
ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ವಿವಾಹ ಆಗುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ಈಗ ರಶ್ಮಿಕಾ-ವಿಜಯ್ ನಟನೆಯಿಂದ ಒಂದು ಬ್ರೇಕ್ ಆಗಿದ್ದು, ಹಾಯಾಗಿ ಸುತ್ತಾಡುತ್ತಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂದೇಶವನ್ನು ನೀಡಿದ್ದಾರೆ. ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿ ಹುಡುಕಿಕೊಳ್ಳಿ’ ಎಂದು ಅವರು ಹೇಳಿದ್ದಾರೆ.
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅದ್ದೂರಿಯಾಗಿ ವಿವಾಹ ಆದರು. ಮದುವೆ ಬಳಿಕ ವಿಜಯ್ ಹುಟ್ಟೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆ ಯೋಜನೆ. ಹೈದರಾಬಾದ್‌ನಲ್ಲಿಯೂ ಆರತಕ್ಷತೆ. ಈಗ ರಶ್ಮಿಕಾಗೋಸ್ಕರ ಪ್ರೀತಿಯ ಸಂದೇಶವನ್ನು ಒಬ್ಬರು ಬರೆದುಕೊಂಡಿದ್ದರು. ಇದು ರಶ್ಮಿಕಾ ಅವರನ್ನು ಭಾವನಾತ್ಮಕವಾಗಿಸಿತು.
ಇದನ್ನೂ ಓದಿ: ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್
ಧಾಮಿನಿ ಎಂಬುವವರು ರಶ್ಮಿಕಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಈ ಟ್ವೀಟ್ ನ ರಶ್ಮಿಕಾ ರೀಟ್ವೀಟ್ ಮಾಡಿದ್ದಾರೆ. ‘ಇಷ್ಟು ದಿನ ನನ್ನ ಬಗ್ಗೆ ಬರೆದದ್ದನ್ನು ಓದಿ ನಾನು ಇಷ್ಟೊಂದು ಭಾವನಾತ್ಮಕವಾಗಿ ವರ್ತಿಸಿಲ್ಲ. ನಾನು ಹೇಳಲು ಬಯಸುವುದು ಬಹಳಷ್ಟಿದೆ. ಆದರೆ ನಾನು ಹೇಳೋದು ತುಂಬಾ ಕಡಿಮೆ. ನಾನು ನನ್ನದೇ ಆದ ಜಾಗವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅದನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿಯ ಬಗ್ಗೆ ನಾನು ಹೇಳುವುದು ಇಷ್ಟೇ, ‘ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಪ್ರೀತಿಸಿ’ ಎಂದು ಅವರು ಬರೆದಿದ್ದಾರೆ.
ಬಹಳ ದಿನಗಳಿಂದ ನನ್ನ ಬಗ್ಗೆ ಇಷ್ಟು ಬರೆದದ್ದನ್ನು ಓದುವಷ್ಟು ಭಾವುಕನಾಗಿರಲಿಲ್ಲ..
ನಾನು ಹೇಳಲು ತುಂಬಾ ಇದೆ ಆದರೆ ನಾನು ಹೇಳಲು ತುಂಬಾ ಕಡಿಮೆ.ನಾನು ನನ್ನ ಸ್ವಂತ ಕೋಣೆಯನ್ನು ಹುಡುಕುತ್ತಿದ್ದೇನೆ ಮತ್ತು ಅದು ಪ್ರಯಾಣಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ..
ಅದನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು..ಪ್ರೀತಿಯ ಬಗ್ಗೆ ನಾನು… https://t.co/f7W5vv0UJ5
— ರಶ್ಮಿಕಾ ಮಂದಣ್ಣ (@iamRashmika) ಮಾರ್ಚ್ 8, 2026
ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳು ಬರೆಯುವ ಕಮೆಂಟ್ ಮತ್ತು ಪೋಸ್ಟ್‌ಗಳನ್ನು ಓದುತ್ತಾರಂತೆ. ಈ ಕಾರಣದಿಂದಲೇ ಧಾಮಿನಿ ಅವರು ಬರೆದ ಪೋಸ್ಟ್‌ನ ರಶ್ಮಿಕಾ ಓದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
