ಜನ್ಮಸಂಖ್ಯೆ ೭, ೮, ೯ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 11ರಂದು ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಮಹಿಳೆಯರಿಗೆ ತವರು ಮನೆಯಲ್ಲಿ ಕೆಲವು ಬೆಳವಣಿಗೆಗಳಿಂದ ಸಂತೋಷ ಆಗಲಿದೆ. ಸಮಾರಂಭಕ್ಕೆ ನಿಮ್ಮ ಉಪಸ್ಥಿತಿಯನ್ನು ಖಾತ್ರಿಪಡಿಸಬೇಕು ಎಂದು ಸ್ನೇಹಿತರು- ಸಂಬಂಧಗಳ ಒತ್ತಡ ಹಾಕಲಾಗುತ್ತದೆ, ಒಂದಲ್ಲಾ ಒಂದು ಕೆಲಸದ ಕಾರಣಕ್ಕೆ ಈ ಬಗ್ಗೆ ಏನೂ ಹೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಹೊಸ ಬಟ್ಟೆ, ಒಡವೆಗಳನ್ನು ಖರೀದಿಸಲು ಹೆಚ್ಚು ಹಣವನ್ನು ಖರ್ಚು ಮಾಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚು ಮಾಡಲಾಗಿರುತ್ತದೆ. ನಿಮ್ಮಿಬ್ಬರ ಸ್ನೇಹಿತರ ಮಧ್ಯೆ ಏರ್ಪಟ್ಟ ಮನಸ್ತಾಪ ದೂರ ಮಾಡುವುದಕ್ಕೆ ರಾಜೀ- ಸಂಧಾನಕ್ಕೆ ಪ್ರಯತ್ನ ಮಾಡಿದ್ದೇನೆ. ನಿಮ್ಮಲ್ಲಿ ಕೆಲವು ಕುಟುಂಬ ಸದಸ್ಯರ ಜೊತೆಗೆ ಹತ್ತಿರದ ಸ್ಥಳಕ್ಕೆ ಕಿರುಪ್ರವಾಸವಾದರೂ ಯೋಗ ಇದೆ, ಹೋಟೆಲ್- ರೆಸ್ಟೋರೆಂಟ್ ಅಥವಾ ರೆಸಾರ್ಟ್ ಗೆ ಹೋಗುವ ಮತ್ತು ಒಟ್ಟಿಗೆ ಸಮಯ ಕಳೆಯುವ ಅವಕಾಶ ದೊರೆಯಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ತಂದೆ- ತಾಯಿಯ ಆರೋಗ್ಯದ ವಿಚಾರಕ್ಕೆ ಆತಂಕಕ್ಕೆ ಗುರಿಯಾಗುತ್ತಾರೆ. ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವ ವಿಚಾರವಾಗಿ ಕ್ರಮ ತಪ್ಪುವುದರಿಂದ ಅಥವಾ ಆಯಾ ಔಷಧದ ಕಂಪನಿಗೆ ಬದಲಾಗಿ, ಆರೋಗ್ಯದಲ್ಲಿ ಏರಿಳಿತ ಆಗಬಹುದು. ನಿಮ್ಮ ಪರಿಚಿತರ ಮನೆಯಲ್ಲಿ ಆಗುವ ಕೌಟುಂಬಿಕ ಬೆಳವಣಿಗೆಗಳಿಂದಾಗಿ ನಿಮಗೆ ಬರಬೇಕಾದ ಹಣಕಾಸಿನ ಬಾಕಿ ವಸೂಲಾತಿಗೆ ತಡೆ ಆಗಬಹುದು.
ಲೇಖನ- ಸ್ವಾತಿ ಎನ್.ಕೆ.