
ಲಕ್ಷ್ಮೀದೇವಿಗೆ ಸಿಹಿಪದಾರ್ಥದ ನೈವೇದ್ಯವನ್ನು ಮಾಡಿ. ಅದು ಸಕ್ಕರೆ ಆಗಿರಲಿ, ದ್ರಾಕ್ಷಿಯೇ ಆಗಿರಲಿ. ಹೀಗೆ ಮಾಡುವುದರಿಂದ ಆದಾಯದಲ್ಲಿ ಸ್ಥಿರತೆ ಬರುತ್ತದೆ. ಜೊತೆಗೆ ಸ್ವಂತ ವ್ಯವಹಾರ, ವ್ಯಾಪಾರ ಮಾಡುವವರು, ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವವರಿಗೆ ಅನಕೂಲ ಆಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಒಂದು ಕೆಲಸ ಮುಗಿಸಲು ನಾಲ್ಕಾರು ಸಲ ಆಗಬೇಕು ಎಂಬ ಪರಿಸ್ಥಿತಿ ಎದುರಿಸುತ್ತೀರಿ. ನೀವು ಈ ದಿನ ಮನೆಗೆ ಬೇಕಾದಂಥ ದಿನಸಿ ಪದಾರ್ಥಗಳನ್ನು ಖರೀದಿಸುವಂತೆ ಇದ್ದಲ್ಲಿ ಗುಣಮಟ್ಟದ ಬಗ್ಗೆ ಹೆಚ್ಚು ನಿಗಾ ವಹಿಸಿ. ನಿಮ್ಮ ವೈಯಕ್ತಿಕ ನಿರ್ಧಾರಗಳಲ್ಲಿ ವಿಪರೀತ ಮೂಗು ತೂರಿಸಲಾಗುತ್ತಿದೆ, ಇದು ಒಂದು ರೀತಿಯ ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದು ಸಂಬಂಧಿಸಿದ ವ್ಯಕ್ತಿಗಳಿಗೆ ಯಾವ ಮುಲಾಜು ಸಹ ನೋಡಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಬೆಳಗ್ಗೆ ಹಾಸಿಗೆಯಿಂದ ಎದ್ದ ಕ್ಷಣದಿಂದಲೇ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿರುತ್ತದೆ. ಕುಟುಂಬದ ಸದಸ್ಯರೊಬ್ಬರ ಆರೋಗ್ಯದ ಸ್ಥಿತಿ ಸ್ವಲ್ಪ ಮಟ್ಟಿಗೆ ಚಿಂತೆಗೆ ಕಾರಣ ಆಗಲಿದೆ. ಮಕ್ಕಳ ಒತ್ತಾಯದ ನೀವು ತೆರಳುವಂಥ ಸ್ಥಳದಲ್ಲಿ ವಿಪರೀತ ಜನರು ಸೇರಿರುವುದು ನಿಮಗೆ ದಣಿವು, ಮುಜುಗರ ಉಂಟು. ವಾಹನ ಪಾರ್ಕಿಂಗ್ ಬಗ್ಗೆ ಮುಂಚಿತವಾಗಿಯೇ ಪ್ಲಾನಿಂಗ್ ಮಾಡಿಕೊಳ್ಳುವುದು ಒಳ್ಳೆಯದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮಗೆ ಗೊತ್ತಿರುವ ವಿಷಯ- ವಿಚಾರವನ್ನು ಎಷ್ಟು ಹತ್ತಿರದ ಸ್ನೇಹಿತರಾದರೂ ಉಚಿತವಾಗಿ ಹಂಚಿಕೊಳ್ಳಬಾರದು ಎಂಬ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ್ದೀರಿ. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಆದಾಯ ಮತ್ತು ಲಾಭದಲ್ಲಿ ಏರಿಕೆ ಆಗುವ ಸಾಧ್ಯತೆಗಳಿವೆ. ಸಣ್ಣ ಅಳತೆಯ ಫಾರ್ಮ್ ಹೌಸ್ ವೊಂದು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವ ಆಸ್ತಿಯೊಂದು ದೊರೆಯಲಿದೆ.
ಲೇಖನ- ಸ್ವಾತಿ ಎನ್.ಕೆ.