ಹೆಲ್ಸಿಂಕಿ, ಜನವರಿ 19: ಡಾಟಾ ಸೆಂಟರ್ ಸಿಸ್ಟಂಗಳಿಂದ ಸೃಷ್ಟಿಯಾಗುವ ಶಾಖವನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಆವಿಷ್ಕಾರ ಮಾಡಿರುವ ಫಿನ್ಲ್ಯಾಂಡ್ ಸಂಶೋಧಕರು ಇದೀಗ ಕೇಬಲ್ ವೈರ್ ಇಲ್ಲದೆಯೇ ವಿದ್ಯುತ್ ಹರಿಯುವ ಪ್ರಯೋಗವನ್ನು ನಡೆಸುತ್ತಿದ್ದಾರೆ. ಈ ತಂತ್ರಜ್ಞಾನ ಅಭಿವೃದ್ದಿ ಆಗುತ್ತಿದೆ ಇತ್ತೀಚಿನ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿವೆ. ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಬಳಸುವ ರೀತಿಯಲ್ಲಿ ವಿದ್ಯುತ್ ಬಳಸುವ ಒಂದು ಟೆಕ್ನಾಲಜಿ ಬರುವ ಸಾಧ್ಯತೆಯಿದೆ.
ವೈರ್ಲೆಸ್ ವಿದ್ಯುತ್ ಹೇಗೆ ಸಾಧ್ಯ?
ವೈಫೈ ಮೂಲಕ ಡಾಟಾ ವರ್ಗಾವಣೆ ಸಾಧ್ಯವಾಗುವಂತೆ, ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ (ವಿದ್ಯುದ್ಕಾಂತೀಯ) ಮತ್ತು ರಿಸೋನೆಂಟ್ ಕಪ್ ಟೆಕ್ನಿಕ್ (ಪ್ರತಿಧ್ವನಿಸುವ) ಉಪಯೋಗಿಸಿ ಗಾಳಿಯ ಮೂಲಕ ವಿದ್ಯುತ್ ಪ್ರವಹಿಸುತ್ತದೆ ಎಂದು ಫಿನ್ನಿಶ್ ಸಂಶೋಧಕರು ತಮ್ಮ ಪ್ರಯೋಗಗಳನ್ನು ಪ್ರಯೋಗಿಸಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನ್ ನಲ್ಲಿ ಸಖತ್ ಫೀಚರ್ಸ್; ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳು ಕಠಿಣ
ಹಲವಾರು ಈ ಕ್ಷೇತ್ರದಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಟ್ರಾನ್ಸ್ ಮಿಟ್ಟರ್ ಮತ್ತು ರಿಸೀವರ್ ನಡುವೆ ಯಾವುದೇ ಕೇಬಲ್ ಕನೆಕ್ಷನ್ ಇಲ್ಲದೆ, ರೇಡಿಯೋ ಫ್ರೀಕ್ವೆಸ್ಸಿ ಹೊಂದಾಣಿಕೆ ಮೂಲಕ ವಿದ್ಯುತ್ ಅನ್ನು ಸಾಗಿಸಲು ಸಾಧ್ಯ. ಅದನ್ನು ಸಾಧ್ಯವಾಗಿಸುವಂತಹ ತಂತ್ರಜ್ಞಾನದ ಆವಿಷ್ಕಾರಕ್ಕೆ ಪ್ರಯೋಗಗಳು ನಡೆಯುತ್ತಿವೆ. ಫಿನ್ಲ್ಯಾಂಡ್ ಪ್ರದೇಶಗಳು ಒಂದು ಹಂತಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಸದ್ಯ ಬಹಳ ಕಿರು ಅಂತರಕ್ಕೆ ಮಾತ್ರ ಈ ವಿದ್ಯುತ್ ವರ್ಗಾವಣೆ ಮಾಡಲು ಸಾಧ್ಯ.
ಅಮೆರಿಕದ ‘ದರ್ಪ’ದಿಂದಲೂ ಇಂಥದ್ದೊಂದು ಪ್ರಯೋಗ
ಅಮೆರಿಕದ ಡಿಫೆನ್ಸ್ ರಿಸರ್ಚ್ ಸಂಸ್ಥೆಯಾದ ದರ್ಪ (DARPA) ವೈರ್ಲೆಸ್ ತಂತ್ರಜ್ಞಾನ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದೆ. ಲೇಸರ್ ಮೂಲಕ ವೈರ್ಲೆಸ್ ಆಗಿ ಸುಮಾರು 8-9 ಕಿಮೀ ದೂರ ವಿದ್ಯುತ್ ಅನ್ನು ಹರಿಯಿಸಲು ಯಶಸ್ವಿಯಾಗಿದೆ. ಪಾರ್ಸಿಸ್ಟೆಂಟ್ ಆಪ್ಟಿಕಲ್ ವೈರ್ಲೆಸ್ ಎನರ್ಜಿ ರಿಲೇ ಯೋಜನೆ ಭಾಗವಾಗಿ ಇತ್ತೀಚಿನ ಪ್ರಯೋಗದಲ್ಲಿ 8.6 ಕಿಮೀ ದೂರಕ್ಕೆ 800 ವ್ಯಾಟ್ನಷ್ಟು ವಿದ್ಯುತ್ ಅನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಇದೇ ಸಂಸ್ಥೆಯು 1.7 ಕಿಮೀ ದೂರ 25 ಸೆಕೆಂಡುಗಳ ಕಾಲ 230 ವ್ಯಾಟ್ ವಿದ್ಯುತ್ ಅನ್ನು ಹರಿಸಿತು.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಶೂರೆನ್ಸ್, ಝೀರೋ ಬ್ಯಾಲನ್ಸ್
ವೈರ್ಲೆಸ್ ವಿದ್ಯುತ್ ರವಾನೆ ತತ್ವ ಹೊಸದೇನಲ್ಲ. ಇದರ ಪ್ರಯೋಗ ಆರಂಭಕ್ಕೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಇತ್ತೀಚೆಗೆ ಈ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೆಚ್ಚುತ್ತಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಶಕ್ತಿ ಬಳಸಿ ವಿದ್ಯುತ್ ತಯಾರಿಸಿ ಭೂಮಿಗೆ ಹರಿಯುವ ತಂತ್ರಜ್ಞಾನದ ಆವಿಷ್ಕಾರಕ್ಕೂ ಪ್ರಯೋಗಗಳು ನಡೆಯುತ್ತಿವೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ