ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 21ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 21ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 21ರ ದಿನಭವಿಷ್ಯ

ಈ ದಿನ ಅಶಕ್ತರಿಗೆ ಹೊದಿಕೆ, ಸ್ವೆಟರ್, ಶಾಲು ಇಂಥವುಗಳನ್ನು ನೀಡುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಒಂದು ವೇಳೆ ಬಹಳ ಸಮಯದಿಂದ ಸಾಲ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಲ್ಲಿ ನಿಮಗೆ ಸಾಧಕ ಆಗುವ ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಕಾರ್ಪೋರೇಟ್ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ತಂಡವನ್ನು ರೆಸಾರ್ಟ್, ರೆಸ್ಟೋರೆಂಟ್ ಅಥವಾ ಇನ್ಯಾವುದೇ ಚಟುವಟಿಕೆಗಾಗಿ ಕರೆದುಕೊಂಡು ಹೋಗಲು ಯೋಜನೆ ರೂಪಿಸಲು ನಿಮಗಾಗಿ ಜವಾಬ್ದಾರಿಯನ್ನು ವಹಿಸಬಹುದು. ಇನ್ನು ಮುಂದೆ ನಿಮಗೆ ಸಿಗಬಹುದಾದ ಬಡ್ತಿ ಅಥವಾ ಹುದ್ದೆಯ ಬಗ್ಗೆ ಸುಳಿವನ್ನು ಸಹ ಬಿಟ್ಟುಕೊಡಬಹುದು. ಆದ್ದರಿಂದ ಮಾತುಕತೆಯ ವೇಳೆ ಎಚ್ಚರ ವಹಿಸಿ

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಈ ದಿನ ಏನನ್ನು ಕೇಳುವುದಕ್ಕೂ ಹಿಂಜರಿಕೆ ಇಟ್ಟುಕೊಳ್ಳಬೇಡಿ. ನಿರ್ದಿಷ್ಟ ವ್ಯಕ್ತಿಯಿಂದ ಇಂಥದ್ದೊಂದು ನೆರವು ದೊರೆಯಬಹುದು ಎಂದೆನಿಸಿದಾಗ ಅದನ್ನು ಬಾಯಿ ಬಿಟ್ಟು ಕೇಳಿ. ಮಕ್ಕಳ ಶಿಕ್ಷಣದ ಸಲುವಾಗಿ ನಿಮ್ಮಲ್ಲಿ ಹೂಡಿಕೆ ಅಥವಾ ಉಳಿತಾಯವನ್ನು ಪ್ರಾರಂಭಿಸುವ ಸಾಧ್ಯತೆಗಳಿವೆ. ಇನ್ನು ನಿಮ್ಮ ತಂದೆ- ತಾಯಿ ಅಥವಾ ಮನೆಯಲ್ಲಿ ಹಿರಿಯರು ಯಾರಾದರೂ ಇರಬಹುದು, ಅವರಿಗಾಗಿಯೇ ಆರೋಗ್ಯ ವಿಮೆ ಖರೀದಿಸಬೇಕು ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮೊಳಗೆ ಒಂದು ಯೋಚನೆ ಇದ್ದು, ಅದನ್ನು ಬಹಳ ಸಮಯದಿಂದ ಸಂಬಂಧಪಟ್ಟವರ ಎದುರಿಗೆ ಚರ್ಚೆಯನ್ನೇ ಮಾಡಿಲ್ಲ ಅಂತಾ ಈ ದಿನ ಅದಕ್ಕೊಂದು ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರಾದರೂ ಫ್ರಾಂಚೈಸಿ ಅಥವಾ ಡಿಸ್ಟ್ರಿಬ್ಯೂಷನ್ ಪಡೆದುಕೊಳ್ಳುವ ಸಲುವಾಗಿ ಯೋಚನೆ ಮಾಡುವಲ್ಲಿ ಅದಕ್ಕೆ ಬೇಕಾದಂತಹ ಬೆಂಬಲ, ಹಣಕಾಸಿನ ಅನುಕೂಲ ಮೊದಲಾದವು ದೊರೆಯುವ ಸಾಧ್ಯತೆ ಹೆಚ್ಚಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *