
ಮೇಧಾ ಸೂಕ್ತ ಶ್ರವಣ ಅಥವಾ ಪಠಣವನ್ನು ಮಾಡಿ. ಅದರಲ್ಲಿಯೂ ಪರೀಕ್ಷೆಗಳಿಗೆ, ಉದ್ಯೋಗದ ಸಲುವಾಗಿ ಇಂಟರ್ ವ್ಯೂಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾ ಇರುವವರಿಗೆ ಹೆಚ್ಚು ಅನುಕೂಲ. ಜೊತೆಗೆ ಜ್ಞಾನ- ನೆನಪಿನಶಕ್ತಿ ಅಗತ್ಯ ಇರುವವರಿಗಂತೂ ಇನ್ನೂ ಹೆಚ್ಚು ಬಲ ದೊರೆಯುತ್ತದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ಆಲೋಚನೆ- ಚಿಂತನೆಗಳು ಸ್ಪಷ್ಟವಾಗಿ ಇರುತ್ತವೆ. ಅದೇ ರೀತಿ ಗಟ್ಟಿಯಾದ ನಿರ್ಣಯ ಸಹ ತೆಗೆದುಕೊಳ್ಳುತ್ತೀರಿ. ಉದ್ಯೋಗದಲ್ಲಿ ನಿಮ್ಮ ನಾಯಕತ್ವ ಗುಣ ಮೆಚ್ಚುಗೆಗೆ ಪಾತ್ರವಾಗುತ್ತದೆ. ನೀವು ಅಂದುಕೊಂಡ ಯೋಜನೆ ಕಾರ್ಯರೂಪಕ್ಕೆ ತರಲು ಸೂಕ್ತ ದಿನವಿದು. ಹೊಸ ಸಂಪಾದನೆ ಮಾರ್ಗೋಪಾಯ ಗೋಚರಿಸುತ್ತದೆ ಅಥವಾ ಬಾಕಿ ಬರಬೇಕಾದ ಹಣ ಸಿಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಪ್ರೀತಿಯಲ್ಲಿ ಇರುವವರು ನೀವು ಮಾತನಾಡುವಾಗ ಆಯ್ಕೆ ಮಾಡಿಕೊಳ್ಳುವ ಪದಗಳ ಬಗ್ಗೆ ಗಮನ ಕೊಡಿ. ಸ್ತ್ರೀರೋಗಗಳು ಅಥವಾ ತೂಕಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು, ನಿಯಮಿತ ವ್ಯಾಯಾಮ ಸಹಾಯಕವಾಗುತ್ತದೆ. ಕಲಿಕೆಗೆ ಉತ್ಸಾಹ ಮೂಡುತ್ತದೆ. ಸ್ನೇಹಿತರಿಂದ ಸಹಾಯ ದೊರೆಯುವ ದಿನ ಇದಿರಲಿದೆ, ಆದರೆ ಅತಿಯಾದ ಅವಲಂಬನೆ ಬೇಡ. ಸರಳತೆ ಮತ್ತು ಸಮಾಧಾನ ಇಂದು ನಿಮ್ಮ ಶಕ್ತಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನಿಮ್ಮ ಕೆಲಸಗಳಲ್ಲಿ ಶಿಸ್ತು ಮತ್ತು ವೇಗ ಎರಡೂ ಈ ದಿನದ ಅಗತ್ಯ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದರಿಂದ ಹೊಸ ಅವಕಾಶಗಳು ದೊರೆಯಲಿವೆ. ನಿಮ್ಮ ತೀರ್ಮಾನಗಳಿಗೆ ಸಹೋದ್ಯೋಗಿಗಳ ಬೆಂಬಲವು ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳುವಾಗ ಅಳೆದು ತೂಗಿ ಬಳಸಿ. ಹಣಕಾಸಿನಲ್ಲಿ ಬಾಕಿ ಉಳಿದ ವಿಷಯಗಳ ಪರಿಹಾರವನ್ನು ಕೇಳುವುದು. ಕುಟುಂಬದ ಸದಸ್ಯರೊಂದಿಗೆ ವ್ಯವಹರಿಸುವಾಗ- ಮಾತುಕತೆಯಾಡುವಾಗ ಅತಿಯಾದ ಭಾವುಕತೆ ಬೇಡ.
ಲೇಖನ- ಸ್ವಾತಿ ಎನ್.ಕೆ.