Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 2ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 2ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 2ರ ದಿನಭವಿಷ್ಯ

ಲಕ್ಷ್ಮಿದೇವಿಯ ಪಟದ ಮುಂದೆ ಸಕ್ಕರೆ, ಒಣದ್ರಾಕ್ಷಿ ಹಾಗೂ ಖರ್ಜೂರವನ್ನು ಎರಡೆರಡು ಇಟ್ಟು ನೈವೇದ್ಯ ಮಾಡಿ. ಇದನ್ನು ಬೆಳಗ್ಗೆ ಅಥವಾ ಮಾಡಬಹುದು. ದೀರ್ಘಾವಧಿಗೆ ಹೂಡಿಕೆ ಹಿಂತೆಗೆದುಕೊಳ್ಳಬೇಕಾ ಬೇಡವಾ ಎಂಬ ಗೊಂದಲ ಇದ್ದಲ್ಲಿ ಅದು ನಿವಾರಣೆ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮಗೆ ಗೊತ್ತಿರುವ ಕೌಶಲ, ವಿದ್ಯೆ ಹಾಗೂ ನಿಮಗೆ ಇರುವಂಥ ಈಗಿನ ಅನುಭವಕ್ಕೆ ಬೇಡಿಕೆ ಹೆಚ್ಚಲಿದೆ. ನಿಮ್ಮಲ್ಲಿ ಕೆಲವರಿಗೆ ಏಕಕಾಲಕ್ಕೆ ನಾಲ್ಕಾರು ಕಡೆಯಿಂದ ಉದ್ಯೋಗದ ಆಫರ್ ಬರಬಹುದು. ಸಂಬಳದ ಜೊತೆಗೆ ಲಾಭದಲ್ಲಿ ಸಹ ಇಂತಿಷ್ಟು ಪರ್ಸೆಂಟ್ ಎಂದು ಕೊಡುವುದಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ನಿಮಗೆ ಪ್ರಸ್ತಾವ ಬರುವಂಥ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಬೇಡ ಅಂದುಕೊಂಡಿದ್ದನ್ನೇ ಮಾಡಬೇಕಾದ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಯಾವ ವ್ಯಕ್ತಿ ಜೊತೆಗೆ ಈ ವ್ಯವಹಾರ ಮಾಡಬಾರದು, ಹಣಕಾಸಿನ ವಿಷಯ ಮಾತನಾಡಬಾರದು, ಸಾಲ ಕೇಳಬಾರದು, ಜೊತೆಯಾಗಿ ಕೆಲಸ ಮಾಡಬಾರದು ಹೀಗೆ ಅಂದುಕೊಂಡಿರುತ್ತೀರೋ ಅವರಿಗೆ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ನಿಮಗೆ ಸಂಪೂರ್ಣವಾಗಿ ಮಾಹಿತಿ ಇರುವ ವಿಷಯಗಳನ್ನು ಮಾತ್ರ ಮಾತನಾಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಇನ್ನು ಯಾರ ವೈದ್ಯರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡುತ್ತಾ ಇದ್ದೀರಿ ಅಂಥವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಪರ್ ಫ್ಯೂಮ್, ದುಬಾರಿ ಬ್ರ್ಯಾಂಡ್ ಗಳ ಬಟ್ಟೆ, ಶೂ ಇಂಥವುಗಳ ಮಾರಾಟ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆಯಾಗಲಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *