ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 15ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 15ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 15ರ ದಿನಭವಿಷ್ಯ

ಈ ದಿನ ರುದ್ರ- ಚಮಕದ ಶ್ರವಣವನ್ನು ಮಾಡಿ. ಈಶ್ವರನಿಗೆ ಕ್ಷೀರಾಭಿಷೇಕ ಮಾಡುವುದರಿಂದ ನಿಮ್ಮನ್ನು ಕಾಡುತ್ತಿರುವ ಹಲವು ರೀತಿಯ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಇನ್ ಟ್ಯೂಷನ್ ಜಾಗ್ರತೆ ಆಗುವುದರಿಂದ ಹಲವು ರೀತಿಯ ಅನುಕೂಲಗಳಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಇತರರ ಕಣ್ಣಿಗೆ ಅಥವಾ ದೃಷ್ಟಿ- ಆಲೋಚನೆಗೆ ದಕ್ಕದ ಕೆಲವು ಸಂಗತಿ-ವಸ್ತು, ವಿಷಯಗಳು ನಿಮ್ಮ ಗಮನಕ್ಕೆ ಬರಲಿವೆ. ಎಷ್ಟು ಬೇಗ ಇದರ ಲಾಭವನ್ನು ಪಡೆದುಕೊಳ್ಳುವುದಕ್ಕೆ ಪ್ರತಿಕ್ರಿಯೆ ನೀಡುತ್ತೀರೋ ಅಷ್ಟು ಒಳ್ಳೆಯದು. ಇಷ್ಟು ಸಮಯ ನೀವು ಯಾವುದನ್ನು ವ್ಯರ್ಥ ಹೂಡಿಕೆ ಎಂದುಕೊಂಡಿದ್ದೀರೋ ಅದರಲ್ಲಿ ನಿಮ್ಮ ಅಸಲು ದೊರೆಯಬಹುದು ಅಥವಾ ಹಾಕಿದ್ದ ಅಸಲಿನ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ಕೈ ಸೇರುವ ಸಾಧ್ಯತೆ ಗೋಚರಿಸುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನನಗೆ ಯಾರ ಸಹಾಯವೂ ಬೇಡ ಎಂದು ನಿಮ್ಮೆದುರು ಮಾತನಾಡಿದ್ದ ವ್ಯಕ್ತಿ ಈಗ ತಾನು ಬಹಳ ಕಷ್ಟದಲ್ಲಿ ಇರುತ್ತೇನೆ ಈ ಹಿಂದೆ ತಾನಾಡಿದ ಮಾತುಗಳನ್ನು ಮರೆತು ಸಹಾಯ ಮಾಡುವಂತೆಯೂ ಕೇಳಿಕೊಂಡು ಬರಲಿದ್ದಾರೆ. ಇನ್ನು ನಿಮ್ಮ ಉಳಿತಾಯದ ಹಣವನ್ನು ತೆಗೆದುಕೊಳ್ಳುತ್ತದೆ, ಅದರ ಷೇರುಗಳ ಷೇರುಗಳ ಮೇಲೆಯೋ ಅಥವಾ ಮ್ಯೂಚುವಲ್ ಫಂಡ್ ಮೇಲೋ ಹೂಡಿಕೆ ಎಂದು ಗಂಭೀರವಾಗಿ ಆಲೋಚನೆಯನ್ನು ಪ್ರಾರಂಭಿಸಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಲೈಬ್ರರಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಬಹುದು. ಬಾಡಿಗೆ ಮನೆಯಲ್ಲಿ ವಾಸ ಇರುವವರು ಈಗ ಇರುವ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕು ಎಂದುಕೊಳ್ಳಬೇಕು. ಮಕ್ಕಳ ಶಿಕ್ಷಣ ಹಾಗೂ ಶಾಲೆ ಹಣ- ಸಮಯವನ್ನು ಮೀಸಲಿಟ್ಟು ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ದಿನದ ಕೊನೆಗೆ ಸಮಾಧಾನ ಆಗುವ ಕೆಲವು ಬೆಳವಣಿಗೆಗಳು ಆಗಲಿವೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *