
ಕೃಷ್ಣನ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ತುಳಸಿ ಹಾರವನ್ನು ಸಮರ್ಪಣೆ ಮಾಡಿ. ಒಂದು ವೇಳೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಇರುವ ಕೃಷ್ಣನ ವಿಗ್ರಹ, ಚಿತ್ರಪಟಕ್ಕೆ ತುಳಸಿ ದಳ, ತುಳಸಿಹಾರವನ್ನು ಅರ್ಪಿಸಿ. ಯಾವುದೇ ವಿಚಾರದಲ್ಲಿ ನಿಮಗೆ ಕಾಡುತ್ತಿರುವ ಅಡೆತಡೆ ನಿವಾರಣೆಯಾಗುತ್ತದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ವಿಶ್ವಾಸಾರ್ಹತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಮಾಡಬೇಕಾದ ಅನಿವಾರ್ಯ ಸೃಷ್ಟಿ ಅಗಲಿದೆ. ಸಂಗಾತಿಯ ಆರ್ಥಿಕ ವಿಚಾರಗಳಿಗೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿದೆ ಎಂಬುದು ಖಾತ್ರಿ ಆಗಲಿದೆ. ಉಪನ್ಯಾಸಕರು- ಮನೆಯಲ್ಲಿಯೇ ಟ್ಯೂಷನ್ ಮಾಡುತ್ತಾ ಆ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಇಳಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಪೂಜಾ ಸಾಮಗ್ರಿಗಳು ಮಾಡಿಸುವುದಕ್ಕೆ- ಖರೀದಿ ಮಾಡುವುದಕ್ಕೆ ಅಥವಾ ದೇವರಮನೆ ರಿನೋವೇಷನ್ ಇಂತಹವುಗಳ ಬಗ್ಗೆ ಈ ದಿನ ಹೆಚ್ಚಿನ ಸಮಯವನ್ನು ಮೀಸಲಿಡಲಾಗಿದೆ. ಮತ್ತೆ ನಿಮ್ಮ ಮನೆಯಲ್ಲಿ ಮನೆಯ ವಾಸ್ತುವಿನಲ್ಲಿ ಆಗಬೇಕಾದ ಬದಲಾವಣೆಗಳು ಇದ್ದಲ್ಲಿ ಅದನ್ನು ಮಾಡಲು ಬೇಕಾದಂತಹ ವ್ಯಕ್ತಿಗಳನ್ನು ಕರೆಸಿ, ಕೆಲಸದ ಬಗ್ಗೆ ಮಾತುಕತೆ ನಡೆಸಲಾಗಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಕೃಷಿ ಅಧ್ಯಯನಗಳಿಗೆ ತಮ್ಮ ಈಗಿನ ಪ್ರಾಜೆಕ್ಟ್ ಜೊತೆಗೆ ಮಹತ್ವಾಕಾಂಕ್ಷೆಯ- ದೊಟ್ಟ ಮಟ್ಟದ- ಪ್ರತಿಷ್ಠಿತ ಸಂಸ್ಥೆಯ ಅನುದಾನದ ಯೋಜನೆಗಳನ್ನು ಮುನ್ನಡೆಸುವಂತೆ ಸೂಚನೆ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಪ್ರಾಜೆಕ್ಟ್ ಇದೆ ಎಂದು ಖಾತ್ರಿ ಸಹ ನಿಮಗೆ ಸಿಗಲಿದೆ. ಡೇರಿ ಉತ್ಪನ್ನಗಳ ಮಾರಾಟ- ವಿತರಣೆ-ಉತ್ಪಾದನೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಅಧಿಕವಾಗುವುದಕ್ಕೆ ನಾನಾ ಅವಕಾಶಗಳು ತೆರೆದುಕೊಳ್ಳಲಿವೆ.
ಲೇಖನ- ಸ್ವಾತಿ ಎನ್.ಕೆ.