Headlines

ಮಿಸ್ ಯೂನಿವರ್ಸ್ ಆದ ಮೆಕ್ಸಿಕೊ ಸುಂದರಿ; ಕಾಲಿಗೆ ಗಾಜು ಚುಚ್ಚಿದರೂ ಬಿಡಲಿಲ್ಲ ಛಲ

ಮಿಸ್ ಯೂನಿವರ್ಸ್ ಆದ ಮೆಕ್ಸಿಕೊ ಸುಂದರಿ; ಕಾಲಿಗೆ ಗಾಜು ಚುಚ್ಚಿದರೂ ಬಿಡಲಿಲ್ಲ ಛಲ


74ನೇ ಸಾಲಿನ ಮಿಸ್ ಯೂನಿವರ್ಸ್ ಸಂಪೂರ್ಣಗೊಂಡಿದೆ. ಥೈಲ್ಯಾಂಡ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಮಂದಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಮೇಲಿನ ಮೆಕ್ಸಿಕೊದ ಫಾತಿಮಾ ಬೋಷ್ ಅವರು ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಭಾರತ ಮೂಲದ ಥೈಲ್ಯಾಂಡ್ ಪ್ರಜೆ ಪ್ರವೀಣರ್ ಸಿಂಗ್ ಮೊದಲ ರನ್ನರ್ ಅಪ್ ಆದರು. ಭಾರತ ಪ್ರತಿನಿಧಿಸಿದ್ದ ಮಾಣಿಕಾ ವಿಶ್ವಕರ್ಮ ಅವರು ಟಾಪ್ 12 ಸುತ್ತಿಗೆ ಆಯ್ಕೆ ಆಗಲು ವಿಫಲರಾದರು.

ಫಾತಿಮಾ ಯಾರು?

ಫಾತಿಮಾ ಅವರು ಮೆಕ್ಸಿಕೊದ ತಬಾಸ್ಕೋದವರು. ಟಬಾಸ್ಕೋ ಪ್ರತಿನಿಧಿಸಿ ‘ಮಿಸ್ ಯೂನಿವರ್ಸ್ ಮೆಕ್ಸಿಕೊ’ ಗೆದ್ದ ಮೊದಲಿಗರು ಅವರಾಗಿದ್ದಾರೆ. ಈಗ ಮಿಸ್ ಯೂನಿವರ್ಸ್ ಕಿರೀಟ ಕೂಡ ಧರಿಸಿದ್ದಾರೆ. ಅವರು ಜನಿಸಿದ್ದು 2000ನೇ ಇಸ್ವಿಯಲ್ಲಿ. ಅವರಿಗೆ ಈಗ 25 ವರ್ಷ ವಯಸ್ಸು. ಫಾತಿಮಾ ಬಾಷ್ ಅವರು ಫ್ಯಾಷನ್ ಡಿಸೈನ್ ಓದಿದ್ದಾರೆ.

ಗಾಜು ಚುಚ್ಚಿತ್ತು..

ಫಿನಾಲೆ ನಡೆಯುವುದಕ್ಕೂ ಮೊದಲು ಫಾತಿಮಾ ಹೋಟೆಲ್‌ನಲ್ಲಿ ಇಬ್ಬರು. ಈ ವೇಳೆ ಒಡೆದ ಗಾಜಿನ ಮೇಲೆ ಕಾಲಿಟ್ಟರು. ಅವರ ಪಾದಕ್ಕೆ ಗಾಜಿನ ಚೂರು ಚುಚ್ಚಿತ್ತು. ಈ ವೇಳೆ ವೈದ್ಯಕೀಯ ಚಿಕಿತ್ಸೆಗೆ ಸಮಯವಿಲ್ಲ. ಗಾಯ, ವಿವಾದ ಮತ್ತು ಭಾರೀ ಸ್ಪರ್ಧೆಯ ನಡುವೆಯೂ ಫಾತಿಮಾ ಬಾಷ್ ಶಾಂತತೆ, ಸ್ಪಷ್ಟತೆಯಿಂದ ಮಿಸ್ ಯೂನಿವರ್ಸ್ ಪಟ್ಟ ಪಡೆದರು.

ವಿವಾದ ಏನು?

ಫಾತಿಮಾ ಅವರು ಈ ತಿಂಗಳ ಆರಂಭದಲ್ಲಿ ವಿವಾದ ಒಂದಕ್ಕೆ ಸಿಲುಕಿದ್ದರು. ನವೆಂಬರ್ 4 ರಂದು ಮಿಸ್ ಯೂನಿವರ್ಸ್ ಸ್ಪರ್ಧಿಗಳೊಂದಿಗಿನ ಸಭೆಯನ್ನು ಆಯೋಜನೆ ಮಾಡಲಾಯಿತು. ಈ ವೇಳೆ ಸೌಂದರ್ಯ ಸ್ಪರ್ಧೆಯ ಪ್ರಚಾರ ಕಾರ್ಯಕ್ರಮದಲ್ಲಿ ಫಾತಿಮಾ ಭಾಗವಹಿಸಲಿಲ್ಲ ಎಂದು ಆರೋಪಿಸಲಾಯಿತು. ಈಗ ಅವರಿಗೆ ವಿನ್ನರ್ ಪಟ್ಟ ನೀಡಿರೋದು ಚರ್ಚೆಗೆ ಕಾರಣವಾಗಿದೆ. ಇನ್ನು, ಫೈನಲ್ ಆರಂಭಕ್ಕೂ ಒಂದು ದಿನ ಮೊದಲು ಇಬ್ಬರು ಜಡ್ಜ್‌ಗಳ ಸ್ಪರ್ಧೆಯಿಂದ ಹೊರ ನಡೆದಿದ್ದರು. ಸ್ಪರ್ಧೆ ಮೊದಲೇ ನಡೆಯುವ ಫೈನಲಿಸ್ಟ್‌ಗಳ ಹೆಸರು ಅಂತಿಮವಾಗಿ ಎಂದು ಆರೋಪಿಸಲಾಗಿದೆ.

ಮಾಣಿಕಾ ಹಿನ್ನೆಲೆ

ಭಾರತವನ್ನು ಪ್ರತಿನಿಧಿಸಿದ್ದ ಮಾಣಿಕಾ ಅವರು ರಾಜಸ್ಥಾನದ ಗಂಗಾನಗರದವರು. ಅವರು ರಾಜಕೀಯ ಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಿದ್ದಾರೆ. ಅವರು ಸ್ಪರ್ಧೆಯ ಅಂತಿಮ ಹಂತಕ್ಕೆ ತಲುಪಿದ್ದರು. ಆದರೆ, ಗೆಲುವು ಸಿಕ್ಕಿಲ್ಲ. ಟಾಪ್ 30 ರಲ್ಲಿ ಅವರು, ಟಾಪ್ 12 ರೌಂಡ್‌ಗೆ ಆಯ್ಕೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *