ಹಾಸನಾಂಬ ದರ್ಶನಕ್ಕೆ ಇಂದೇ ಕೊನೆದಿನ: 8 ಕಿ.ಮೀ ಮುಟ್ಟಿದ ಧರ್ಮದರ್ಶನ ಸಾಲು

ಹಾಸನಾಂಬ ದರ್ಶನಕ್ಕೆ ಇಂದೇ ಕೊನೆದಿನ: 8 ಕಿ.ಮೀ ಮುಟ್ಟಿದ ಧರ್ಮದರ್ಶನ ಸಾಲು


ಹಾಸನ, (ಅಕ್ಟೋಬರ್ 22): ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದು(ಅಕ್ಟೋಬರ್ 22) ಕೊನೆ ದಿನವಾಗಿದೆ. ಹೀಗಾಗಿ ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಅಕ್ಟೋಬರ್ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಒಟ್ಟು 23 ಲಕ್ಷಕ್ಕೂ ಅಧಿಕ ಭಕ್ತರು ಇದ್ದಾರೆ. ಇತಿಹಾಸದಲ್ಲೇ ಇದೇ ಬಾರಿ ಅತಿ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ ಎಂಬ ದಾಖಲೆ ಸೃಷ್ಟಿಯಾಗಿದೆ.

ಇನ್ನು ಇಂದು ಹಾಸನಾಂಬೆ ದರ್ಶನಕ್ಕೆ ಇಂದು(ಅಕ್ಟೋಬರ್ 22) ಕೊನೆ ದಿನವಾಗಿ ಭಕ್ತಸಾಗರವೇ ಹರಿದುಬರುತ್ತಿದೆ, ಸದ್ಯ ಸನ್ನಿಧಾನದಲ್ಲಿ ಧರ್ಮದರ್ಶನ ಸಾಲು ಎಂಟು ಕಿಲೋಮೀಟರ್ ಮುಟ್ಟಿದೆ.



Source link

Leave a Reply

Your email address will not be published. Required fields are marked *