Video: ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ

Video: ವೃತ್ತಿ ಜೀವನದ ಒತ್ತಡಕ್ಕೆ ಮಣಿದು ತಂದೆಗೆ ಕರೆ ಮಾಡಿದ ಯುವತಿ, ಮುಂದೇನಾಯ್ತು ನೋಡಿ


ಬದುಕಿನಲ್ಲಿ (ಜೀವನ) ಯಾವುದೇ ಸಂಬಂಧಗಳು ಬರಲಿ, ಆದರೆ ಕೊನೆತನಕ ಜೊತೆ ನಿಲ್ಲುವುದು ತಂದೆ ತಾಯಿ ಮಾತ್ರ. ಪರಿಶುದ್ಧ ಪ್ರೀತಿ ನೀಡಿ ಕಷ್ಟ ಸುಖದಲ್ಲಿ ನಿಂತು ಸಾಂತ್ವನ ನೀಡುವ ಸಂಬಂಧ ಇದ್ದರೆ ಅದಕ್ಕಿಂತ ಇನ್ನೇನು ಬೇಕು. ಈ ಯುವತಿಯೊಬ್ಬಳು ವೃತ್ತಿ ಜೀವನದ ಒತ್ತಡಕ್ಕೆ ಸಿಲುಕಿ ಅಳುತ್ತಿದ್ದಳು, ತಂದೆಯ (ತಂದೆ) ಸಾಂತ್ವನದ ಮಾತುಗಳು ಮತ್ತೆ ಎದ್ದು ನಿಲ್ಲುವಂತೆ ಮಾಡಿದೆ. ತಂದೆ ಮಗಳ ಬಾಂಧವ್ಯ ಸಾರುವ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

Lakshya metha ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ಹೃದಯಸ್ಪರ್ಶಿ ವೀಡಿಯೊ. ಯುವತಿಯೊಬ್ಬಳು ತನ್ನ ವೃತ್ತಿಜೀವನದ ಅಗಾಧ ಒತ್ತಡದಲ್ಲಿ ಕುಸಿದು ಬೀಳುತ್ತಾಳೆ. ಆದರೆ ಅವಳ ತಂದೆಯ ಶಾಂತ ಮತ್ತು ಪ್ರೀತಿಯ ಮಾತುಗಳು ಅವಳಿಗೆ ಮತ್ತೆ ಎದ್ದು ನಿಲ್ಲಲು ಶಕ್ತಿಯನ್ನು ನೀಡುತ್ತವೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬೆಳಗಿನ ಜಾವ 2 ಗಂಟೆಗೆ ಅಳುತ್ತಾ ತನ್ನ ತಂದೆಗೆ ಕರೆ ಮಾಡುವುದನ್ನು ನೀವು ನೋಡಬಹುದು. ತಂದೆ ಸಮಾಧಾನಪಡಿಸಲು ಪ್ರಯತ್ನಿಸಿದ್ದು ನೀನು ವೈದ್ಯೆಯಾದರೆ ಮಾತ್ರ ಎಲ್ಲವೂ ಆಗುತ್ತದೆ ಎಂದಲ್ಲ, ಇಲ್ಲದಿದ್ದರೆ ಏನೂ ಆಗುವುದಿಲ್ಲ ಎಂದಲ್ಲ. ಇಲ್ಲಿ ಅನೇಕ ಒಳ್ಳೆಯ ಸ್ಥಾನಗಳಿವೆ, ಒಳ್ಳೆಯ ಕೆಲಸಗಳಿವೆ. ಯಾವುದೇ ಒತ್ತಡಕ್ಕೆ ಮಣಿಯಬೇಡ. ಕೂಲ್ ಆಗಿರು. ಕೆಲವೊಮ್ಮೆ ನಿನಗೆ ಓದುವುದರಲ್ಲಿ ಬೇಸರವಾಗುವುದಿಲ್ಲ, ಪರವಾಗಿಲ್ಲ ಓದುವುದನ್ನು ನಿಲ್ಲಿಸು ಎಂದು ಹೇಳುವುದನ್ನು ನೋಡಬಹುದು. ಆ ಬಳಿಕ ನನಗೆ ಇನ್ನೂ ವಯಸ್ಸಾಗಿಲ್ಲ, ಹಣದ ಸಮಸ್ಯೆ ಇಲ್ಲ. ನಾನು ಸಾಕಷ್ಟು ಸಂಪಾದಿಸುತ್ತೇನೆ, ಚಿಂತಿಸಬೇಡ ಎಂದು ಧೈರ್ಯ ತುಂಬುತ್ತಾಳೆ.

ಇದನ್ನೂ ಓದಿ:ಎಂಟು ವರ್ಷಗಳ ಬಳಿಕ ಹೆತ್ತವರನ್ನು ಭೇಟಿಯಾದ ಮಗ, ಕಣ್ಣೀರು ಹಾಕಿದ ಅಪ್ಪ ಅಮ್ಮ

ಈ ವಿಡಿಯೋ ನಾಲ್ಕೂವರೆ ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಇಂತಹ ಸಮಾಧಾನದ ಮಾತುಗಳು ಎಲ್ಲರಿಗೂ ಸಿಗಲ್ಲ. ಮತ್ತೊಬ್ಬ, ಅಪ್ಪ ಮನಸ್ಸು ಯಾವತ್ತು ಮಕ್ಕಳಿಗೆ ಕಷ್ಟ ಆಗಬಾರದು ಎಂದು ಬಯಸುತ್ತದೆ. ಮಗಳು ಕಷ್ಟ ಸುಖದಲ್ಲಿ ನಿಲ್ಲುವ ಅಪ್ಪ ಸಿಕ್ಕವರು ಅದೃಷ್ಟವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *