ಈ ಸಮಯದಲ್ಲಿ ಮಕ್ಕಳಿಗೆ ರಜೆ ಕೊಡುವಂತೆ, ಈ ಕಂಪನಿಯ ಉದ್ಯೋಗಿಗಳಿಗೆ ರಜೆ ಇದೆ. ಹೌದು ಈ ಬಗ್ಗೆ ಫ್ಲಿಪ್‌ಕಾರ್ಟ್ ಉದ್ಯೋಗಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ ನಲ್ಲಿ ಚಳಿ (ಚಳಿಗಾಲದ ವಿರಾಮ) ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಾರೆ. ಇನ್ನು ಕೆಲವು ವರ್ಷದ ಉಳಿದ ರಜೆಯನ್ನು ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಹಾಜರಾತಿ ಕಡಿಮೆಯಾಗುವುದು ಸಾಮಾನ್ಯ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಉದ್ಯೋಗಿಯೊಬ್ಬರು ಹಂಚಿಕೊಂಡಿದ್ದಾರೆ. ಅವರ ಚಳಿಗಾಲದ ಅವಧಿಯನ್ನು ಇ-ಕಾಮರ್ಸ್ ಕಂಪನಿಗಳಲ್ಲಿ “ಕಡಿಮೆ-ಕೀ ಚಳಿಗಾಲದ ವಿರಾಮ” ಎಂದು ಬಣ್ಣಿಸಿದ್ದಾರೆ.
ಫ್ಲಿಪ್‌ಕಾರ್ಟ್‌ನ ಸಹಾಯಕ ಬ್ರಾಂಡ್ ಮ್ಯಾನೇಜರ್ (ಮಾರ್ಕೆಟಿಂಗ್) ಸಿಮ್ರಾನ್ ಎಂ ಭಂಬಾನಿ ಅವರ ಚಳಿಗಾಲದ ರಜೆ ಪ್ರಾರಂಭವಾಗುವ ಮುನ್ನವೇ ನಡೆಯಲಿದೆ. ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಂತು ಬೆಂಗಳೂರಿನ ಚಳಿಯ ಬಗ್ಗೆ ಹಾಗೂ ಅವರಿಗೆ ಸಿಕ್ಕ ರಜೆಯ ಬಗ್ಗೆ ವಿಡಿಯೋ ಮಾಡಿದ್ದಾರೆ. “ರಜೆಯ ಅವಧಿಗೆ ಮುಂಚಿತವಾಗಿ ಮನೆಗೆ ಹೋಗುವುದು. ಚಳಿಗಾಲದಲ್ಲಿ, ವಿಶೇಷವಾಗಿ ಡಿಸೆಂಬರ್ 20 ರ ನಂತರ, ನಮ್ಮ ಉದ್ಯೋಗಿಗಳು ಹೆಚ್ಚಾಗಿ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ತಮ್ಮ ಉಳಿದ ವಾರ್ಷಿಕ ರಜೆಯನ್ನು ಆರಿಸಿಕೊಳ್ಳುತ್ತಾರೆ” ಎಂದು ಹೇಳಿದರು.
ಇದನ್ನೂ ಓದಿ: ಇದು ಭಾರತದ ಅತಿ ದುಬಾರಿ ಚಹಾ: ಕೆಜಿ ಪುಡಿಗೆ 1.15 ಲಕ್ಷ ರೂ.
ಇಲ್ಲಿದೆ ನೋಡಿ ಇನ್ಸ್ಟಾಗ್ರಾಮ್ ಪೋಸ್ಟ್:
ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸಿಮ್ರಾನ್
ಚಳಿ ರಜೆ ಸಿಗುವ ಮುನ್ನವೇ ವಿಮಾನ ಪ್ರಯಾಣ ಮಾಡುತ್ತಿದ್ದೇನೆ. ಏಕೆಂದರೆ ವರ್ಷ ಬಂದ ಕಾರಣ ವಿಮಾನದ ಟಿಕೆಟ್ ದರ ಹೆಚ್ಚಾಗುವ ಕಾರಣ, ಮೊದಲೇ ನಾನು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದರ ನಡುವೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದು ನನಗೆ ಶಾಲೆಯ ಅನುಭವವನ್ನು ನೆನಪಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ರಜೆಯಂತೆ ನಮಗೆ ಈಗ ಚಳಿಯ ರಜೆ ಸಿಗುತ್ತದೆ ಎಂದು ಹೇಳಲಾಗಿದೆ. ನಮಗೆ ಚಳಿ ರಜೆ ಎಂದರೆ ಇಲ್ಲ ಎಂದಲ್ಲ, ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಮುಂದಿನ ವರ್ಷವೇ ಕಚೇರಿಗೆ ಬರುವುದು ಎಂದು ಹೇಳಿದರು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ