
ಅಪ್ಪ (ತಂದೆ) ಅಂದ್ರೆನೇ ಹಾಗೇನೇ, ಪದಗಳಲ್ಲಿ ವಿವರಿಸಲು ಆಗದು. ಮಗಳ ಪಾಲಿಗೆ ಅಪ್ಪ ಮೊದಲ ಹೀರೋ ಅಷ್ಟೇ ಅಲ್ಲ, ಬೆಸ್ಟ್ ಫ್ರೆಂಡ್ ಕೂಡ ಆಗುತ್ತಾನೆ. ಕಷ್ಟಪಟ್ಟು ಮಗಳ ಇಷ್ಟಗಳನ್ನು ದುಡುಕುವ ಅಪ್ಪನಿಗೆ ಆಕೆಯೇ ಪ್ರಪಂಚ. ಅಪ್ಪ ಮಗಳ ಬಾಂಧವ್ಯ ಸಾರುವ ಕೆಲ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಇಲ್ಲೊಬ್ಬ ತಂದೆಯೂ ಮಗಳ ರೀಲ್ಸ್ನಲ್ಲಿ ಚಿಂದಿ ಸ್ಟೆಪ್ ಹಾಕಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಚಪ್ಪಲಿ ಧರಿಸದೇ ಮೈಕೆಲ್ ಜಾಕ್ಸನ್ (ಮೈಕಲ್ ಜಾಕ್ಸನ್) ಮೂನ್ ವಾಕ್ ಸ್ಟೆಪ್ ಮಾಡಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
@magic_shop ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗಳು, ಮೈಕೆಲ್ ಜಾಕ್ಸನ್ ಅವರ ಬಿಲ್ಲಿ ಜೀನ್ ಹಾಡಿಗೆ ಡ್ಯಾನ್ಸ್ ಮಾಡಲು ಮುಂದಾಗಿದ್ದಾಳೆ. ಇದೇ ವೇಳೆ ಎಂಟ್ರಿ ಕೊಟ್ಟ ಆಕೆಯ ತಂದೆ ಚಪ್ಪಲಿ ಧರಿಸಿ ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೆಪ್ ಸಖತ್ ಆಗಿದ್ದಾರೆ. ಕೊನೆಗೆ ಮಗಳು ತಂದೆಯೊಂದಿಗೆ ಸ್ಟೆಪ್ ಹಾಕುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಇದನ್ನೂ ಓದಿ: ವೈದ್ಯರು ಪುಟ್ಟ ಕಂದಮ್ಮನನ್ನು ಕೈಗಿಡದಂತೆ ಹೆದರಿದ ತಂದೆ
ಈ ವಿಡಿಯೋ 20 ಮಿಲಿಯನ್ ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಈ ವ್ಯಕ್ತಿಯ ಡ್ಯಾನ್ಸ್ ಡ್ಯಾನ್ಸರ್ ಅವರನ್ನು ಮೀರಿಸುವಂತಿದೆ. ಇತರರು, ಅಂಕಲ್ ಜಾಕ್ಸನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಂಕಲ್ ಎಂದು ಕರೆಯಬೇಡಿ, ಯುವಕನಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(@ಮ್ಯಾಜಿಕ್._.shopp_)