Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 2ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 2ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 2ರ ದಿನಭವಿಷ್ಯ

ಪೈರೈಟ್ ನಿಂದ ಸಿದ್ಧಪಡಿಸಿದ ಫ್ರೇಮ್ ಒಳಗೆ ಏಳು ಕುದುರೆಗಳು ಓಡುತ್ತಿರುವಂತೆ ಚಿತ್ರ ಹಾಕಿರುವ. ಅಂಥದ್ದನ್ನು ನಿಮ್ಮ ಮನೆಯ ಈಶಾನ್ಯದ ಗೋಡೆಯಲ್ಲಿ ಹಾಕಿ. ಅದರಲ್ಲೂ ಆರು ಅಡಿಗಿಂತ ಎತ್ತರದ ಜಾಗದಲ್ಲಿ ಇರಬೇಕು. ಹೀಗೆ ಮಾಡುವುದರಿಂದ ಹಲವು ರೀತಿಯ ಪಾಸಿಟಿವ್ ಬೆಳವಣಿಗೆ ನಿರೀಕ್ಷೆ ಮಾಡಬಹುದು.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮಲ್ಲಿ ಕೆಲವು ಹೊಸ ಭಾಷೆ ಕಲಿಯಲು ಕೋರ್ಸ್ ಗೆ ಸೇರಿಕೊಳ್ಳುವುದರ ಬಗ್ಗೆ ಆಲೋಚನೆ ಮಾಡುತ್ತೀರಿ. ಇಂಟರ್ನ್ ಶಿಪ್ ಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಅವಕಾಶ ಸಿಗಲಿದೆ. ಹಣಕಾಸು ವಿಚಾರದಲ್ಲಿ ನೀವು ಮಾಡಿಕೊಂಡಂಥ ಪ್ಲಾನಿಂಗ್ ಕೈ ಹಿಡಿಯಲಿದೆ. ಸಣ್ಣ ಮಟ್ಟದ ಹೂಡಿಕೆ ಮಾಡಿ ಆರಂಭಿಸಿದ್ದ ವ್ಯವಹಾರ- ವ್ಯಾಪಾರದಲ್ಲಿ ನೀವು ನಿರೀಕ್ಷೆ ಮಾಡಿಲ್ಲದಂಥ ಯಶಸ್ಸು ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕೋರ್ಟ್-ಕಚೇರಿಗಳಲ್ಲಿ ವ್ಯಾಜ್ಯಗಳು ನಡೆಯುತ್ತಿದ್ದರೆ ಅವು ಒತ್ತಡವಾಗಿ ಪರಿಣಮಿಸುತ್ತವೆ. ನಿಮ್ಮಲ್ಲಿ ಕೆಲವರಿಗೆ ಆಸ್ತಿ ಕೈ ಬಿಟ್ಟುಹೋಗುವ ಸುಳಿವು ದೊರೆಯಲಿದೆ. ಇನ್ನು ಚಿನ್ನ- ಬೆಳ್ಳಿ ಇಂಥವುಗಳ ಅಡಮಾನ ಮಾಡಿ, ಸಾಲವನ್ನು ಇದ್ದಲ್ಲಿ ಅದು ಹರಾಜಿಗೆ ಬರುವ ಸಾಧ್ಯತೆಯಿದೆ. ನಿಗದಿತ ದಿನಾಂಕಕ್ಕೆ ಹಣ ಮರುಪಾವತಿ ಮಾಡುವ ಕಡೆಗೆ ನಿಮ್ಮ ಲಕ್ಷ್ಯ ಇರಲಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಒಂದು ಬಗೆಯ ಸಮಾಧಾನ- ಸಂತೃಪ್ತಿ ಹಾಗೂ ಸಾರ್ಥಕ್ಯದ ಭಾವ ನಿಮ್ಮಲ್ಲಿ ಇರಲಿದೆ. ಕೊಟ್ಟ ಮಾತಿನಂತೆಯೇ ಹಾಗೂ ಅಂದುಕೊಂಡ ರೀತಿಯಲ್ಲಿ ಕೆಲಸ- ಕಾರ್ಯಗಳನ್ನು ಮಾಡಿಕೊಡಲಿದ್ದೀರಿ. ಹಣಕಾಸಿನ ಒತ್ತಡಗಳಿಂದ ಹೊರಬರಲು ಮಾರ್ಗೋಪಾಯಗಳು ಗೋಚರಿಸಲಿವೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *