Headlines

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?

ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಯಾವಾಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ, ಸಮಯ, ದಿನಾಂಕದ ಕುತೂಹಲ ಜೊತೆಗೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಾ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

2026ರ ಮೊದಲ ಸೂರ್ಯಗ್ರಹಣಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ರಿಂಗ್ ಆಫ್ ಫೈರ್ ಎಂದೇ ಜನಪ್ರಿಯಗೊಂಡಿರುವ ಕಂಕಣ ಸೂರ್ಯಗ್ರಹಣದ ಕುರಿತು ಚರ್ಚೆಗಳು ನಡೆಯುತ್ತಿದೆ. ಸೌರಮಂಡಲದ ಕೌತುಕಕ್ಕೆ 2026ರ ಫೆಬ್ರವರಿ ತಿಂಗಳು ಸಾಕ್ಷಿಯಾಗಲಿದೆ. ವಿಜ್ಞಾನಿಗಳು ಉತ್ಸುಕರಾಗಿದ್ದರೆ, ಇತ್ತ ಭಾರತೀಯರು ಸಂಪ್ರದಾಯಬದ್ಧವಾಗಿ ಗ್ರಹಣ ಆಚರಿಸಲು ತಯಾರಿ ಆರಂಭಿಸಿದ್ದಾರೆ.

ಈ ವರ್ಷದ ಮೊದಲ ಸೂರ್ಯಗ್ರಹಣ, ಅದ ಕೂಡ ಕಂಕಣ ಸೂರ್ಯಗ್ರಹಣ ಫೆಬ್ರವರಿ 17ರಂದು ಘಟಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.31ಕ್ಕೆ ಕಂಕಣ ಸೂರ್ಯಗ್ರಹಣ ಆರಂಭಿಸಲಿದೆ. ಫೆಬ್ರವರಿ 17 ಮಂಗಳವಾರ ಬರಲಿದೆ. ಹೀಗಾಗಿ ಭಾರತೀಯ ಸಂಪ್ರದಾಯದ ಪ್ರಕಾರವೂ ವಿಶೇಷ ದಿನವಾಗಿದೆ.

ಕಂಕಣ ಸೂರ್ಯಗ್ರಹಣ ಅತ್ಯಂತ ಅಪರೂಪದ ವಿದ್ಯಮಾನ. ಇಷ್ಟೇ ಅಲ್ಲ ಅತ್ಯಂತ ಆಕರ್ಷಕ ಗ್ರಹಣವಾಗಿದೆ. ಆದರೆ ಈ ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತ ಮಾತ್ರವಲ್ಲ ಏಷ್ಯಾದ ಬಹುತೇಕ ಕಡೆ ಗೋಚರಿಸುವುದಿಲ್ಲ. ಹೀಗಾಗಿ ಯಾವುದೇ ಸಲಕರಣೆ ಇದ್ದರೂ ಭಾರತದಲ್ಲಿ ಫೆ.17ರ ಕಂಕಣ ಸೂರ್ಯಗ್ರಹಣ ನೋಡಲು ಸಾಧ್ಯವಿಲ್ಲ.

ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಬಂದಾಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ. ಹೀಗೆ ಘಟಿಸಿದಾಗ ಚಂದ್ರ ಸೂರ್ಯನಿಗಿಂತ ಸಲ್ಪ ಚಿಕ್ಕದಾಗಿ ಗೋಚರಿಸುತ್ತದೆ. ಇದರಿಂದ ಚಂದ್ರನಿಗೆ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರಹಣ ಸಂಭವಿಸುವಾಗ ಸೂರ್ಯನ ಬೆಳಕಿಗೆ ಚಂದ್ರ ಅಡ್ಡಿಯಾಗುತ್ತಾನೆ. ಆದರೆ ಸೂರ್ಯ ಸುತ್ತಲು ರಿಂಗ್ ಆಕಾರದಲ್ಲಿ ಹೊಳೆಯಲಿದೆ. ಇದೇ ಕಂಕಣ ಸೂರ್ಯಗ್ರಹಣ.

ಕಂಕಣ ಸೂರ್ಯಗ್ರಹಣ ಸರಿಸುಮಾರು 2 ನಿಮಿಷ 20 ನಿಮಿಷ ಕಾಲ ಘಟಿಸುವ ಸಾಧ್ಯತೆ ಇದೆ. ಸೂರ್ಯನ ಸುತ್ತಲು ಉಂಗುರ ರೀತಿ ಗೋಚರಿಸುವ ಕಂಕಣ ಸೂರ್ಯಗ್ರಹಣ ವಿಜ್ಞಾನಿಗಳಿಗೆ ಪ್ರತಿ ಬಾರಿ ಅತ್ಯಂತ ವಿಶೇಷ. ಸೋಲಾರ್ ಫಿಲ್ಟರ್ ಮೂಲಕ ಕಂಕಣ ಸೂರ್ಯಗ್ರಹಣ ವೀಕ್ಷಣೆ ಉತ್ತಮ.

ಕಂಕಣ ಸೂರ್ಯಗ್ರಹಣ ಭಾರತ ಸೇರಿದಂತೆ ಏಷ್ಯಾದಲ್ಲಿ ಗೋಚರಿಸುವುದಿಲ್ಲ. ಆದರೆ ಅಂಟಾರ್ಕ್ಟಿಕಾದಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ. ಇನ್ನು ಅರ್ಜೆಂಟೀನಾ, ಸೌತ್ ಆಫ್ರಿಕಾದ ಕೆಲ ಭಾಗದಲ್ಲಿ ಗೋಚರಿಸುವ ಸಾಧ್ಯತೆ ಇದೆ. ಆದರೆ ಈ ಭಾಗದಲ್ಲಿ ಸಂಪೂರ್ಣ ಸ್ಪಷ್ಟತೆ ಇರುವುದಿಲ್ಲ.

ಈ ಬಾರಿಯ ಕಂಕಣ ಸೂರ್ಯಗ್ರಹಣ ಎಲ್ಲಿ ಗೋಚರ

Source link

Leave a Reply

Your email address will not be published. Required fields are marked *