ಪ್ರೀತಿ (ಪ್ರೀತಿ) ಅಂತ ಬಂದಾಗ ಹೆತ್ತವರ ಬಳಿ ಹೇಳಿ ಏನುದ್ರೆ ಅಂದುಕೊಳ್ತಾರೆ, ಬೇಡ ಅಂದ್ರೆ ಏನ್ ಮಾಡೋದು ಹೀಗೆ ನಾನಾ ರೀತಿಯ ಪ್ರಶ್ನೆ ಕಾಡುತ್ತದೆ. ಆದರೆ ಕೆಲವು ಧೈರ್ಯ ಮಾಡಿ ಪ್ರೀತಿ ವಿಷ್ಯ ತಾಯಿ ಮುಂದೆ ಹೇಳುವುದನ್ನು ನೋಡಬಹುದು. ಆದರೆ ಇಲ್ಲೊಬ್ಬಳು ಮಗಳು ತನ್ನ ತಂದೆ (ತಂದೆ) ಮುಂದೆ ತನಗೆ ಬಾಯ್ ಫ್ರೆಂಡ್ ಇರುವುದಾಗಿ ಹೇಳಿದ್ದಾಳೆ. ಮಗಳ ಮಾತು ಕೇಳಿ ಜೋರಾಗಿ ನಕ್ಕು ಮಗಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
driiiishtiiii) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಗಳು ತಂದೆಯ ಕೈ ಹಿಡಿದುಕೊಂಡು ತನ್ನ ಪ್ರೀತಿ ವಿಷಯ ಹೇಳುತ್ತಿರುವುದನ್ನು ನೋಡಬಹುದು. ತಂದೆ ಕೈ ಹಿಡಿದುಕೊಂಡು ನನಗೆ ಬಾಯ್‌ಫ್ರೆಂಡ್ ಇದ್ದಾನೆ ಪಪ್ಪ ಎಂದು ಹೇಳುತ್ತಾಳೆ. ಆದರೆ ಈ ಯುವತಿಯ ಧ್ವನಿಯಲ್ಲಿ ಭಯ ಹಾಗೂ ಎರಡು ಎದ್ದು ಕಾಣುತ್ತಿದೆ. ಆಗ ತಂದೆ ಇರಲಿ ಬಿಡು, ಅದರಲ್ಲೇನಿದೆ, ಎಲ್ಲರೂ ಪ್ರೀತಿ ಮಾಡ್ತಾರೆ, ನಾನು ಮಾಡಿದ್ದೆ, ನಿಮ್ಮಮ್ಮನೂ ಮಾಡಿದ್ರು ಎಂದು ನಗುತ್ತಾ ಹೇಳುತ್ತಿರುವುದು ಕಾಣಿಸಿತು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಆ ಮಗಳು ಹನ್ನೊಂದು ವರ್ಷದಿಂದ ರಿಲೇಷನ್ ಶಿಪ್ ನಲ್ಲಿ ಇದ್ದೇನೆ ಎಂದು ನಗುತ್ತಲೇ ಎಲ್ಲವನ್ನು ಕೇಳಿಸಿಕೊಂಡರು, ಹುಡುಗನ ಫೋಟೊ ತೋರಿಸು ಎಂದು ಹೇಳಿ ನಗುತ್ತಲೇ ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ
ಈ ವಿಡಿಯೋ 1.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಮುದ್ದಾದ ಕ್ಷಣ, ಅದ್ಭುತ ಸ್ಟೋರಿ. ಕೊಟ್ಟರು, ಬೆಂಬಲ ನೀಡುವ ಹಾಗೂ ಮುದ್ದಾದ ಕುಟುಂಬ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾವನಾತ್ಮಕ ಕ್ಷಣ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ