ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 11ರಂದು ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮನೆಗೆ ಟಿವಿ, ರೆಫ್ರಿಜರೇಟರ್ ಅಥವಾ ಡಿಶ್ ವಾಷರ್ ಇಂತಹ ಉಪಕರಣಗಳನ್ನು ಖರೀದಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಮತ್ತೆ ಕೆಲವರಿಗೆ ಇವು ಉಡುಗೊರೆಯಾಗಿ ದೊರೆಯುವ ಯೋಗ ಕೂಡ ಇದೆ. ಸಂಘ- ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಮಾಡುವ ಇರಾ ಇರುವವರು ಅದಕ್ಕೆ ಕಾರ್ಯತಂತ್ರ ರೂಪಿಸಲು ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಮಾಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಂಗೀತಗಾರರು, ಕಲಾವಿದರು, ನೃತ್ಯವನ್ನೇ ವೃತ್ತಿ ಮಾಡಿಕೊಂಡವರಿಗೆ ಹೊಸ ಹೊಸ ಅವಕಾಶ ಸಿಗಲಿದೆ. ವಿದೇಶಗಳಿಂದಲೂ ನಿಮಗೆ ಆಹ್ವಾನ ಬರಬಹುದು. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಅದರ ಮಾರಾಟದ ಮೂಲಕ ಆದಾಯ ಬರುತ್ತಾ ಇರುವವರ ಶಾಖೆಯನ್ನು, ವ್ಯವಹಾರವನ್ನು ವಿಸ್ತರಿಸುವ ಅವಕಾಶಗಳ ಕಡೆಗೆ ನೋಡಲಾಗಿದೆ. ನಿಮ್ಮಲ್ಲಿ ಕೆಲವು ಸಂಬಂಧಿಗಳ ಮನೆಯ ವ್ಯಾಜ್ಯಗಳನ್ನು ಪರಿಹರಿಸಲು ಹೆಚ್ಚು ಸಮಯ ಮೀಸಲು ಇಡಲಾಗಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ದ್ವಿಚಕ್ರ ವಾಹನ ಬಳಕೆಯನ್ನು ಈ ದಿನ ಸಾಧ್ಯವಾದಷ್ಟೂ ಮಾಡದಿರುವುದು ಕ್ಷೇಮ. ಅನಿವಾರ್ಯ ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ, ವೇಗದ ಚಾಲನೆ ಯಾವುದೇ ಕಾರಣಕ್ಕೂ ಬೇಡ. ನಿಮ್ಮಲ್ಲಿ ಕೆಲವರಿಗೆ ದೇವತಾ ಕಾರ್ಯಗಳಲ್ಲಿ ಭಾಗೀ ಆಗುವಂಥ ಯೋಗ ಇದೆ. ಸೈಟು- ಮನೆ ಖರೀದಿಗಾಗಿ ಹಣಕಾಸಿನ ಹೊಂದಾಣಿಕೆಗೆ ಯತ್ನ ಮಾಡುತ್ತಿರುವವರಿಗೆ ಸಾಧ್ಯವಾಗಲಿದೆ.
ಲೇಖನ- ಸ್ವಾತಿ ಎನ್.ಕೆ.