
ಹಾಸನ, (ಮಾರ್ಚ್ 19): ಭಾರತೀಯರಿಗೆ ಹೊಸ ವರ್ಷದ ಸಂಕೇತ ಮತ್ತು ಚೈತ್ರಮಾಸದ ಆರಂಭದ ದಿನವಾದ ಯುಗಾದಿ ಹಬ್ಬ (ಯುಗಾದಿ ಹಬ್ಬ) ಸಂಭ್ರಮ ಮನೆ ಮಾಡಿದೆ. ಕಳೆದ ಸಿಹಿ ಕನಸುಗಳ ನಿರೀಕ್ಷೆಯಲ್ಲಿ ಜನರು ಎಲ್ಲೆಡೆ ಯುಗಾದಿ ಆಚರಣೆ ಮಾಡುತ್ತಾರೆ. ಇನ್ನು ಅನ್ನದಾತರು ಹೊಸ ವರ್ಷದ ಮೊದಲ ದಿನ ಹೊನ್ನಾರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಹಾಸನ (ಹಾಸನ) ಜಿಲ್ಲೆ ಅರಕಲಗೂಡು ತಾಲೂಕಿನ ಕಡುವಿನಹೊಸಹಳ್ಳಿ ಗ್ರಾಮದಲ್ಲಿ ರೈತರ, ಹಸುಗಳಿಗೆ ಅಲಂಕಾರ ಮಾಡಿ ನೇಗಿಲು ಹೂಡಿ ಉಳುಮೆ ಮಾಡಿ ಸಂಭ್ರಮಿಸಿದರು. ಜೊತೆಗೆ ಸಾಂಕೇತಿಕವಾಗಿ ಸಾಮೂಹಿಕವಾಗಿ ಮಂಗಳವಾದ್ಯದೊಂದಿಗೆ ಹೊನ್ನಾರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.