Headlines

ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ: 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ: 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ: 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾಗಿವೆ.

ರಾಯಚೂರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕುರಿ ದೊಡ್ಡಿಗೆ ಬೆಂಕಿ ಬಿದ್ದ ಪರಿಣಾಮ ಶೆಡ್‌ನಲ್ಲಿದ್ದ ಸುಮಾರು 700ಕ್ಕೂ ಅಧಿಕ ಕುರಿಗಳು ಬೆಂಕಿಗಾಹುತಿಯಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ.

ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ ಕುರಿ ಶೆಡ್ ಇದಾಗಿದ್ದು, ದೊಡ್ಡದಾದ ಶೆಡ್ ಮಾಡಿ ಸುಮಾರು‌ 700ಕ್ಕೂ ಹೆಚ್ಚು ಕುರಿಗಳನ್ನು ಸಾಕಾಣಿಕೆ ಮಾಡಿದ್ದರು.

ನಿನ್ನೆ ತಡ ರಾತ್ರಿ ಶೆಡ್‌ಗೆ ಬೆಂಕಿ ಬಿದ್ದಿದ್ದು ನೋಡಿ ಇಬ್ಬರು ಕೆಲಸಗಾರರು ಬೆಂಕಿ ಬಿದ್ದಿದ್ದನ್ನು ನೋಡಿ ಶೆಡ್ ನೋಡಿಕೊಳ್ತಿದ್ದ ಇಬ್ಬರು ಕೆಲಸಗಾರರು ಜೋರಾಗಿ ಕಿರುಚಿಕೊಂಡಿದ್ದಾರೆ.

ಅವರ ಕಿರುಚಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡುವ ವೇಳೆಗಾಗಲೇ ಇಡೀ ಕುರಿ ಶೆಡ್ ಬೆಂಕಿಗಾಹುತಿಯಾಗಿದ್ದು, ಶೆಡ್‌ನಲ್ಲಿದ್ದ ಎಲ್ಲಾ ಕುರಿಗಳು ಸಜೀವ ದಹನಗೊಂಡಿವೆ.

ಇದನ್ನೂ ಓದಿ: ಜೊತೆಯಾಗಿ ಮದುವೆಗೆ ಬಂದ ದಳಪತಿ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು

ಸ್ಥಳಕ್ಕೆ ಸಿಂಧನೂರು ಸಿಂಧನೂರು ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ಕುರಿ ಶೆಡ್ ಮಾಲೀಕ ಮಧುಸೂದನ್ ರೆಡ್ಡಿ ಆಗ್ರಹಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಇದನ್ನೂ ಓದಿ: ಇರಾನ್ ಯುದ್ಧದ ಮಧ್ಯೆ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ

Source link

Leave a Reply

Your email address will not be published. Required fields are marked *