ಪುಣ್ಯವಂತರಿಗೆ ಮಾತ್ರ ಹೆಣ್ಣು ಮಗು (girl baby) ಹುಟ್ಟೋದು. ಹೆಣ್ಣು ಮಕ್ಕಳನ್ನು ಪಡೆಯಲು ನೂರು ಜನ್ಮದ ಪುಣ್ಯ ಮಾಡಿರಬೇಕು, ಹೀಗೆ ನಾನಾ ರೀತಿಯ ಮಾತುಗಳನ್ನು ಹೇಳುವುದನ್ನು ನೀವು ಕೇಳುತ್ತೀರಿ. ಹೀಗಾಗಿ ಮನೆಗೆ ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳಿ ಮನೆ ಮಂದಿಯೆಲ್ಲಾ ಖುಷಿಯಿಂದ ಕುಣಿದು ಕುಪ್ಪಳಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಇಲ್ಲೊಬ್ಬ ಅಪ್ಪನ (ತಂದೆ) ಖುಷಿಯೂ ಎಲ್ಲೆ ಮೀರಿದೆ. ಹೆಣ್ಣು ಮಗುವಿನ ಆಗಮನದ ಸುದ್ದಿ ಕೇಳಿ ಆಸ್ಪತ್ರೆಯಲ್ಲೇ ತಂದೆಯೂ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಣ್ಣು ಮಗಳಿಗೆ ಅಪ್ಪನಾದೆ ಎನ್ನುವ ತಂದೆಯ ಖುಷಿಯ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ಸಕಾರಾತ್ಮಕ ಅಭಿಮಾನಿಗಳ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಸ್ಪತ್ರೆಯ ಚಿತ್ರಣ ಕಂಡುಬಂದಿದೆ. ನವಜಾತ ಶಿಶುವನ್ನು ಎತ್ತಿಕೊಂಡು ಮಹಿಳೆಯೂ ಖುಷಿಯಿಂದ ಬರುತ್ತಿರುವುದನ್ನು ನೋಡಬಹುದು. ಆ ಮಹಿಳೆಯ ಸುತ್ತಲಿದ್ದ ಮಹಿಳೆಯರು ಕೂಡ ಖುಷಿಯಿಂದಲೇ ಡ್ಯಾನ್ಸ್ ಮಾಡುತ್ತಿದ್ದಾರೆ. ಇತ್ತ ತಂದೆಯೂ ಹೆಣ್ಣು ಮಗು ಹುಟ್ಟಿತು ಎನ್ನುವ ಖುಷಿಗೆ ಆಸ್ಪತ್ರೆಯಲ್ಲೇ ಕುಣಿದಾಡಿದೆ.
ವೈರಲ್ ವಿಡಿಯೋ ಇಲ್ಲಿದೆ
ಟ್ರೆಂಡ್ ವಿಜೇತ ❤️🔥 pic.twitter.com/7kvPDO03IM
— ಧನಾತ್ಮಕ ಅಭಿಮಾನಿ (@imashishsrrk) ಡಿಸೆಂಬರ್ 17, 2025
ಇದನ್ನೂ ಓದಿ: ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ
ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ. ಒಬ್ಬ ಬಳಕೆದಾರ, ಇಂದು ನಾನು ನೋಡಿದ ಅತ್ಯುತ್ತಮ ವಿಷಯ. ಮತ್ತೊಬ್ಬರು, ಜೀವನದಲ್ಲಿ ಗೆದ್ದಂತಹ ಅನುಭವ, ಅವರ ನಗುವೇ ಎಲ್ಲ ಹೇಳುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇತರ ಬಳಕೆದಾರ ಮಗಳ ಆಗಮನವನ್ನು ಎಲ್ಲರಿಗೂ ಸಂಭ್ರಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ