ಪೋಷಕರು ತೀವ್ರ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಶುಕ್ರವಾರ (ಫೆ.20) ರಾತ್ರಿ ಪೋಷಕರ ಜೊತೆಗೆ ಸಂಗೀತಾ ದೇವಿ ಮನೆಗೆ ಆಗಮಿಸಿದ್ದಾನೆ. ರಾತ್ರಿ 8 ಗಂಟೆ ವೇಳೆಗೆ ಆಗಮಿಸಿದಾಗ ಸಂಗೀತಾ ದೇವಿ ದಿನಸಿ ಸೇರಿದಂತೆ ಕೆಲ ವಸ್ತುಗಳನ್ನು ತರಲು ಹೋರಹೋಗಿದ್ದರು. ಮನೆಗೆ ಬಂದು ತಡಕಾಡಿದಾಗ ಸಂಗೀತಾ ದೇವಿ ಇರಲಿಲ್ಲ. ಮನೆಯಲ್ಲಿದ್ದ ಮಕ್ಕಳು ಸಂಗೀತಾ ದೇವಿ ಸಂಬಂಧಿಕರು ಆಕೆ ಹೊರಗೆ ಹೋಗಿದ್ದಾಳೆ. ಮಾತುಕತೆ, ವಿವಾದಗಳು ಬೇಡ, ಏನೇ ಇದ್ದರು ನೀವು ಕೋರ್ಟ್‌ನಲ್ಲಿ ಹೇಳಿ ಎಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

ಆಕ್ರೋಶಗೊಂಡಿದ್ದ ಸಂಗೀತಾ ದೇವಿ ಗಂಡ ಹಾಗೂ ಆತನ ಪೋಷಕರು ಇನ್ನೇನು ಮನೆಯಿಂದ ಹೊರಡಬೇಕು ಅನ್ನುವಷ್ಟರಲ್ಲಿ ಇದ್ಯಾವುದರ ಅರಿವೇ ಇಲ್ಲದ ಸಂಗೀತಾ ದೇವಿ ನೆಡೆದುಕೊಂಡು ಮನೆಯತ್ತ ಆಗಮಿಸುತ್ತಿರುವುದು ಕಂಡಿದೆ. ದಾರಿಯಲ್ಲಿ ನಿಲ್ಲಿಸಿದ ಗಂಡ ವಾಗ್ವಾದ ಶುರು ಮಾಡಿದ್ದಾನೆ. ಡಿವೋರ್ಸ್ ವಾಪಸ್ ಪಡೆಯಬೇಕು, ಜೀವನಾಂಶ ಏನೂ ಇಲ್ಲ ನಾಳೆ ಮನೆಯಲ್ಲಿರಬೇಕು ಎಂದೆಲ್ಲಾ ಗದರಿಸಿದ್ದಾನೆ. ಇದಕ್ಕೆ ಜಗ್ಗದ ಸಂಗೀತಾ ದೇವಿ ಎಲ್ಲವನ್ನು ಕೋರ್ಟ್‌ನಲ್ಲಿ ಹೇಳಿದ್ದೇನೆ. ಏನೇ ಇದ್ದರೂ ಅಲ್ಲೇ ಹೇಳಿ ಎಂದು ಹೊರಡಲು ಮುಂದಾಗಿದ್ದಾಳೆ. ಇದೇ ವೇಳೆ ಆಕ್ರೋಶಗೊಂಡ ಗಂಡ ರಿವಾಲ್ವರ್ ತೆಗೆದು ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಮಕ್ಕಳು ಮನೆಯ ಅಂಗಳದಲ್ಲಿ ನಿಂತು ಆತಂಕಗೊಂಡು, ಅಳುತ್ತಾ ನೋಡುತ್ತಿದ್ದರೆ ಕಣ್ಣೆದುರೆ ತಾಯಿಯ ಮೇಲೆ ಗುಂಡು ಹಾರಿಸಲಾಗಿತ್ತು. ಕೆಲವೇ ಕ್ಷಣದಲ್ಲಿ ಸಂಗೀತಾ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಳು. ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ಕಾರು ಏರಿ ಗಂಡ ಹಾಗೂ ಆತನ ಮನೆಯವರು ಪರಾರಿಯಾಗಿದ್ದಾರೆ. ಇದೀಗ ಗಂಡ ಹಾಗೂ ಆತನ ಪೋಷರು ನಾಪತ್ತೆಯಾಗಿದ್ದಾರೆ.

Source link
ಪತಿಯಿಂದ ದೂರವಾಗಿದ್ದರೂ ರಾತ್ರಿ ಮನೆಗೆ ಬಂದ ಗಂಡ, ಮಕ್ಕಳ ಮುಂದೆ ನಡೆಯಿತು ದುರಂತ