ಯಾದಗಿರಿ, ನವೆಂಬರ್ 28: ಬೆಳೆದ ಬೆಳೆ ಕಾಪಾಡಿಕೊಳ್ಳಲು ರೈತರು ನಾನಾ ಪ್ರಯತ್ನ ಮಾಡೋದನ್ನ ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೆ, ಯಾದಗಿರಿಯ ಮುದನೂರ ಗ್ರಾಮದ ರೈತನೊಬ್ಬ ತಾನು ಬೆಳೆದು ಹತ್ತಿ ಬೆಳೆಗೆ ಯಾರ ದೃಷ್ಟಿಯಾಗದಿರಲಿ ಎಂದು ಹೊಲದ ಬಳಿ ಮಾದಕ ತಾರೆ ಸನ್ನಿ ಲಿಯೋನ್ ಫೋಟೋ ಇಟ್ಟಿದ್ದಾನೆ. ಫಸಲೊಡೆದ ಹತ್ತಿ ಬೆಳೆಗೆ ಜನರ ದೃಷ್ಟಿ ಬೀಳಬಾರದು. ಹೀಗಾಗಿ ಸನ್ನಿ ಲಿಯೋನ್ ಫೋಟೋ ಹಾಕಿದ್ದೇನೆ. ಜನರ ಗಮನ ಹೊಲದತ್ತ ಹೋಗೋ ಬದಲು ಫೋಟೋ ಕಡೆ ಹೋಗುತ್ತೆ ಎಂದು ರೈತ ತಿಳಿಸಿದ್ದಾನೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.