Headlines

ಗಾನವಿ ಕುಟುಂಬಸ್ಥರಿಗೆ ಶಾಕ್​​: ಸೂರಜ್​​ ಸಾವಿನ ಸಂಬಂಧ 9 ಮಂದಿ ಮೇಲೆ FIR

ಗಾನವಿ ಕುಟುಂಬಸ್ಥರಿಗೆ ಶಾಕ್​​: ಸೂರಜ್​​ ಸಾವಿನ ಸಂಬಂಧ 9 ಮಂದಿ ಮೇಲೆ FIR


ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಸುದ್ದಿಯಾಗಿರುವ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಸಂಬಂಧ ಆಕೆಯ ಕುಟುಂಬಸ್ಥರ ವಿರುದ್ಧ ಈಗ ಎಫ್ ಐಆರ್ ದಾಖಲಾಗಿದೆ. ಸೂರಜ್ ಅತ್ತಿಗೆ ನೀಡಿದ ದೂರಿನ ಮೇರೆಗೆ 9 ಮಂದಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪತ್ನಿ ಗಾನವಿ ಕುಟುಂಬಸ್ಥರ ಆರೋಪಗಳ ಹಿನ್ನೆಲೆ ಪತಿ ಸೂರಜ್ ಕೂಡ ಸೂಸೈಡ್ ಮಾಡಿಕೊಂಡಿದ್ದ. ಹೀಗಾಗಿ ಆತನ ಸಾವಿಗೆ ಗಾನವಿ ಕುಟುಂಬಸ್ಥರೇ ಕಾರಣ ಎಂದು ದೂರು ನೀಡಿದ್ದಾರೆ.

ಸೂರಜ್ ತಾಯಿ ಜಯಂತಿ ಮೇಲೆ ವರದಕ್ಷಿಣೆ ಕಿರುಕುಳ ಆರೋಪದ ಜೊತೆಗೆ ಹನಿಮೂನ್ ಗೆ ತೆರಳಿದ್ದ ಸೂರಜ್ ಮತ್ತು ಗಾನವಿ ದಂಪತಿ ಶ್ರೀಲಂಕಾದಿಂದ ಅರ್ಧಕ್ಕೆ ಹಿಂತಿರುಗಿದ್ದ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ಮಾನಹಾನಿಕಾರ ಆರೋಪಗಳಿಂದ ಮನನೊಂದು ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೂರಜ್ ಸಹೋದರ ಸಂಜಯ್ ಪತ್ನಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಗಾನವಿ ಕುಟುಂಬಸ್ಥರಾದ ರಾಧಾ, ಬಾಬುಗೌಡ, ಕಾರ್ತಿಕ್, ಮಹದೇವ, ಗಗನ್, ಶಶಿಕುಮಾರ್, ರುಕ್ಮಿಣಿ, ಅಭಿಲಾಷ್, ಅಭಿಷೇಕ್ ವಿರುದ್ಧ ಕೇಸು ದಾಖಲಾಗಿದೆ.

ಇದನ್ನೂ ಓದಿ: ಗಾನವಿ-ಸೂರಜ್ ಪ್ರಕರಣ; ಹನಿಮೂನ್ ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು

ಹನಿಮೂನ್ ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ವೇಳೆ ಗಾನವಿ ಲವ್ ವಿಚಾರ ಸೂರಜ್ ಗೆ ಗೊತ್ತಾಗಿದೆ. ಹರ್ಷ ಎಂಬಾತನನ್ನ ಪ್ರೀತಿಸುತ್ತಿದ್ದಳು, ಅವನನ್ನೆ ಮದುವೆಯಾಗುತ್ತೇನೆ ಎಂದು ಗಾನವಿ ಹೇಳಿದ್ದಳು. ಈ ವಿಚಾರ ಕೇಳಿ ಸೂರಜ್ ದಿಗ್ಭ್ರಾಂತನಾಗಿದ್ದ. ಆದರೆ ಆ ವಿಷಯವನ್ನು ಮುಚ್ಚಿಟ್ಟು ಸೂರಜ್ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಗಾನವಿ ಸಹೋದರರು ಸೂರಜ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಎಲ್ಲಾ ವಿಚಾರಗಳಿಂದ ಮನನೊಂದು ಸೂರಜ್ ಪ್ರಾಣ ಕಳೆದುಕೊಂಡಿದ್ದಾರೆ, ಅವರ ತಾಯಿ ಜಯಂತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಅಕ್ಟೋಬರ್ 29 ರಂದು ಗಾನವಿ ಮತ್ತು ಸೂರಜ್ ಮದುವೆ ನಡೆದಿದ್ದು, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್ ಕೂಡ ಆಯೋಜಿಸಲಾಗಿತ್ತು. ಬಳಿಕ ಹನಿಮೂನ್ ಗೆಂದು ಶ್ರೀಲಂಕಾಕ್ಕೆ ತೆರಳಿದ್ದ ಇವರು ಅರ್ಧದಲ್ಲೇ ಹಿಂದಿರುಗಿದ್ದರು. ಆ ಬೆನ್ನಲ್ಲೇ 26 ವರ್ಷದ ಗಾನವಿ ಆತ್ಮಹತ್ಯೆ ಯತ್ನ ನಡೆಸಿದ್ದಳು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೆ ಆಕೆ ಕಾಣಿಸಿಕೊಂಡಿದ್ದಾಳೆ. ಮಗಳ ಸಾವಿಗೆ ಸೂರಜ್ ಕುಟುಂಬಸ್ಥರೇ ಕಾರಣ. ಆತ ಗಂಡಸೇ ಅಲ್ಲ ಎಂಬಿತ್ಯಾದಿ ಆರೋಪ ಗಾನವಿ ಕುಟುಂಬಸ್ಥರಿಂದ ಕೇಳಿಬಂದಿತ್ತು. ಈ ನಡುವೆ ಸೂರಜ್ ಕೂಡ ಆತ್ಮಹತ್ಯೆ ಶರಣಾಗಿರೋದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:43 am, ಗುರುವಾರ, 1 ಜನವರಿ 26



Source link

Leave a Reply

Your email address will not be published. Required fields are marked *