
ಪಾಲಕ್ ಮತ್ತು ಇತರ ಹಸಿರು ಎಲೆ ತರಕಾರಿಗಳಲ್ಲಿ ಕಬ್ಬಿಣ ಮತ್ತು ಇತರ ಖನಿಜಾಂಶಗಳು ಹೇರಳವಾಗಿದೆ. ಇದು ಕೂದಲಿನ ಕಿರುಚೀಲಗಳನ್ನು ಆರೋಗ್ಯವಾಗಿಡುತ್ತದೆ. ಈ ಹಸಿರು ತರಕಾರಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತವೆ.
ನಟ್ಸ್ ಮತ್ತು ಸೀಡ್ಸ್
ಬಾದಾಮಿ, ವಾಲ್‌ನಟ್, ಅಗಸೆ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಇ ನೀಡಿ ಕೂದಲನ್ನು ಬಲಪಡಿಸುತ್ತವೆ ಮತ್ತು ನೆತ್ತಿಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.