
ಅಶಕ್ತರಿಗೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಲು ಸಾಧ್ಯವಾದರೆ ಮಾಡಿ. ಕನಿಷ್ಠ ಒಬ್ಬರಿಗಾದರೂ ಈ ರೀತಿ ಮಾಡುವುದರಿಂದ ದೃಷ್ಟಿದೋಷಗಳು ನಿವಾರಣೆಯಾಗುತ್ತವೆ. ಜೊತೆಗೆ ಹೇಳಲು ಸಾಧ್ಯವಾಗದಂಥ ಅಂಜಿಕೆ- ಹಿಂಜರಿಕೆಗಳು ಇದ್ದಲ್ಲಿ ದೂರವಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಸ್ನೇಹಿತರು- ಸಂಬಂಧಿಗಳ ಮನೆಯಲ್ಲಿ ಆಯೋಜನೆ ಆಗಿರುವ ಕಾರ್ಯಕ್ರಮ- ಸಮಾರಂಭಗಳಿಗೆ ನೆರವು ನೀಡಬೇಕೆಂದು ನಿಮ್ಮಲ್ಲಿ ಕೆಲವರನ್ನು ಜೊತೆಗೆ ಬರುವಂತೆ ಕೇಳಿಕೊಳ್ಳಲಿದ್ದಾರೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಹೂಂ ಅನ್ನುವ ಮುನ್ನ ಯೋಚಿಸುವುದು ಒಳ್ಳೆಯದು. ಏಕೆಂದರೆ ಈ ದಿನ ಇರುವಂಥ ನಿರುತ್ಸಾಹ ಅಥವಾ ಏಕಾಗ್ರತೆ ಇಲ್ಲದಿರುವುದು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ದೇವಸ್ಥಾನ- ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ನಿಮಗೆ ಅಂಥದ್ದೊಂದು ಉದ್ದೇಶ ಇದೆಯೋ ಇಲ್ಲವೋ ಕೊನೆಗೆ ತಮ್ಮ ಜೊತೆಗೆ ಡ್ರೈವಿಂಗ್ ಮಾಡುವುದಕ್ಕೆ ಜನರಿಲ್ಲ, ಆದ್ದರಿಂದ ತಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಳ್ಳಿ, ಆ ಮೂಲಕವಾದರೂ ನಿಮಗೆ ಇಂಥದ್ದೊಂದು ಅವಕಾಶ ಸಿಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಈ ದಿನದ ಬಹುಪಾಲು ಸಮಯ ನಿಮಗೊಂದು ನೀರಸತೆ ಕಾಡಲಿದೆ. ಎಂದಿನ ಉತ್ಸಾಹ- ಚಟುವಟಿಕೆಯಲ್ಲಿ ಕೆಲಸ- ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಇನ್ನು ನಿಮ್ಮಲ್ಲಿ ಯಾರ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತೀರೋ ಅಂಥವರಿಗೆ ಈಗ ಮಾಡುತ್ತಿರುವ ಕೆಲಸದ ಜೊತೆಗೆ ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸೂಚನೆ ನೀಡಬಹುದು. ಈ ದಿನ ಸಾಧ್ಯವಾದಷ್ಟೂ ಬಿಳಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.