ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಖಮೇನಿ? ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಮೊದಲ ಪೋಸ್ಟ್ ಮಾಡಲಾಗಿದೆ. ಖಮೇನಿ ಹತ್ಯೆಯಾದ ಬಳಿಕ ಇದೀಗ ಪ್ರತೀಕಾರದ ಪೋಸ್ಟ್ ಖಮೇನಿ ಅಧಿಕೃತ ಖಾತೆಯಿಂದ ಪೋಸ್ಟ್ ಆಗಿದೆ.

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಖಮೇನಿ ಹತ್ಯೆಯಾಗಿದ್ದಾರೆ. ಈ ಕುರಿತು ಇರಾನ್ ಸ್ಪಷ್ಟಪಡಿಸಿತ್ತು. ಇರಾನ್, ಭಾರತದ ಕೆಲವೆಡೆ ಸೇರಿದಂತೆ ವಿಶ್ವದೆಲ್ಲೆಡೆ ಶೋಕಾಚರಣೆ ಆಚರಿಸಲಾಗಿದೆ. ಇದೇ ವೇಳೆ ಹಲವಡೆ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆದಿದೆ. ಆದರೆ ಇದೀಗ ಹತ್ಯೆಯಾದ ಆಯತೊಲ್ಲಾ ಖಮೇನಿ ಅಧಿಕೃತ ಎಕ್ಸ್ ಖಾತೆಯಿಂದ ಪ್ರತೀಕಾರದ ಪೋಸ್ಟ್ ಭಾರಿ ಸಂಚಲನ ಸೃಷ್ಟಿಸಿದೆ.

ಹತ್ಯೆಯಾಗಿರುವ ಖಮೇನಿ ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ? ಈ ಅನುಮಾನ ಮೂಡಲು ಕಾರಣ ಇದೀಗ ಖಮೇನಿ ಅಧಿಕೃತ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಅದು ಕೂಡ ಪ್ರತೀಕಾರದ ಪೋಸ್ಟ್. ಯಹೂದಿಗಳು ದೊಡ್ಡ ತಪ್ಪು ಮಾಡಿದ್ದಾರೆ. ದೇವರ ಅನುಗ್ರಹದಿಂದ ಈ ಯೂಹೂದಿ ಆಡಳಿತ ರಾಜ್ಯ ಕಂಗೆಡಲಿದೆ ಎಂದು ಪೋಸ್ಟ್ ಮಾಡಲಾಗಿದೆ.

ಬಲೈಸ್ಟಿಕ್ ಮಿಸೈಲ್ ದಾಳಿ ಕುರಿತು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಇರಾನ್ ಅತ್ಯಂತ ಶಕ್ತಿಶಾಲಿ ಮಿಸೈಲ್ ದಾಳಿ ನಡೆಸಲಿದೆ ಅನ್ನೋ ಸೂಚನೆ ಜೊತೆಗೆ ಎಚ್ಚರಿಕೆ ನೀಡಿದೆ. ಖಮೇನಿ ಖಾತೆಯಿಂದ ಈ ಪೋಸ್ಟ್ ಸಂಚಲನ ಸೃಷ್ಟಿಸುತ್ತಿದ್ದಂತೆ ಖಮೇನಿ ರಹಸ್ಯ ಸ್ಥಳದಲ್ಲಿ ಜೀವಂತವಾಗಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿದೆ.

ಫೆಬ್ರವರಿ 28ರಂದು ಇಸ್ರೇಲ್ ಅಮೆರಿಕ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿದ್ದಾರೆ. ಮಾರ್ಚ್ 1 ರಂದು ಇರಾನ್ ಖಮೇನಿ ಹತ್ಯೆಯನ್ನು ಖಚಿತಪಡಿಸಿತ್ತು. ಇದೀಗ ಇರಾನ್ ಸರ್ಕಾರ, ಖಮೇನಿ ಎಕ್ಸ್ ಖಾತೆ ಮೂಲಕ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಖಮೇನಿ ಜೀವಂತವಾಗಿಲ್ಲ.

ಖಮೇನಿ ಪೋಸ್ಟ್ ಬೆನ್ನಲ್ಲೇ ಇಸ್ರೇಲ್ ಹಾಗೂ ಅಮರಿಕ ಯುದ್ದ ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಈಗಾಗಲೇ ಡೋನಾಲ್ಡ್ ಟ್ರಂಪ್ ಸ್ಪಷ್ಟ ಸಂದೇಶ ರವಾನಿಸಿದ್ದರೆ. ಭೇಷರತ್ ಶರಣಾಗತಿ ಹಾಗೂ ಷರತ್ತಿಗೆ ಒಪ್ಪಿದರೆ ಮಾತ್ರ ಯುದ್ಧ ಸ್ಥಗಿತ. ಇಲ್ಲದಿದ್ದರೆ ಮುಗಿಸಿ ಬಿಡುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.

ಇಸ್ರೇಲ್ ಹಾಗೂ ಅಮೆರಿಕ ಇರಾನ್ ಮೇಲೆ ಸತತ ದಾಳಿ ನಡೆಸುತ್ತಿದೆ. ಕೆಲವೇ ಗಂಟೆಗಳಲ್ಲಿ ಇರಾನ್ ಕತೆ ಮುಗಿಸಲು ಹೊರಟಿದ್ದ ಇಸ್ರೇಲ್ ಅಮೆರಿಕಗೆ ಇದೀಗ 6 ದಿನ ಕಳೆದರೂ ಸಂಪೂರ್ಣ ಮೇಲುಗೈ ಸಾಧ್ಯವಾಗಿಲ್ಲ. ಇತ್ತ ಇರಾನ್ ಮಿಸೈಲ್ ಮೂಲಕ ಪ್ರತಿದಾಳಿ ನಡೆಸುತ್ತಿದೆ. ಹೀಗಾಗಿ ಯುದ್ದ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

Source link