Headlines

ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು

ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು

ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು

Womens wellness tips: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಹೆಣ್ಣಿನ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಕುತೂಹಲ ಮತ್ತು ಆತಂಕ ಇರುವುದು ಸಹಜ. ಈ ಕುರಿತು ಇರುವ ಭಯ ಮತ್ತು ತಪ್ಪು ಕಲ್ಪನೆಗಳನ್ನು ಬದಿಗಿಟ್ಟು, ವೈದ್ಯಕೀಯ ಲೋಕವು ಹೇಳುವ ನೈಜ ಸಂಗತಿಗಳು ಇಲ್ಲಿವೆ.

ಪ್ರತಿ ಮಹಿಳೆಯ ಜೀವನದಲ್ಲಿಯೂ ಮೊದಲ ಬಾರಿಯ ಲೈಂಗಿಕ ಅನುಭವವು ಅತ್ಯಂತ ವಿಶೇಷ ಮತ್ತು ಭಾವನಾತ್ಮಕ ಕ್ಷಣವಾಗಿರುತ್ತದೆ. ಆದರೆ ಈ ಮೊದಲ ಅನುಭವವು ಕೇವಲ ಭಾವನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಮಹಿಳೆಯ ದೇಹದಲ್ಲಿ ಅನೇಕ ಭೌತಿಕ ಮತ್ತು ಜೈವಿಕ ಬದಲಾವಣೆಗಳಿಗೆ ನಾಂದಿ ಹಾಡುತ್ತದೆ. ಮೊದಲ ಬಾರಿ ದೈಹಿಕವಾಗಿ ಒಂದಾದಾಗ ದೇಹದಲ್ಲಿ ನೋವು ಉಂಟಾಗುವುದು ಸಹಜವೇ? ಹೈಮೆನ್ (Hymen) ಬಗ್ಗೆ ಇರುವ ತಪ್ಪು ಕಲ್ಪನೆಗಳೇನು? ಮತ್ತು ಈ ಕ್ರಿಯೆಯ ನಂತರ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ? ಈ ಎಲ್ಲಾ ಕುತೂಹಲಕಾರಿ ಮತ್ತು ಅಗತ್ಯ ಮಾಹಿತಿಯನ್ನು ವೈದ್ಯಕೀಯ ಸಂಶೋಧನೆಗಳ ಆಧಾರದ ಮೇಲೆ ಈ ಲೇಖನದಲ್ಲಿ ತಿಳಿಯೋಣ.

ಅಮೆರಿಕನ್ ಕಾಲೇಜ್ ಆಫ್ ಅಬ್ಸ್ಟೆಟ್ರಿಷಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್ (ACOG) ಅಧ್ಯಯನದ ಪ್ರಕಾರ, ಮೊದಲ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ಮಹಿಳೆಯರು ಆನಂದಕ್ಕಿಂತ ಹೆಚ್ಚಾಗಿ ನೋವನ್ನು ಅನುಭವಿಸುತ್ತಾರೆ. ಸುಮಾರು ಶೇ. 75 ರಷ್ಟು ದಂಪತಿಗಳು ಈ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ವರದಿ ತಿಳಿಸಿದೆ.

ಕೆನಡಿಯನ್ ಮೆಡಿಕಲ್ ಜರ್ನಲ್ ದತ್ತಾಂಶದ ಪ್ರಕಾರ, ಮೊದಲ ಕ್ರಿಯೆಯ ನಂತರ ಕೆಲವರಲ್ಲಿ (0.7-9%) ರಕ್ತಸ್ರಾವ ಉಂಟಾಗಬಹುದು. ಹೈಮೆನ್ (Hymen/ಕನ್ಯಾಪೊರೆ) ಹರಿಯುವುದರಿಂದ ಹೀಗಾಗುತ್ತದೆ. ಇದಕ್ಕೆ ಗಾಬರಿಯಾಗುವ ಅಗತ್ಯವಿಲ್ಲ, ಇದು ಕೆಲವು ಗಂಟೆಗಳಲ್ಲಿ ಅಥವಾ ಒಂದು ದಿನದಲ್ಲಿ ಕಡಿಮೆಯಾಗುತ್ತದೆ. ಒಂದು ವೇಳೆ ರಕ್ತಸ್ರಾವ ನಿಲ್ಲದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ದೈಹಿಕ ಸಂಬಂಧದ ನಂತರ ಜನನಾಂಗದ ಭಾಗದಲ್ಲಿ ಉರಿ ಅಥವಾ ಚರ್ಮದ ಕಿರಿಕಿರಿ ಉಂಟಾಗಬಹುದು. ನೈಸರ್ಗಿಕ ಲೂಬ್ರಿಕೇಶನ್ ಕೊರತೆ ಮತ್ತು ಘರ್ಷಣೆಯಿಂದ ಹೀಗಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಸ್ವಲ್ಪ ಇಕ್ಕಟ್ಟೆನಿಸಿದರೂ, ಇದು ಸಾಮಾನ್ಯವಾಗಿ ಒಂದು ದಿನದಲ್ಲಿ ಸರಿಯಾಗುತ್ತದೆ.

ಲೈಂಗಿಕ ಪ್ರಚೋದನೆಯ ಸಮಯದಲ್ಲಿ ಉಂಟಾಗುವ ತೀವ್ರ ಭಾವನೆಯಿಂದಾಗಿ ಸ್ತನಗಳ ಗಾತ್ರದಲ್ಲಿ ತಾತ್ಕಾಲಿಕ ಬದಲಾವಣೆ ಕಂಡುಬರಬಹುದು ಮತ್ತು ನಿಪ್ಪಲ್ಸ್ (Nipples) ಸ್ವಲ್ಪ ಗಟ್ಟಿಯಾಗಬಹುದು. ಇದು ಕೇವಲ ಆ ಸಮಯದಲ್ಲಿ ಮಾತ್ರ ಇರುತ್ತದೆ ಮತ್ತು ಕ್ರಿಯೆಯ ನಂತರ ದೇಹವು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಆರಂಭದಲ್ಲಿ ನೋವು ಅಥವಾ ಇಕ್ಕಟ್ಟೆನಿಸಿದರೂ, ಹೈಮೆನ್ ತೆರವುಗೊಂಡು ಜನನಾಂಗದ ರಚನೆಯಲ್ಲಿ ಸ್ವಲ್ಪ ಬದಲಾವಣೆ ಉಂಟಾದ ನಂತರ ನೋವು ಕಡಿಮೆಯಾಗಿ ಕ್ರಮೇಣ ಆನಂದ ಹೆಚ್ಚಾಗುತ್ತದೆ. ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ಆರೋಗ್ಯಕರ ದೈಹಿಕ ಸಂಬಂಧ ಬೆಳೆಸಿದರೆ ದೇಹದಲ್ಲಿ ‘ಆಕ್ಸಿಟೋಸಿನ್’ (ಹ್ಯಾಪಿ ಹಾರ್ಮೋನ್) ಬಿಡುಗಡೆಯಾಗಿ ಮನಸ್ಸು ಶಾಂತವಾಗಿರುತ್ತದೆ.

Source link

Leave a Reply

Your email address will not be published. Required fields are marked *