ಹಿರಿಯ ನಟ ದಿವಂಗತ ಕೆಎಸ್ ಅಶ್ವಥ್ ಅವರ ಮಗ ಮತ್ತು ಹೆಸರಾಂತ ನಟರೂ ಆಗಿರುವ ಶಂಕರ್ ಅಶ್ವಥ್ ಅವರ ಜೀವನ ನಿರ್ವಹಣೆಗೆ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿರುವ ಸುದ್ದಿ ಈ ಹಿಂದೆ ವೈರಲ್ ಆಗಿದೆ. ಅಂಥ ಅನೇಕ ಪ್ರಸಂಗಗಳು ಸಮಾಜದ ವಿವಿಧ ಸ್ತರಗಳಲ್ಲಿ ಕಾಣಸಿಗುತ್ತಲೇ ಇರುತ್ತವೆ. ಬಹಳ ಸಿನಿಮೀಯ ರೀತಿಯಲ್ಲಿ ಶಾಕಿಂಗ್ ಕೊಡುವ ಪ್ರಸಂಗದಲ್ಲಿ ಭಾರತೀಯ ಉದ್ಯಮಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫಿಜಿ (ಫಿಜಿ) ದೇಶದ ಬಹಳ ದೊಡ್ಡ ಉದ್ಯಮಿಯೊಬ್ಬರು ಊಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಘಟನೆಯನ್ನು ಹಂಚಿಕೊಂಡಿದ್ದಾರೆ. ರೋಚಕ ಸಿನಿಮಾ ಸ್ಟೋರಿಯಾಗಬಲ್ಲಂತಹ ಪ್ರಸಂಗವದು.
ನವ್ ಷಾ ಎಂಬ ಗುಜರಾತಿ ಉದ್ಯಮಿ ಫಿಜಿಗೆ ಹೋದಾಗ ಅವರ ಊಬರ್ ಚಾಲಕರಾಗಿದ್ದು 86 ವರ್ಷದ ವ್ಯಕ್ತಿ. ಹಾಗೆಯೇ ಇರುವಾಗ, ಕ್ಯಾಬ್ ಚಾಲಕರಾಗಿ ಬರುವ ಆದಾಯದ ವೆಚ್ಚವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಆ ಅಜ್ಜನಿಗೆ ಕೇಳಿದಿರಿ. ಅದಕ್ಕೆ ಬಂದ ಉತ್ತರ ನಿಜಕ್ಕೂ ಶಾಕಿಂಗ್ ಎನಿಸುವಂಥದ್ದು.
ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಪತ್ನಿಗೆ ಕೊಟ್ಟ 12 ಕೋಟಿ ರೂ ಬೆಲೆಯ ಫ್ಯಾಂಟಮ್ ಕಾರು
ಈ ಅಜ್ಜನ ಬ್ಯೂಸಿನೆಸ್‌ಗಳು ಎಷ್ಟಿವೆ ನೋಡಿ..!
86 ವರ್ಷದ ಈ ಅಜ್ಜ ಹಲವು ಬ್ಯುಸಿನೆಸ್‌ಗಳನ್ನು ಹೊಂದಿರುವ ಉದ್ಯಮಿ. ಭಾರತ ಮೂಲದವರು. ಇವರ ತಂದೆ ಗುಜರಾತ್ನಿಂದ ಫಿಜಿಗೆ ಬಂದು ಬ್ಯೂಸಿನೆಸ್ ಬೆಳೆಸಿದವರಂತೆ. ಫಿಜಿಯಲ್ಲಿ 13 ಆಭರಣ ಮಳಿಗೆಗಳು, 6 ರೆಸ್ಟೋರೆಂಟ್‌ಗಳು, 4 ಸೂಪರ್ ಮಾರ್ಕೆಟ್‌ಗಳು, ಹೋಲ್ಸೇಲ್ ರೀಟೇಲ್ ಪರ್ಫ್ಯೂಮ್ ಉದ್ಯಮ, ಒಂದು ದಿನಪತ್ರಿಕೆ ಹೀಗೆ ಹಲವು ಉದ್ಯಮಗಳನ್ನು ಇವರು ಹೊಂದಿದ್ದಾರೆ. ಇವರೇ ಹೇಳಿಕೊಂಡಂತೆ ಇವರದ್ದು 175 ಮಿಲಿಯನ್ ಡಾಲರ್ ಉದ್ಯಮ ಸಾಮ್ರಾಜ್ಯ. ಸುಮಾರು 1,500 ಕೋಟಿ ರೂ ಮೌಲ್ಯ ಇರುವ ಬ್ಯೂಸಿನೆಸ್ ಮ್ಯಾನ್ ಅವರು.
ಊಬರ್ ಡ್ರೈವರ್ ಆಗಿರುವುದು ಯಾಕೆ?
ಇಷ್ಟೆಲ್ಲಾ ಶ್ರೀಮಂತಿಕೆ ಹಾಗೂ ಬ್ಯೂಸಿನೆಸ್ ಇದ್ದರೂ ಈ ವ್ಯಕ್ತಿ ಊಬರ್ ಡ್ರೈವರ್ ಕೆಲಸ ಯಾಕೆ ಎಂದು ಯಾರಿಗಾದರೂ ಅನಿಸಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ನವ್ ಷಾ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಅಜ್ಜ ಹೇಳಿರುವ ಪ್ರಕಾರ ಹೆಣ್ಮಕ್ಕಳನ್ನು ಓದಲು ಈ ಕೆಲಸ ಮಾಡುತ್ತಿದ್ದಾರಂತೆ. ಊಬರ್ ಡ್ರೈವಿಂಗ್‌ನಲ್ಲಿ ಬಂದ ಸಂಪಾದನೆಯಲ್ಲಿ ಇವರು ಭಾರತದಲ್ಲಿ 24 ಹೆಣ್ಮಕ್ಕಳನ್ನು ಓದುತ್ತಾರಂತೆ. ಇದು ಇವತ್ತು ನಿನ್ನೆಯದಲ್ಲ, ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಈ ಕಾಯಕವಾಗುತ್ತಿದೆ.
ಇದನ್ನೂ ಓದಿ: ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಅದರಲ್ಲಿ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ
ಯಾರು ಈ ಊಬರ್ ಡ್ರೈಬರ್? ಮೋತಿಭಾಯ್ ಗ್ರೂಪ್ನ ಮುಖ್ಯಸ್ಥರಾ?
ಆ ವಿಡಿಯೋದಲ್ಲಿ ಈ ಅಜ್ಜ ತನ್ನ ಬಳಿ ಇರುವ ಬ್ಯೂಸಿನೆಸ್‌ನಲ್ಲಿ ಫಿಜಿ ಟೈಮ್ಸ್ ದಿನಪತ್ರಿಕೆಯ ಹೆಸರನ್ನೂ ಹೇಳಿದ್ದಾರೆ. ಫಿಜಿ ಟೈಮ್ಸ್ ಪತ್ರಿಕೆಯು ಫಿಜಿ ದೇಶದ ಪ್ರಖ್ಯಾತ ಉದ್ಯಮ ಸಮೂಹವೆನಿಸಿದ ಮೋತಿಭಾಯ್ ಗ್ರೂಪ್‌ಗೆ ಸೇರಿದೆ.
1929 ರಲ್ಲಿ ಭಾರತದಿಂದ ಮೋತಿಭಾಯ್ ಪಟೇಲ್ ಅವರು 24 ನೇ ವಯಸ್ಸಿನಲ್ಲಿ ಫಿಜಿಗೆ ಬಂದು ಬ್ಯೂಸಿನೆಸ್ ಪ್ರಾರಂಭಿಸಿದರು. ದಿನಸಿ ಅಂಗಡಿಯಿಂದ ಶುರುವಾದ ಬ್ಯುಸಿನೆಸ್ ಇವತ್ತು ದೊಡ್ಡ ಉದ್ಯಮ ಸಮೂಹವಾಗಿದೆ. ಊಬರ್ ಡ್ರೈವರ್ ಆಗಿರುವ 86 ವರ್ಷದ ಅಜ್ಜ ನೀಡಿದ ವಿವರವು ಈ ಮಾಹಿತಿಗೆ ಹೋಲಿಕೆಯಾಗುತ್ತದೆ. ಮೋತಿಭಾಯ್ ಪಟೇಲ್ ಅವರ ಮಗನಾಗಿರಬಹುದಾ ಈ ಊಬರ್ ಡ್ರೈವರ್?
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ