
ಲಕ್ಷ್ಮೀನರಸಿಂಹ ದೇವಾಲಯಕ್ಕೆ ತೆರಳಿ ತುಳಸಿ ಮಾಲೆಯನ್ನು ಸಮರ್ಪಣೆ ಮಾಡಿ. ನಿಮ್ಮನ್ನು ಕಾಡುತ್ತಿರುವ ಆತಂಕ, ಹಿಂಜರಿಕೆ ಹಾಗೂ ಮಾನಸಿಕ ಕ್ಲೇಶ ದೂರವಾಗುವುದಿಲ್ಲ. ಯಾವುದೇ ಕೆಲಸವನ್ನು ಮಾಡಬೇಕೋ ಬೇಡವೋ ಎಂಬ ದ್ವಂದ್ವ ಇದ್ದಲ್ಲಿ ಸ್ಪಷ್ಟತೆ ಸಿಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಮಯದೊಳಗೆ ಪೂರ್ಣಗೊಳಿಸಬೇಕಾದ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿ ಮುಗಿಸಿ. ಇನ್ನು ನೀವೇನಾದರೂ ಹಣ್ಣು- ಹೂವು, ತರಕಾರಿ ಇಂಥವುಗಳ ವ್ಯಾಪಾರವನ್ನು ಮಾಡುವವರಾದರೆ ಹೊಸದಾಗಿ ಹೂಡಿಕೆ ಮಾಡುವ ಕಡೆಗೆ ಆದ್ಯತೆಯನ್ನು ನೀಡಲಾಗುವುದು. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ವಿಚಾರ ಪ್ರಸ್ತಾವ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಚಾಲಕ ವೃತ್ತಿಯಲ್ಲಿ ಇರುವವರಿಗೆ ಒತ್ತಡದ ದಿನ ಇದಾಗಿದೆ. ನೀವು ಓಡಿಸುವ ವಾಹನದ ಸರ್ವೀಸ್ಯಾ, ಅದು ಎಲ್ಲ ರೀತಿಯಲ್ಲೂ ಉತ್ತಮವಾದ ಸ್ಥಿತಿಯಲ್ಲಿದೆ. ಈ ದಿನ ಸಾಧ್ಯವಾದಾಗ ಹನುಮಂತ ದೇವರ ದೇವಾಲಯಕ್ಕೆ ತೆರಳಿ ದರ್ಶನವನ್ನು ಪಡೆಯಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಟಾರ್ಗೆಟ್ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ದಿನ ನಿಮಗೆ ಆದ್ಯತೆಯಾಗಲಿದೆ. ಕಟ್ಟಡ ನಿರ್ಮಾಣ, ರಿನೋವೇಷನ್ ಇಂಥದ್ದನ್ನು ಮಾಡಿಸುತ್ತಾ ಇರುವವರಿಗೆ ಏಕ ಕಾಲಕ್ಕೆ ಹಲವು ಕೆಲಸಗಳು ಹುಡುಕಿಕೊಂಡು ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಆಪ್ತರಾದವರು ಕೆಲಸ ಬಿಡುವ ತೀರ್ಮಾನ ಮಾಡುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ನಿಮ್ಮ ಮೇಲಿನ ಸಂಸ್ಥೆಗೆ ವಿಪರೀತ ನಿರೀಕ್ಷೆ ಇದೆ ಎಂಬುದು ಗಮನಕ್ಕೆ ಬರಲಿದೆ.
ಲೇಖನ- ಸ್ವಾತಿ ಎನ್.ಕೆ.