
ಈ ದಿನ ಹಯಗ್ರೀವ ಸೋತ್ರವನ್ನು ಶ್ರವಣ ಮಾಡಿ. ಒಂದು ವೇಳೆ ನಿಮಗೆ ಸಾಧ್ಯವಿದ್ದಲ್ಲಿ ಪಠಣ ಮಾಡಿ. ಪದೇ ಪದೇ ನಿಮ್ಮ ವಿರುದ್ಧ ದೂರು ಬರುತ್ತಿದೆ ಎಂಬ ಆಕ್ಷೇಪದಿಂದ ಹೊರಗೆ ಬರುವುದರಿಂದ ನಿಮಗೆ ಸಹಾಯ ಆಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ವಿವಾಹಿತರಿಗೆ ಸಂಗಾತಿ ಜೊತೆಗೆ ಸ್ವಲ್ಪ ಮಟ್ಟಿಗೆ ಅಭಿಪ್ರಾಯ ಭೇದಗಳು ತಲೆದೋರಬಹುದು. ಅದರಲ್ಲೂ ನಿಮ್ಮ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿಯಿಂದ ಈ ಹಿಂದೆ ಯಾವಾಗಲೋ ಆಗಿದ್ದ ಸಮಸ್ಯೆಗಳನ್ನು ಈಗ ಎತ್ತಬಹುದು. ಆದ್ದರಿಂದ ಸಣ್ಣ- ಪುಟ್ಟ ವಿಚಾರಗಳಿಗೆ ಹೆಚ್ಚಿಗೆ ಗಮನ ನೀಡುವುದಕ್ಕೆ ಹೋಗಬೇಡಿ. ಆಹಾರ- ನೀರು ಸೇವನೆ ಸೇವಿಸಿದರೆ ಹೆಚ್ಚಿನ ಗಮನ ಕೊಡಿ, ಇಲ್ಲದಿದ್ದರೆ ದಿನದ ಕೊನೆಗೆ ಹೊಟ್ಟೆ ಸಮಸ್ಯೆ ಕಾಡಬಹುದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಅವರ ಕೆಲಸಕ್ಕಾಗಿ ನೀವು ಜೊತೆಗೆ ಹೋಗುವ ಸನ್ನಿವೇಶ ಎದುರಾಗಲಿದೆ. ಹಲವು ಜವಾಬ್ದಾರಿಗಳನ್ನು ಪೂರೈಸಿದ ಸಮಾಧಾನವೊಂದು ನಿಮಗೆ ದೊರೆಯಲಿದೆ. ಹಣದ ಹೂಡಿಕೆ, ಉಳಿತಾಯ ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಾಗಿದೆ. ಮನೆಯ ಮಟ್ಟಿಗೆ ನಿಮ್ಮ ಆಲೋಚನೆಗಳು ಫಲಿಸುತ್ತವೆ ಎಂಬ ಭಾವನೆ ನಿಮ್ಮದಾಗಿ ಅದನ್ನು ಮೀರಿದ ವ್ಯಾಪ್ತಿ ನಿಮಗಿದೆ ಎಂದೆನಿಸುವುದಕ್ಕೆ ಶುರುವಾಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಕ್ರೀಡೆಯೋ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಇವುಗಳ ಸ್ಪರ್ಧೆಯೋ ಇಂಥವುಗಳಿಗೆ ಆಯ್ಕೆ ನಡೆಯುತ್ತಿದೆ ಅಂತಾ ಆಸಕ್ತಿ ವಹಿಸಿ ಭಾಗವಹಿಸಿ. ಇದರಿಂದ ಭವಿಷ್ಯದಲ್ಲಿ ನಿಮಗೆ ದೊಡ್ಡ ಅನುಕೂಲ ಆಗುವಂಥ ಯೋಗ ಇದೆ. ಖಾದಿ ವಸ್ತ್ರಗಳ ಮಾರಾಟ ಮಾಡುವುದನ್ನೇ ವ್ಯವಹಾರ ಮಾಡುತ್ತಿರುವವರಿಗೆ ಆ ವ್ಯಾಪಾರದ ಪ್ರಮಾಣ ಕಡಿಮೆ ಮಾಡಬೇಕಾಗಬಹುದು ಅಥವಾ ಸಂಪೂರ್ಣ ನಿಲ್ಲಿಸಿಬಿಡೋಣ ಎಂದೆನಿಸಲಿದೆ.
ಲೇಖನ- ಸ್ವಾತಿ ಎನ್.ಕೆ.