ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 22ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 22ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 22ರ ದಿನಭವಿಷ್ಯ

ಈ ದಿನ ಆಂಜನೇಯ ದೇವಸ್ಥಾನಕ್ಕೆ ತೆರಳಿ, ಹತ್ತು ನಿಮಿಷವಾದರೂ ದೇವಾಲಯದಲ್ಲಿ ಕೂತಿದ್ದು ಬನ್ನಿ. ಆರೋಗ್ಯ ಸಮಸ್ಯೆ, ವಿರಸ- ಮನಸ್ತಾಪಗಳು. ದೂರವಾಗಿ ಮಾನಸಿಕ ನೆಮ್ಮದಿ ಸಿಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ವಾಹನವನ್ನು ಸ್ವಂತಕ್ಕೆ ಇಟ್ಟುಕೊಂಡು, ಚಾಲನೆಯನ್ನು ಮಾಡುತ್ತಿರುವವರು ಒಂದೋ ಹೊಸ ವಾಹನವನ್ನು ಖರೀದಿಸಬಹುದು ಅಥವಾ ಅದರ ಜೊತೆಗೆ ಇನ್ನೊಂದನ್ನು ಖರೀದಿಸಬಹುದು, ಬಾಡಿಗೆಗೆ ಬಿಡುವ ಬಗ್ಗೆ ಯೋಚಿಸಬಹುದು. ತುಂಬ ಆತುರವಾಗಿ ಮಾಡಿ ಮುಗಿಸಬೇಕಾದ ಕೆಲಸವೊಂದು ಕಾರ್ಪೆಂಟರ್ ಗಳು, ರೇಲಿಂಗ್, ಪೇಂಟಿಂಗ್ ಅಥವಾ ಎಲೆಕ್ಟ್ರಿಕ್ ಕೆಲಸ ಮಾಡುವವರನ್ನು ಹುಡುಕಿಕೊಂಡು ಬರುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಖಂಡಿತವಾಗಿ ಒಳ್ಳೆಯ ಆದಾಯವಂತೂ ಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿರೀಕ್ಷಿತ ಆದಾಯಗಳು ಈ ದಿನ ನಿಮ್ಮ ಕೈ ಸೇರಲಿವೆ. ಮನಸ್ಸಿಗೆ ಒಂದು ಬಗೆಯ ಸಮಾಧಾನ- ಸಂತೋಷ ಇರಲಿದೆ, ನಿಮ್ಮಲ್ಲಿ ಕೆಲವರು ಪ್ರೀತಿಯನ್ನು ನಿವೇದಿಸಿಕೊಳ್ಳುವಂಥ ಅವಕಾಶಗಳಿವೆ. ಹಣ್ಣು- ತರಕಾರಿಗಳ ಹೋಮ್ ಸೇಲ್ ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಹೆಚ್ಚಿನ ನಿರೀಕ್ಷೆ ಮಾಡಬಹುದು. ಯಾವ ಕಾರಣಕ್ಕೂ ಈಗಿರುವ ಗ್ರಾಹಕರನ್ನು ಕಳೆದುಕೊಳ್ಳಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ದೂರ ಪ್ರಯಾಣದ ಯೋಜನೆ ಹಾಕಿಕೊಂಡವರು ಕ್ಷಣ ಕ್ಷಣದಲ್ಲಿ ಪ್ರಯಾಣವನ್ನು ರದ್ದು ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಬೇರೆಯವರ ಜೊತೆಗೆ ಬರಲೇಬೇಕೆಂದು ಒತ್ತಡ ಹಾಕಿ, ಕೊನೆ ಕ್ಷಣದಲ್ಲಿ ತೆರಳದಿದ್ದರೆ ಹೇಗಾಗಬಹುದು ಎಂಬ ಬಗ್ಗೆ ನೀವೇ ಮೊದಲೇ ಆಲೋಚನೆ ಮಾಡುವುದು ಉತ್ತಮ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *