
ಕನ್ನಡ ಚಿತ್ರರಂಗವನ್ನು ಅನೇಕ ಕಡೆಗಳಲ್ಲಿ ಕಡೆಗಣಿಸುವ ಕೆಲಸ ಆಗುತ್ತಲೇ ಇದೆ. ಈ ಮೊದಲು ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂದ ನಟರನ್ನು ಕಡೆಗಣಿಸಿದ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಈಗ ಫಿಲ್ಮ್ಫೇರ್ (ಫಿಲ್ಮಾ ದರ) ಅದೇ ತಪ್ಪನ್ನು ಮಾಡಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ. ತಪ್ಪನ್ನು ತಿದ್ದುಕೊಂಡು ಅವರು ಕ್ಷಮೆ ಕೇಳಬೇಕು ಎಂಬ ಆಗ್ರಹ ಕೂಡಿದೆ.
ಫಿಲ್ಮ್ ಫೇರ್ ಅವಾರ್ಡ್ ಪ್ರಾರಂಭವಾಯಿತು 1954 ರಲ್ಲಿ. ಹಿಂದಿ ಸಿನಿಮಾ ರಂಗದ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸುವ ಉದ್ದೇಶದಿಂದ ಇದನ್ನು ಬಳಸಲಾಗಿದೆ. ಆ ಬಳಿಕ 1964ರಲ್ಲಿ ‘ಫಿಲ್ಮ್ ಫೇರ್ ಸೌತ್’ ಅವಾರ್ಡ್ ಕಾರ್ಯಕ್ರಮ ಪ್ರಾರಂಭವಾಯಿತು. ಈಗ ಫಿಲ್ಮ್ ಫೇರ್ ಮ್ಯಾಗಜಿನ್ ಫೋಟೋಶೂಟ್ ಮಾಡಲಾಗಿದೆ. ಇದರಲ್ಲಿ ಕನ್ನಡ ಚಿತ್ರರಂಗದವರನ್ನು ಕಡೆಗಣಿಸಲಾಗಿದೆ.
ಇದನ್ನೂ ಓದಿ: 15ನೇ ವಯಸ್ಸಿಗೆ ನಟಿ; 8 ಫಿಲ್ಮ್ಫೇರ್ ಅವಾರ್ಡ್; ಜಯಾ ಬಚ್ಚನ್ ನಡೆದು ಬಂದ ಹಾದಿ
ಫಿಲ್ಮ್‌ಫೇರ್ ಮ್ಯಾಗಜಿನ್ ಮುಖಪುಟ ರಿವೀಲ್ ಮಾಡಲಾಗಿದೆ. ಇದರಲ್ಲಿ ತಮಿಳಿನಿಂದ ಶಿವಕಾರ್ತಿಕೇಯ, ಅರವಿಂದ್ ಸ್ವಾಮಿ, ಮಲಯಾಳಂನಿಂದ ಮಮ್ಮೂಟ್ಟಿ, ತೆಲುಗಿನಿಂದ ಅಲ್ಲು ಅರ್ಜುನ್ ಇದ್ದಾರೆ. ದಕ್ಷಿಣದ ನಟಿಯಾದ ಭಾವನಾ, ಕಾಜಲ್ ಅಗರ್ ವಾಲ್, ಸಾಯಿ ಪಲ್ಲವಿ ಪೋಸ್ಟರ್ ನಲ್ಲಿದ್ದಾರೆ. ಆದರೆ ಎಲ್ಲಿಯೂ ಕನ್ನಡ ಕಲಾವಿದರಿಲ್ಲ.
ಐಕಾನ್ಗಳು, ಟ್ರೇಲ್ಬ್ಲೇಜರ್ಗಳು ಮತ್ತು ದಂತಕಥೆಗಳು!
ನಮ್ಮ ಮಾರ್ಚ್ ಕವರ್ ಸ್ಟಾರ್ಗಳನ್ನು ಭೇಟಿ ಮಾಡಿ: ಮಮ್ಮುಟ್ಟಿ, ಅಲ್ಲು ಅರ್ಜುನ್, ಅರವಿಂದ್ ಸ್ವಾಮಿ, ಶಿವಕಾರ್ತಿಕೇಯನ್, ಸಾಯಿ ಪಲ್ಲವಿ, ಭಾವನಾ ಮತ್ತು ಕಾಜಲ್ ಅಗರ್ವಾಲ್, ಕೇರಳ ಪ್ರವಾಸೋದ್ಯಮದೊಂದಿಗೆ 70 ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ನಲ್ಲಿ ಸ್ಟಾರ್ ಪವರ್ ಮತ್ತು ಸಿನಿಮೀಯ ವೈಭವವನ್ನು ವಿವರಿಸುತ್ತಾರೆ.
ನಿಮ್ಮ ನಕಲನ್ನು ಈಗಲೇ ಪಡೆದುಕೊಳ್ಳಿ… pic.twitter.com/rvV69SY5A2
— ಫಿಲ್ಮ್ಫೇರ್ (@filmfare) ಮಾರ್ಚ್ 23, 2026
ಯಶ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಿಚ್ಚ ಸುದೀಪ್ ಪರಿಚಯ ಇಡೀ ದೇಶದವರಿಗೆ ಇದೆ. ‘ಕಾಂತಾರ’ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಶಿವರಾಜ್ ಕುಮಾರ್ ಅತ್ಯಂತ ಹಿರಿಯ ನಟರು. ರುಕ್ಮಿಣಿ ವಸಂತ್ ಕೂಡ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಇವರಲ್ಲಿ ಯಾರಾದರೂ ಒಬ್ಬರಾದರೂ ಮ್ಯಾಗಜಿನ್ ಶೂಟ್‌ನಲ್ಲಿ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
